ಶುಕ್ರವಾರ, ಏಪ್ರಿಲ್ 26, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚಲಿಸುತ್ತಿರುವ ಕಾರಿನ ಮೇಲೆ ಯುವಕನ ಪುಷ್-ಅಪ್ಸ್​​: ಪ್ರಕರಣ ದಾಖಲಿಸಿದ ಪೊಲೀಸ್

Twitter
Facebook
LinkedIn
WhatsApp
299850654 7852725631436392 7323753165075490145 n 1

ಜನರು ಬೈಕ್​ನಲ್ಲಿ ವ್ಹೀಲಿಂಗ್, ವೇಗದಿಂದ ಕಾರು ಚಲಾಯಿಸುವುದು ಸೇರಿದಂತೆ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡುತ್ತಿರುತ್ತೀರಿ, ಆದರೆ ಈ ವ್ಯಕ್ತಿ ಕಾರಿನ ಮೇಲೆ ಪುಷ್​ ಅಪ್ಸ್​ ಮಾಡಿ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಕಾರಿನ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಕೇವಲ ಪುಷ್​ ಅಪ್ಸ್​ ಮಾತ್ರವಲ್ಲ ಕೆಲವರು ಮಧ್ಯಪಾನ ಮಾಡುತ್ತಿದ್ದರು, ಕಾರಿನ ನಾಲ್ಕೂ ಬದಿಗಳಲ್ಲಿ ದೇಹವನ್ನು ಹೊರಹಾಕಿ ಕಿರುಚಾಡುತ್ತಿದ್ದರು, ನೃತ್ಯ ಮಾಡುತ್ತಿದ್ದರು ಹೀಗಾಗಿ ಪೊಲೀಸರು ದಂಡ ಹಾಕಿದ್ದಾರೆ. ಘಟನೆಯ ಎರಡು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು, ನಂತರ ನಗರ ಪೊಲೀಸರು ಕಾರಿನ ಮಾಲೀಕರಿಗೆ 6,500 ರಊ. ದಂಡವನ್ನು ವಿಧಿಸಿದ್ದಾರೆ.

ಕ್ಲಿಪ್ ಒಂದರಲ್ಲಿ, ಟ್ರಾಫಿಕ್ ನಡುವೆ ವ್ಯಕ್ತಿಯೊಬ್ಬ ಕಾರಿನ ಮೇಲೆ ಮದ್ಯಪಾನ ಮಾಡುತ್ತಿದ್ದ ಎಂದು ಹೇಳಲಾಗಿದೆ. ಕಾರು ಚಲಿಸುತ್ತಿರುವಾಗ ಅವರ ಇಬ್ಬರು ಸ್ನೇಹಿತರು ನಂತರ ತಮ್ಮ ದೇಹದ ಮೇಲ್ಭಾಗವನ್ನು ಕಾರಿನಿಂದ ಹೊರತೆಗೆದಿದ್ದಾರೆ, ವಾಹನದ ಮೇಲ್ಛಾವಣಿಯ ಮೇಲೆ ಕುಳಿತಿರುವ ವ್ಯಕ್ತಿಯು ಬಾಟಲಿಯನ್ನು ಹಿಡಿದಿರುವುದು ಕಂಡುಬರುತ್ತದೆ.

ಅದೇ ಘಟನೆಯ ಇನ್ನೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ಪುಷ್-ಅಪ್ ಮಾಡುತ್ತಿರುವುದನ್ನು ತೋರಿಸುತ್ತದೆ. ನಂತರ, ಇತರ ಮೂವರು ಪುರುಷರು ಕಾರಿನ ಕಿಟಕಿಯ ಮೂಲಕ ತಲೆಯನ್ನು ಹೊರಗೆ ಹಾಕುತ್ತಿರುವುದು ಕಂಡುಬಂದಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ 6,500 ರೂ. ಮೊತ್ತದ ಚಲನ್ ಅನ್ನು ನೀಡಲಾಗಿದೆ.

ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಲೋಕೇಶ್ ಎಂಬಾತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆಗಳಲ್ಲಿ ಈ ರೀತಿಯ ಕೃತ್ಯವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಸಂಚಾರ ವಿಭಾಗದ ಡಿಸಿಪಿ ವೀರೇಂದ್ರ ವಿಜ್ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ