ಚಲಿಸುತ್ತಿರುವ ಕಾರಿನ ಮೇಲೆ ಯುವಕನ ಪುಷ್-ಅಪ್ಸ್: ಪ್ರಕರಣ ದಾಖಲಿಸಿದ ಪೊಲೀಸ್
ಜನರು ಬೈಕ್ನಲ್ಲಿ ವ್ಹೀಲಿಂಗ್, ವೇಗದಿಂದ ಕಾರು ಚಲಾಯಿಸುವುದು ಸೇರಿದಂತೆ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡುತ್ತಿರುತ್ತೀರಿ, ಆದರೆ ಈ ವ್ಯಕ್ತಿ ಕಾರಿನ ಮೇಲೆ ಪುಷ್ ಅಪ್ಸ್ ಮಾಡಿ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಕಾರಿನ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಕೇವಲ ಪುಷ್ ಅಪ್ಸ್ ಮಾತ್ರವಲ್ಲ ಕೆಲವರು ಮಧ್ಯಪಾನ ಮಾಡುತ್ತಿದ್ದರು, ಕಾರಿನ ನಾಲ್ಕೂ ಬದಿಗಳಲ್ಲಿ ದೇಹವನ್ನು ಹೊರಹಾಕಿ ಕಿರುಚಾಡುತ್ತಿದ್ದರು, ನೃತ್ಯ ಮಾಡುತ್ತಿದ್ದರು ಹೀಗಾಗಿ ಪೊಲೀಸರು ದಂಡ ಹಾಕಿದ್ದಾರೆ. ಘಟನೆಯ ಎರಡು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು, ನಂತರ ನಗರ ಪೊಲೀಸರು ಕಾರಿನ ಮಾಲೀಕರಿಗೆ 6,500 ರಊ. ದಂಡವನ್ನು ವಿಧಿಸಿದ್ದಾರೆ.
ಕ್ಲಿಪ್ ಒಂದರಲ್ಲಿ, ಟ್ರಾಫಿಕ್ ನಡುವೆ ವ್ಯಕ್ತಿಯೊಬ್ಬ ಕಾರಿನ ಮೇಲೆ ಮದ್ಯಪಾನ ಮಾಡುತ್ತಿದ್ದ ಎಂದು ಹೇಳಲಾಗಿದೆ. ಕಾರು ಚಲಿಸುತ್ತಿರುವಾಗ ಅವರ ಇಬ್ಬರು ಸ್ನೇಹಿತರು ನಂತರ ತಮ್ಮ ದೇಹದ ಮೇಲ್ಭಾಗವನ್ನು ಕಾರಿನಿಂದ ಹೊರತೆಗೆದಿದ್ದಾರೆ, ವಾಹನದ ಮೇಲ್ಛಾವಣಿಯ ಮೇಲೆ ಕುಳಿತಿರುವ ವ್ಯಕ್ತಿಯು ಬಾಟಲಿಯನ್ನು ಹಿಡಿದಿರುವುದು ಕಂಡುಬರುತ್ತದೆ.
They have no fear of anyone's life and neither of Gurgaon trafficpolice @TrafficGGM
— Pradeepdubey (@dubey_100) May 30, 2023
Vichle no HR72F6692@DC_Gurugram @TrafficGGM@cmohry @gurgaonpolice pic.twitter.com/pM2NeypUdR
ಅದೇ ಘಟನೆಯ ಇನ್ನೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ಪುಷ್-ಅಪ್ ಮಾಡುತ್ತಿರುವುದನ್ನು ತೋರಿಸುತ್ತದೆ. ನಂತರ, ಇತರ ಮೂವರು ಪುರುಷರು ಕಾರಿನ ಕಿಟಕಿಯ ಮೂಲಕ ತಲೆಯನ್ನು ಹೊರಗೆ ಹಾಕುತ್ತಿರುವುದು ಕಂಡುಬಂದಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ 6,500 ರೂ. ಮೊತ್ತದ ಚಲನ್ ಅನ್ನು ನೀಡಲಾಗಿದೆ.
ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಲೋಕೇಶ್ ಎಂಬಾತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆಗಳಲ್ಲಿ ಈ ರೀತಿಯ ಕೃತ್ಯವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಸಂಚಾರ ವಿಭಾಗದ ಡಿಸಿಪಿ ವೀರೇಂದ್ರ ವಿಜ್ ಹೇಳಿದ್ದಾರೆ.