ಶುಕ್ರವಾರ, ಏಪ್ರಿಲ್ 26, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಣ ಪಡೆಯುವಾಗ ಸ್ಕೂಲ್ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ!

Twitter
Facebook
LinkedIn
WhatsApp
images 22

ಬೆಂಗಳೂರು (ಮೇ.31): ಬೆಂಗಳೂರಿನಲ್ಲಿ ಸ್ಕೂಲ್ ಪ್ರಿನ್ಸಿಪಾಲ್  ಲೋಕಾಯುಕ್ತ ಬಲೆ ಬಿದ್ದಿದ್ದಾನೆ. ಲೋಕಾಯುಕ್ತ ಅಧಿಕಾರಿಗಳಿಂದ ಪ್ರಿನ್ಸಿಪಾಲ್ ನಾರಾಯಾಣ್ ಟ್ರ್ಯಾಪ್ ಆಗಿದ್ದು, ದಿವ್ಯಾ ಎಂಬುವವರಿಂದ 5 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.  ರಾಜಾಜಿನಗರದಲ್ಲಿರುವ ಬಸವೇಶ್ವರ ಬಾಲಕರ ಪೌಢಶಾಲೆಯಲ್ಲಿ ಈ  ಘಟನೆ ನಡೆದಿದ್ದು, ಪ್ರಿನ್ಸಿಪಾಲ್  9 ನೇ ತರಗತಿ ಫಲಿತಾಂಶ ತಡೆ ಹಿಡಿದಿದ್ದ ಹೀಗಾಗಿ ಪಾಸ್ ಮಾಡಿ ಟಿ.ಸಿ.ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಐದು ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾನೆ. ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆದಿದೆ.

ಲೋಕಾಯುಕ್ತ ಬಲೆಗೆ ಪಿಡಿಒ
ಹು​ಬ್ಬ​ಳ್ಳಿ: ಗ್ರಾ​ಮ​ಸ್ಥ​ರೊ​ಬ್ಬರ ಕೆಲಸ ಮಾಡಿಕೊ​ಡಲು ಹ​ಣದ ಬೇ​ಡಿಕೆ ಇ​ಟ್ಟಿದ್ದ ತಾ​ಲೂ​ಕಿನ ಅ​ದ​ರ​ಗುಂಚಿ ಗ್ರಾಪಂ ಪಿ​ಡಿಒನನ್ನು ಲೋ​ಕಾ​ಯುಕ್ತ ಅಧಿ​ಕಾ​ರಿ​ಗಳು ಸೋ​ಮ​ವಾರ ತಮ್ಮ ಖೆ​ಡ್ಡಾಕ್ಕೆ ಕೆ​ಡ​ವಿ​ದ್ದಾರೆ.

ಅ​ದ​ರ​ಗುಂಚಿ ಗ್ರಾ​ಪಂ ಪಿ​ಡಿಒ ಮ​ಕ್ತುಂಸಾಬ ಕ​ರ​ಡಿ​ಗು​ಡ್ಡದ ಎಂಬು​ವರೇ ಲೋ​ಕಾ​ಯುಕ್ತ ಬಲೆ ಬಿ​ದ್ದ​ವರು. ಗ್ರಾ​ಮ​ದಲ್ಲಿ ಇ-ಸ್ವತ್ತು ಮಾ​ಡಿ​ಕೊ​ಡಲು ಹ​ಣದ ಬೇ​ಡಿಕೆ ಇ​ಟ್ಟಿದ್ದ ಹಿ​ನ್ನೆ​ಲೆ​ಯಲ್ಲಿ ಗ್ರಾ​ಮಸ್ಥ​ರೊ​ಬ್ಬರು ಲೋ​ಕಾ​ಯುಕ್ತ ಮೊ​ರೆ ಹೋ​ಗಿ​ದ್ದರು. ಈ ಬಗ್ಗೆ ಖ​ಚಿತ ಮಾ​ಹಿತಿ ಮೇ​ರೆಗೆ ದಾಳಿ ನ​ಡೆ​ಸಿದ ಲೋ​ಕಾ​ಯುಕ್ತ ಅ​ಧಿಕಾ​ರಿ​ಗಳು ಪಿ​ಡಿಒ​ನನ್ನು ಬ​ಲೆಗೆ ಕೆ​ಡ​ವಿ​ದ್ದಾರೆ.

ಗ್ರಾಪಂನ​ಲ್ಲಿಯೇ ಪಿ​ಡಿಒ ಕ​ರ​ಡಿ​ಗು​ಡ್ಡದ ಅ​ವ​ರನ್ನು ಸು​ದೀರ್ಘ ವಿ​ಚಾ​ರ​ಣೆಗೆ ಒ​ಳ​ಪ​ಡಿ​ಸಿ​ದರು. ರಾ​ತ್ರಿ​ಯ​ವ​ರೆಗೂ ವಿ​ಚಾ​ರ​ಣೆಗೆ ಒ​ಳ​ಪ​ಡಿ​ಸಿದ​ರ​ಲ್ಲದೇ ಗ್ರಾಪಂದಲ್ಲಿನ ಇ-ಸ್ವ​ತ್ತು ಕ​ಡ​ತ​ಗ​ಳನ್ನು ಮತ್ತು ಇ​ತರೆ ​ಮಾ​ಹಿತಿ ಕಲೆ ಹಾ​ಕಿ​ದರು. ಈ ವೇಳೆ ಗ್ರಾ​ಪಂ ಬಳಿ ಗ್ರಾ​ಮ​ಸ್ಥರು ಹೆ​ಚ್ಚಿನ ಸಂಖ್ಯೆ​ಯಲ್ಲಿ ಜ​ಮೆ​ಯಾ​ಗಿ​ದ್ದ​ರಿಂದ ಕೆಲ ಹೊತ್ತು ಗೊಂದಲ ವಾ​ತಾ​ವ​ರಣ ಸಹ ನಿ​ರ್ಮಾ​ಣ​ಗೊಂಡಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ