ಕುಗ್ಗದ ಮೋದಿ ಜನಪ್ರಿಯತೆ. ಚುನಾವಣೆ ಸಭೆಗಳಿಗೆ ಕಳೆದ ಚುನಾವಣೆಗಳಿಗಿಂತ ಹೆಚ್ಚು ಜನರು; ತಲೆಕೆಡಿಸಿಕೊಂಡ ಕಾಂಗ್ರೆಸ್!
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ ಎಂದು ಮಾಧ್ಯಮದ ವಿಶ್ಲೇಷಣೆಗಳು ಹೇಳುತ್ತಿವೆ.
ಇತ್ತೀಚೆಗೆ ಮೋದಿ ನಡೆಸಿದ ಹಲವಾರು ಸಭೆಗಳಲ್ಲಿ ಕಳೆದ ಎರಡು ಚುನಾವಣೆಗಳಿಗಿಂತ ಹೆಚ್ಚು ಜನರು ಸೇರಿರುವುದು, ಮೋದಿ ಜನಪ್ರಿಯತೆ ಕುಗ್ಗದೆ ಇನ್ನಷ್ಟು ಹೆಚ್ಚಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಅದರಲ್ಲೂ ಕರ್ನಾಟಕದಲ್ಲಿ ನಡೆದ ಎಲ್ಲಾ ಸಭೆಗಳಲ್ಲಿ ಮೋದಿ ಅಪಾರ ಸಂಖ್ಯೆ ಜನರನ್ನ ಆಕರ್ಷಿಸಿದ್ದು, ಕರಾವಳಿಯ ಬಿಜೆಪಿಗೆ ಇನ್ನಷ್ಟು ಆತ್ಮವಿಶ್ವಾಸವನ್ನು ತುಂಬಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಮೋದಿ ಬಿಜೆಪಿಯ ಶಕ್ತಿ ಹಾಗೂ ಸ್ಟಾರ್ ಕ್ಯಾಂಪೇನರ್. ಆದರೆ ಒಂದು ಚೂರು ಮೋದಿ ಜನಪ್ರಿಯತೆ ಕುಗ್ಗದೇ ಇರುವುದು ಕಾಂಗ್ರೆಸ್ಸಿಗೆ ಹೊಸ ತಲೆನೋವನ್ನು ಉಂಟು ಮಾಡಿದೆ ಎಂದು ವರದಿಗಳು ಹೇಳಿವೆ.
ಲೋಕಸಭಾ ಚುನಾವಣೆಗೆ ಮೂಹೂರ್ತ ಫಿಕ್ಸ್ ಆಗುವ ಮುಂಚೆಯೇ ಕಲಬುರಗಿಯಲ್ಲಿ ನಮೋ ಬೃಹತ್ ಸಮಾವೇಶ ನಡೆಸುವುದರ ಜೊತೆಗೆ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಿದ್ದು. ಕಲಬುರಗಿಯಿಂದಲೇ ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ. ಸೇನಾ ಹೆಲಿಕಾಪ್ಟರ್ ಮೂಲಕ ಕಲಬುರಗಿಗೆ ಆಗಮಿಸಿದ ಪ್ರಧಾನಿ ಮೋದಿ, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ.
ಕಲಬುರಗಿ ಡಿ.ಆರ್ ಮೈದಾನದಿಂದ ಮೋದಿ ಮಿನಿ ರೋಡ್ ಶೋ ಎಸ್ಪಿ ಕಚೇರಿ ರಸ್ತೆ, ಅಲ್ಲಿಂದ ಆರ್ಚಿಡ್ ಮಾಲ್ ಬಳಿ ಬಂದಿದ್ದು, ಅಲ್ಲಿ ನೆರೆಯೋ ಜನರತ್ತ ಮೋದಿ ಕೈ ಬೀಸಿದ್ದಾರೆ. ಅಲ್ಲಿಂದ ಎಸ್.ಎಂ. ಪಂಡಿತ್ ರಂಗಮಂದಿರ ಕಡೆ ಪ್ರಯಾಣ ಬೆಳೆಸಿದ್ದು, ರಂಗಮಂದಿರ ಕಾರ್ನರ್ನಲ್ಲಿ ಸಾಕಷ್ಟು ಜನ ಜಮಾಯಿಸಿದ್ದು, ಅಬ್ ಕಿ ಬಾರ್ 400 ಪಾರ್ ಎನ್ನುತ್ತಿದ್ದಾರೆ.
ಬಳಿಕ ಸಾರ್ವಜನಿಕ ಉದ್ಯಾನವನ ಒಳಗಡೆ ರಸ್ತೆಯಿಂದ ರೋಟರಿ ಕ್ಲಬ್ ರಸ್ತೆ, ಅಲ್ಲಿಂದ ನೇರವಾಗಿ ಎನ್.ವಿ. ಮೈದಾನದ ಕಡೆಗೆ ಪ್ರಯಾಣ ಬೆಳೆಸಿದರು. ಇತ್ತ, ಸಮಾವೇಶದ ಮೈದಾನದಲ್ಲಿ ಬಿರು ಬಿಸಿಲನ್ನೂ ಲೆಕ್ಕಿಸದ ಜನರು ಕಿಕ್ಕಿರಿದು ಸೇರಿದ್ದರು. ರಸ್ತೆ ಇಕ್ಕೆಲಗಳಲ್ಲಿ ನಿಂತು ಜೈ ಶ್ರೀರಾಮ್, ಜೈ ಮೋದಿ ಎಂದು ಘೋಷಣೆ ಕೂಗಿದ್ದಾರೆ.