ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಾಕ್‌ ಮಾಜಿ ಆಟಗಾರನಿಗೆ ಮೊಹಮ್ಮದ್ ಶಮಿ ಕೌಂಟರ್; ಸಖತ್‌ ವೈರಲ್!

Twitter
Facebook
LinkedIn
WhatsApp
ಪಾಕ್‌ ಮಾಜಿ ಆಟಗಾರನಿಗೆ ಮೊಹಮ್ಮದ್ ಶಮಿ ಕೌಂಟರ್; ಸಖತ್‌ ವೈರಲ್!

ಮೊಹಮ್ಮದ್ ಶಮಿ ವಿಶ್ವಕಪ್‌ 2023ರಲ್ಲಿ ಭರ್ಜರಿ ಬೌಲಿಂಗ್‌ ಮೂಲಕ ಮಿಮಚು ಹರಿಸುತ್ತಿದ್ದಾರೆ. ಶಮಿ ಕೇವಲ 4 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರು 16 ವಿಕೆಟ್ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಿದ್ದಾರೆ.

ಟೀಂ ಇಂಡಿಯಾದ ಈ ಮಾರಕ ವೇಗಿ ದಾಳಿಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಜಾ ಟೀಂ ಇಂಡಿಯಾವನ್ನು ಚೀಟರ್ಸ್ ಎಂದು ಕರೆದಿದ್ದರು. ಇದರ ನಂತರ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಸರಿಯಾದ ಕೌಂಟರ್ ನೀಡಿದ್ದಾರೆ.

ಮೊಹಮ್ಮದ್ ಶಮಿ ವಿಶ್ವಕಪ್‌ನ ಮೊದಲ 4 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಭಾಗವಾಗಿರಲಿಲ್ಲ. ಅವರು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದರು. ಮೊದಲ ಪಂದ್ಯದಲ್ಲೇ ತಮ್ಮ ಛಾಫು ಮೂಡಿಸಿದರು. ಇದಾದ ಬಳಿಕ ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಿಗೆ ಕಾಡಿದರು.

ಶಮಿ 3 ಪಂದ್ಯಗಳಲ್ಲಿ ಎರಡು ಬಾರಿ 5 ವಿಕೆಟ್ ಪಡೆದರು. 4 ಪಂದ್ಯಗಳಲ್ಲಿ ಒಟ್ಟು 16 ವಿಕೆಟ್ ಪಡೆದಿದ್ದಾರೆ. ಶಮಿಯ ಈ ಪ್ರದರ್ಶನವನ್ನು ಹಸನ್ ರಜಾಗೆ ಕಷ್ಟವಾಗಿರಬಹುದು. ಕಾರ್ಯಕ್ರಮವೊಂದರಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಶಾಕಿಂಗ್‌ ಹೇಳಿಕೆ ನೀಡಿದ್ದರು.

ಹಸನ್ ರಾಝಾ ಮಾತನಾಡಿ, ‘ನಮ್ಮ ಕಾಲದಲ್ಲಿ ಒಂದೇ ಚೆಂಡು ಇರುತ್ತಿತ್ತು. ಆದರೆ ಇಲ್ಲಿ ಚೆಂಡಿನ ಮೇಲೆ ಮತ್ತೊಂದು ಪದರವನ್ನು ನೀಡಲಾಗಿದೆ ಎಂದು ತೋರುತ್ತದೆ. ಚೆಂಡನ್ನು ಪರೀಕ್ಷಿಸಬೇಕು ಎಂದು ನಾನು ಭಾವಿಸುತ್ತೇನೆ. ಶಮಿ ಮತ್ತು ಸಿರಾಜ್ ಅವರ ಬೌಲಿಂಗ್ ಬಗ್ಗೆ ಹಸನ್ ರಜಾ ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು.

ಈ ಇಬ್ಬರೂ ಬೌಲರ್‌ಗಳು ಬಾಲ್‌ನಿಂದಾಗಿ ಲಾಭ ಪಡೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದರು. ಆದರೆ ಇದಕ್ಕೆ ಇದೀಗ ಮೊಹಮ್ಮದ್ ಶಮಿ ರಾಝಾಗೆ ಸಖತ್‌ ಆಗಿ ತಿರುಗೇಟು ನೀಡಿದ್ದಾರೆ.

ಹೌದು, ಮೊಹಮ್ಮದ್ ಶಮಿ ಇನ್ಸ್ಟಾಗ್ರಾಮ್ ಸ್ಟೋರಿ ಒಂದನ್ನು ಹಾಕಿದ್ದು, ‘ನಾಚಿಕೆಯಾಗಬೇಕು ಸ್ನೇಹಿತ. ಇತರರ ಯಶಸ್ಸನ್ನು ಒಮ್ಮೆ ಆನಂದಿಸಿ. ಇದು ಐಸಿಸಿ ವಿಶ್ವಕಪ್, ನಿಮ್ಮ ಸ್ಥಳೀಯ ಟೂರ್ನಿಯಲ್ಲ. ನೀವೂ ಒಬ್ಬ ಆಟಗಾರನಾಗಿದ್ದಿರಿ ಎನ್ನುವುದನ್ನು ಮರೆಯದಿರಿ ಎಂದು ಬರೆದಿದ್ದಾರೆ.

ಈ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಹಸನ್ ರಜಾ ಹೇಳಿಕೆಗೆ ಮೊಹಮ್ಮದ್ ಶಮಿ ತಕ್ಕ ಉತ್ತರವನ್ನು ನೀಡುತ್ತಿದ್ದಾರೆ. ನವೆಂಬರ್ 12 ರಂದು ನೆದರ್ಲೆಂಡ್ಸ್ ವಿರುದ್ಧ ಟೀಂ ಇಂಡಿಯಾದ ತನ್ನ ಕೊನೆಯ ಲೀಗ್‌ ಪಂದ್ಯ ಆಡಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ