ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಹೇಂದ್ರ ಸಿಂಗ್ ಧೋನಿಗೆ ಹಣಕಾಸಿನ ನೆರವು ನೀಡಿದ್ದ ಅಂಬರೀಶ್.! ಸಂಸದೆ ಸುಮಲತಾ ಏನಂದರು ಗೊತ್ತೆ?

Twitter
Facebook
LinkedIn
WhatsApp
ಮಹೇಂದ್ರ ಸಿಂಗ್ ಧೋನಿಗೆ ಹಣಕಾಸಿನ ನೆರವು ನೀಡಿದ್ದ ಅಂಬರೀಶ್.! ಸಂಸದೆ ಸುಮಲತಾ ಏನಂದರು ಗೊತ್ತೆ?

ರೆಬೆಲ್ ಸ್ಟಾರ್ ಅಂಬರೀಶ್ (Ambareesh)… ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಕಲಿಯುಗದ ಕರ್ಣನೆಂದೇ ಬಿಂಬಿತರಾಗಿದ್ದ ಅಂಬರೀಶ್ ಅಲಿಯಾಸ್ ಅಮರನಾಥ್, ಕರ್ನಾಟಕ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳ ಬಳಗ ಹಾಗೂ ಸಾಕಷ್ಟು ಮಿತ್ರ ಬಳಗವನ್ನು ಹೊಂದಿದ್ದಂತಹ ನಟ. ಬದುಕಿರುವವರೆಗೂ ಕಷ್ಟ ಎಂದವರ ನೆರವಿಗೆ ನಿಲ್ಲುತ್ತಿದ್ದ ಅಂಬರೀಶ್ ಅವರಿಂದ ಸಹಾಯ ಪಡೆದವರ ಪಟ್ಟಿಯಲ್ಲಿ ಸಿನಿಮಾ ನಟ/ ನಟಿಯರು, ರಾಜಕೀಯ ಪುಡಾರಿಗಳು, ಬಡ ಕ್ರೀಡಾ ಸ್ಪರ್ಧಿಗಳು ಸೇರಿದ್ದಾರೆ. ಅವರಿಂದ ಸಹಾಯ ಪಡೆದವರು ಇಂದು ಬದುಕಿನ ಉತ್ತುಂಗದಲ್ಲಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ (Team India) ಮಾಜಿ ನಾಯಕ ಹಾಗೂ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (MS Dhoni) ಕೂಡ ಒಬ್ಬರು.

ತನ್ನ ಚಾಣಾಕ್ಷ ನಾಯಕತ್ವದಿಂದ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಮಹೇಂದ್ರ ಸಿಂಗ್ ಧೋನಿ ತೀರ ಬಡ ಕುಟುಂಬದಿಂದ ಬಂದವರು. ಇದನ್ನು ನಾವು ಅವರ ಬಯೋಗ್ರಫಿಯಲ್ಲೇ ನೋಡಿದ್ದೇವೆ. ಅಂತಹ ಧೋನಿಗೆ ಅವರ ವೃತ್ತಿ ಬದುಕಿನ ಆರಂಭದಲ್ಲಿ ಕರ್ನಾಟಕದ ಸೂಪರ್​ಸ್ಟಾರ್ ಅಂಬರೀಶ್ ಹಣ ಸಹಾಯ ಮಾಡಿದ್ದರು ಎಂಬ ಸುದ್ದಿ ಬಹಳಷ್ಟು ಹಿಂದೆಯೇ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಆ ಸುದ್ದಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ಅಂಬರೀಶ್ ಅವರ ಪತ್ನಿ ಹಾಗೂ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಈ ವಿಚಾರವನ್ನು ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ತಮ್ಮ ಪೇಸ್​ಬುಕ್ ಖಾತೆಯಲ್ಲಿ ಅಂಬರೀಶ್ ಅವರು ಧೋನಿಗೆ ಸಹಾಯ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಸುಮಲತಾ ಅವರು, ಬೆಲೆಯನ್ನೇ ಕಟ್ಟಲಾಗದ ಫೋಟೋವೊಂದು ಇಂದು ನನಗೆ ಸಿಕ್ಕಿದೆ. 2006 ರಲ್ಲಿ , ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂಬರೀಶ್ ಅವರು 2 ಲಕ್ಷ ರೂಗಳ ಚೆಕ್ ಅನ್ನು ಅಂದಿನ ಉದಯೋನ್ಮುಖ ಪ್ರತಿಭೆ ಎಂಎಸ್ ಧೋನಿ ಅವರಿಗೆ ನೀಡಿದ್ದರು.

ವಾಸ್ತವವಾಗಿ ಈ ಘಟನೆಗೂ ಮುನ್ನ ಅಂಭಿ ಅವರು ಧೋನಿಯವರ ತಂದೆಯ ಸಂದರ್ಶನವೊಂದನ್ನು ನೋಡಿದ್ದರು. ಅದರಲ್ಲಿ ಧೋನಿ ಜನಪ್ರಿಯತೆಯ ಬಗ್ಗೆ ಮಾತನಾಡಿದ್ದ ಧೋನಿ ಅವರ ತಂದೆ, ಧೋನಿ ಈಗ ಜನಪ್ರಿಯವಾಗುತ್ತಿದ್ದಾರೆ. ಹೀಗಾಗಿ ಧೋನಿಯವರನ್ನು ಸಂದರ್ಶಿಸಲು ಸಾಕಷ್ಟು ಸಂದರ್ಶಕರು ಮನೆಗೆ ಬರುತ್ತಿದ್ದಾರೆ. ಆದರೆ ಅವರು ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಇದು ಅಪಾರ ಕ್ರೀಡಾ ಮತ್ತು ಕ್ರಿಕೆಟ್ ಅಭಿಮಾನಿಯಾಗಿದ್ದ ಅಂಬರೀಶ್ ಅವರನ್ನು ಬೆಚ್ಚಿಬೀಳಿಸಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಧೋನಿ ಪಂದ್ಯವನ್ನಾಡಲು ಬಂದಿದ್ದಾಗ ಅಂಬರೀಶ್ ತಮ್ಮ ಕೈಲಾದ ಸಹಾಯ ಮಾಡಿದ್ದರು. ಆ ಸಮಯದಲ್ಲಿ ತೆಗೆದಿದ್ದ ಫೋಟೋವನ್ನು ನಾನು ಕಳೆದುಕೊಂಡಿದ್ದೆ. ಅದಕ್ಕಾಗಿ ಸಾಕಷ್ಟು ಹುಡುಕಾಟ ಮಾಡಿದ್ದೇವು. ಇಂದು ಆ ಫೋಟೋ ಸಿಕ್ಕಿತು. ಹಾಗಾಗಿ ಅಂದಿನ ಘಟನೆಯನ್ನು ಮತ್ತೊಮ್ಮೆ ಸ್ಮರಿಸಲು ಸಾಧ್ಯವಾಯಿತು ಎಂದು ಸುಮಲತಾ ಬರೆದುಕೊಂಡಿದ್ದಾರೆ.

ವಾಸ್ತವವಾಗಿ ಏಕದಿನ ಸರಣಿಗಾಗಿ ಶ್ರೀಲಂಕಾ, ಭಾರತ ಪ್ರವಾಸ ಮಾಡಿತ್ತು. ಆ ಪ್ರವಾಸದಲ್ಲಿ ಒಂದು ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಧೋನಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ವೇಳೆ ಪಂದ್ಯ ವೀಕ್ಷಿಸಲು ಹೋಗಿದ್ದ ಅಂಬರೀಶ್, ಧೋನಿಯವರ ಆರ್ಥಿಕ ಪರಿಸ್ಥಿತಿಯನ್ನು ಈ ಮೊದಲೇ ಅರಿತಿದ್ದರು. ಹೀಗಾಗಿ ಧೋನಿ ಅವರಿಗೆ 2 ಲಕ್ಷ ರೂಗಳ ಚೆಕ್ ಅನ್ನು ನೀಡಿ, ಬಡ ಕ್ರಿಕೆಟಿಗನ ಬೆನ್ನಿಗೆ ನಿಂತಿದ್ದರು. ಈ ವಿಚಾರ ತಡವಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಒಂಬತ್ತು ವರ್ಷಗಳ ಹಿಂದೆ ಮತದಾರ ನರೇಂದ್ರ ಮೋದಿಯವರಿಗೆ ನೀಡಿದ ಒಂದು ವೋಟು ಭಾರತದ ಚಿತ್ರಣವನ್ನು ಬದಲಾಯಿಸಿತು: ತೇಜಸ್ವೀ ಸೂರ್ಯ

ಬೆಂಗಳೂರು: ರಾಜ್ಯ ಬಿಜೆಪಿ ಘಟಕ ಮತದಾರ ಚೇತನ ಮಹಾ ಚೇತನ ಅಭಿಯಾನವನ್ನು ಆರಂಭಿಸಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje), ಸಂಸದ ತೇಜಸ್ವೀ ಸೂರ್ಯ (Tejasvi Surya) ಮತ್ತು ಪಕ್ಷದ ಕೆಲ ನಾಯಕರು ಭಾಗವಹಿಸದ್ದರು. ಕಾರ್ಯಕ್ರಮದಲ್ಲಿ ಮಾತಾಡಿದ ತೇಜಸ್ವೀ ಸೂರ್ಯ ಮತದಾನದ ಮಹತ್ವವನ್ನು ವಿವರಿಸಿದರು. ಒಂಬತ್ತು ವರ್ಷಗಳ ಹಿಂದೆ ದೇಶದ ಮತದಾರ ನರೇಂದ್ರ ಮೋದಿ (Narendra Modi) ಅವರಿಗೆ ನೀಡಿದ ಒಂದು ವೋಟು ದೇಶದ ಚಿತ್ರಣವನ್ನು ಬದಲಿಸಿದೆ ಎಂದು ಅವರು ಹೇಳಿದರು.

ಮತದಾರ ಪ್ರಜ್ಞಾವಂತಿಕೆಯಿಂದ ನೀಡಿದ ಮತ ಭಾರತದ ಸುಮಾರು 14 ಕೋಟಿ ಬಡವರನ್ನು ಬಡತನದ ರೇಖೆಯಿಂದ ಮೇಲೆತ್ತಲು ಸಾಧ್ಯವಾಯಿತು, ಕೋಟ್ಯಾಂತರ ಮನೆಗಳಲ್ಲಿ ಶೌಚಾಲಯ ನಿರ್ಮಾಣಗೊಂಡು ಮಹಿಳೆಯರ ಗೌರವ ಉಳಿಯುವಂತಾಯಿತು, ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಅದರ ಹುಟ್ಟಡಗಿಸಲು ಸಾಧ್ಯವಾಯಿತು, ಗಡಿಭಾಗದಲ್ಲಿ ಚೀನಾ ಅತಿಕ್ರಮಣ ನಡೆಸದಂತೆ ಹದ್ದುಬಸ್ತಿನಲ್ಲಿಡುವಂತಾಯಿತು, ಚಂದ್ರನ ಮೇಲೆ ಭಾರತ ಕೀರ್ತಿ ಪತಾಕೆ ಹಾರಿಸುವಂತಾಯಿತು, ನಮ್ಮ ಅಥ್ಲೀಟ್ ಗಳು ಒಲಂಪಿಕ್ಸ್ ನಲ್ಲಿ ಪದಕಗಳನ್ನು ಗೆಲ್ಲುವುದು ಸಾಧ್ಯವಾಯಿತು, ಬಡವರ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲದ ಸಿಲಿಂಡರ್ ಗಳು ಲಭ್ಯವಾದವು ಎಂದು ತೇಜಸ್ವೀ ಸೂರ್ಯ ಹೇಳಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ