ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ರೈಲ್ವೆ ರಕ್ಷಣಾ ಪಡೆ ಪೇದೆ!
ಜೈಪುರ: ಮಹಾರಾಷ್ಟ್ರದ (Maharashtra0 ಪಾಲ್ಘರ್ ರೈಲ್ವೆ ನಿಲ್ದಾಣದ ಬಳಿ ಚಲಿಸುತ್ತಿದ್ದ ಜೈಪುರ-ಮುಂಬೈ ಎಕ್ಸ್‌ಪ್ರೆಸ್ (Jaipur-Mumbai Express) ರೈಲಿನಲ್ಲಿ ರೈಲ್ವೆ ರಕ್ಷಣಾ ಪಡೆ (RPF) ಪೇದೆ ಗುಂಡು (Bullet) ಹಾರಿಸಿದ್ದು, ಆರ್‌ಪಿಎಫ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಳಗ್ಗಿನ ಜಾವ 5 ಗಂಟೆಯ ಸುಮಾರಿಗೆ ಜೈಪುರದಿಂದ ಮುಂಬೈಗೆ ರೈಲು ಚಲಿಸುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಪೇದೆ ಸಬ್ ಇನ್ಸ್ಪೆಕ್ಟರ್ ಜೊತೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದಾನೆ. ಈ ವೇಳೆ ರೈಲಿನಲ್ಲಿದ್ದ ಕೆಲ ಪ್ರಯಾಣಿಕರು ಅವರಿಬ್ಬರ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೇದೆ ಕೋಪಗೊಂಡು ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿಗಳು ತಿಳಿಸಿವೆ.
ಆರೋಪಿ ಆರ್‌ಪಿಎಫ್ ಪೇದೆಯನ್ನು ಚೇತನ್ ಸಿಂಗ್ ಎಂದು ಗುರುತಿಸಲಾಗಿದ್ದು, ಘಟನೆಯ ಬಳಿಕ ರೈಲಿನಿಂದ ಜಿಗಿದು ಪರಾರಿಯಾಗಲು ಯತ್ನಿಸಿದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ರಾತ್ರೋ ರಾತ್ರಿ ರೈಲ್ವೇ ಕಂಬಿಗಳ ಸಾಗಾಟ – ಮಾಲು ಸಮೇತ ವಾಹನ ವಶಕ್ಕೆ
ಬೆಂಗಳೂರು: ನಗರದಲ್ಲಿ ರೈಲ್ವೇ (Train) ಹಳಿಯ ಕಂಬಿಗಳನ್ನು ರಾತ್ರಿ ವೇಳೆಯಲ್ಲಿ ಕದ್ದು ಮಾರಾಟ ಮಾಡುತ್ತಿರುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ಕಾರ್ ಮಿಲರಾಮ್ ರೈಲ್ವೇ ನಿಲ್ದಾಣದಿಂದ ಕೊಡತಿಗೇಟ್ ಬಳಿ ಹಳಿಯ ಕಂಬಿಗಳನ್ನು ಸಾಗಾಟ ಮಾಡುತ್ತಿದ್ದ ಐಷರ್ ಗೂಡ್ಸ್ ವಾಹನವನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಸ್ಥಳೀಯ ಯುವಕರ ತಂಡದಿಂದ ರೈಲ್ವೇ ಕಂಬಿಗಳನ್ನು ಸಾಗಾಟ ಮಾಡಲಾಗುತ್ತಿತ್ತು. ವಶಕ್ಕೆ ಪಡೆದ ವಾಹನದ ಮಾಲೀಕ ಪೆರಿಯಣ್ಣನ್ ಎಂಬುದಾಗಿ ತಿಳಿದು ಬಂದಿದೆ. ವಾಹನವನ್ನು ತಡೆದಾಗ ಸೂಕ್ತ ದಾಖಲೆಯನ್ನು ತೋರಿಸದ ಹಿನ್ನೆಲೆಯಲ್ಲಿ ತಂಡದ ಮೇಲೆ ಅನುಮಾನ ಮೂಡಿದೆ. ಇದರಿಂದಾಗಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ (Bengaluru) ತಮಿಳುನಾಡಿಗೆ ಹೊಸ ರೈಲ್ವೇ ಹಳಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಕಂಬಿಗಳನ್ನು ಕೊಡತಿಗೇಟ್ ಬಳಿಯ ಗುಜರಿ ಗೋದಾಮಿಗೆ ಸಾಗಾಟ ಮಾಡಲಾಗುತ್ತಿತ್ತು. ಬಳಿಕ ಅಲ್ಲಿಂದ ಆಂಧ್ರಪ್ರದೇಶದ ಹಿಂದೂಪುರಕ್ಕೆ ಸಾಗಾಟ ಮಾಡಲು ಯೋಜಿಸಲಾಗಿತ್ತು. ವಾಹನದಲ್ಲಿ ಪತ್ತೆಯಾದ ಕಂಬಿಗಳನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಲಾಗಿತ್ತು.
ಘಟನಾ ಸ್ಥಳಕ್ಕೆ ವರ್ತೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕೃತ್ಯದಲ್ಲಿ ಹಲವರು ಕೈವಾಡ ಇರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.