ಮಾನ್ಸೂನ್ ಟೂರಿಸಂ: ಪ್ರವಾಸಿಗರನ್ನು ಸೆಳೆಯುತಿದೆ ರಾಣಿಪುರಂ, ಕರಿಕೆ ಫಾಲ್ಸ್
Twitter
Facebook
LinkedIn
WhatsApp
![WhatsApp Image 2023 06 20 at 13.08.48](https://urtv24.com/wp-content/uploads/2023/06/WhatsApp-Image-2023-06-20-at-13.08.48.jpg)
ಸುಳ್ಯ: ಮಾನ್ಸೂನ್ ಟೂರಿಸಂ ಈಗ ನಡೆಯುತ್ತಿದೆ. ಆದರೆ ಸುಳ್ಯದ 30 ಕಿಲೋಮೀಟರ್ ಸನಿಹದಲ್ಲಿರುವ ರಾಣಿಪುರಂ ಹಾಗೂ ಕರಿಕೆ ಪ್ರವಾಸಿ ಸ್ಥಳಕ್ಕೆ ಈಗ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.
![mdk12sun07](https://urtv24.com/wp-content/uploads/2023/06/mdk12sun07.jpeg)
ಮಾನ್ಸೂನ್ ಸಮಯದಲ್ಲಿ ಕರಿಕೆಯ ಹತ್ತಿರದಲ್ಲಿರುವ ರಾಣಿ ಪುರಂ ನಿಸರ್ಗಧಾಮ ಅದ್ಭುತವಾಗಿ ಗೋಚರಿಸುತ್ತದೆ. ಸುಳ್ಯದಿಂದ ಕೇವಲ 30km ದೂರದಲ್ಲಿದೆ ರಾಣಿಪುರಂ.
ಅದೇ ರೀತಿ ಕರಿಕೆ ಭಾರತದ ಜಲಪಾತಗಳ ಗ್ರಾಮ ಎಂದು ಕರೆಸಿಕೊಂಡಿದೆ. ಈ ಗ್ರಾಮದಲ್ಲಿ ನೂರಾರು ಜಲಪಾತಗಳು ನಮ್ಮನ್ನು ಆಕರ್ಷಿಸುತ್ತಿವೆ.
![ranipuram hills](https://urtv24.com/wp-content/uploads/2023/06/ranipuram-hills.jpg)
ಕರಿಕೆ ಮತ್ತು ಭಾಗಮಂಡಲದ ನಡುವೆ ಇರುವ ಹೆದ್ದಾರಿಯಲ್ಲಿ ನೂರಾರು ಜಲಪಾತಗಳು ಈ ಸಂದರ್ಭದಲ್ಲಿ ಮನಮೋಹಕವಾಗಿ ರಾರಾಜಿಸುತ್ತಿವೆ.
ಮಾನ್ಸೂನ್ ಪ್ರವಾಸಕ್ಕೆ ಸುಳ್ಯದ ಹತ್ತಿರದಲ್ಲಿರುವ ರಾಣಿಪುರಂ ಹಾಗೂ ಕರಿಕೆ ಸೂಕ್ತವಾದ ಸ್ಥಳ. ಮಂಗಳೂರಿನಿಂದ ಕಾಸರಗೋಡು ಮೂಲಕವು ರಾಣಿಪುರಂ ಹಾಗೂ ಕರಿಕೆ ತಲುಪಬಹುದು. ಅದೇ ರೀತಿ ಸುಳ್ಯ ದಿಂದ 30 ಕಿಲೋಮೀಟರ್ ದೂರದಲ್ಲಿ ನಾವು ರಾಣಿ ಪುರಂ ಅನ್ನು ತಲುಪಬಹುದು.