ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಮೋದಿ ಇಂದು ಚಾಲನೆ..!
ದೇಶದ ಮೊದಲ ಅಂಡರ್‌ವಾಟರ್ ಮೆಟ್ರೋ (Underwater Metro) ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ (ಮಾರ್ಚ್ 6) ಚಾಲನೆ ನೀಡಲಿದ್ದಾರೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾದಲ್ಲಿ ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ ಸಾಕ್ಷಿಯಾಗಲಿದ್ದಾರೆ. ಹೌರಾ ಹಾಗೂ ಕೋಲ್ಕೊತಾಗೆ ಮೆಟ್ರೋ ಸಂಪರ್ಕ ಕಲ್ಪಿಸುವ, ಹೂಗ್ಲಿ ನದಿಯ (Hooghly River) ನೀರಿನ ಮಧ್ಯೆ ಸಾಗುವ, 16.6 ಕಿಲೋಮೀಟರ್ ಉದ್ದದ ಮೆಟ್ರೋ ಸೇವೆಗೆ ಮೋದಿ ಚಾಲನೆ ನೀಡಲಿದ್ದು, ಇದು ದೇಶದ ಮೊದಲ ಅಂಡರ್‌ವಾಟರ್ ಮೆಟ್ರೋ ಸೇವೆ ಎನಿಸಲಿದೆ.
ಮೆಟ್ರೋ ಸುರಂಗ, ನೀರಿನ ಮಧ್ಯೆಯೇ ಮೆಟ್ರೋ ನಿಲ್ದಾಣ ನಿರ್ಮಾಣ ಸೇರಿ ಹಲವು ರೀತಿಯಲ್ಲಿ ಎಂಜಿನಿಯರಿಂಗ್ ಅದ್ಭುತಗಳಿಗೆ ಈ ಮೆಟ್ರೋ ಸೇವೆಯು ಸಾಕ್ಷಿಯಾಗಲಿದೆ. 16.6 ಕಿಲೋಮೀಟರ್ ಮಾರ್ಗದ ಮಧ್ಯೆ ಆರು ಮೆಟ್ರೋ ಸ್ಟೇಷನ್‌ಗಳಿದ್ದು, ಇವುಗಳಲ್ಲಿ ಮೂರು ಭೂಮಿಯ ಕೆಳಗೇ ಇವೆ. ವಾಯುಮಾಲಿನ್ಯ ತಡೆ, ಟ್ರಾಫಿಕ್ ಕಿರಿಕಿರಿ ತಪ್ಪಿಸುವುದು ಹಾಗೂ ಹೊಸ ಪ್ರಯಾಣದ ಅನುಭವದ ದಿಸೆಯಲ್ಲಿ ಅಂಡರ್‌ವಾಟರ್ ಮೆಟ್ರೋ ಸೇವೆ ಮಹತ್ವ ಪಡೆದಿದೆ. ಹಾಗಾದರೆ, ಅಂಡರ್ ವಾಟರ್ ಮೆಟ್ರೋ ವೈಶಿಷ್ಟ್ಯಗಳು ಏನೆಲ್ಲ ಇವೆ? ಇಲ್ಲಿದೆ ಮಾಹಿತಿ.
ಅಂಡರ್ ವಾಟರ್ ಮೆಟ್ರೋದ ವೈಶಿಷ್ಟ್ಯಗಳು
- ಹೌರಾ ಹಾಗೂ ಕೋಲ್ಕೊತಾ ಮಧ್ಯೆ, ನೀರಿನಲ್ಲಿ ಮೆಟ್ರೋ ಸಾಗುವ ಜತೆಗೆ, ಮೆಟ್ರೋ ನಿಲ್ದಾಣವೂ ಇದೆ.
- ಹೂಗ್ಲಿ ನದಿ ನೀರಿನ ಮಧ್ಯೆಯೇ ಮೆಟ್ರೋ 520 ಮೀಟರ್ ಸಂಚರಿಸಲಿದೆ. ಕೇವಲ 45 ಸೆಕೆಂಡ್‌ನಲ್ಲಿ ಮೆಟ್ರೋ ಇಷ್ಟು ದೂರ ಕ್ರಮಿಸಲಿದೆ.
- ಈಸ್ಟ್-ವೆಸ್ಟ್ ಮೆಟ್ರೋದ 16.6 ಕಿಲೋಮೀಟರ್ ಮೆಟ್ರೋ ಮಾರ್ಗದಲ್ಲಿ 10.8 ಕಿಲೋಮೀಟರ್ ಮಾರ್ಗವು ಭೂಮಿಯ ಒಳಗೆ ಇದೆ. ಹೂಗ್ಲಿ ನದಿಯ ಆಳದಲ್ಲಿರುವ ಸುರಂಗದ ಮೂಲಕ ಮೆಟ್ರೋ ಸಾಗಲಿದೆ.
- ನದಿಯ 16 ಮೀಟರ್ ಆಳದಲ್ಲಿ ಪ್ರಯಾಣಿಕರು ಮೆಟ್ರೋ ಮೂಲಕ ಸಾಗಲಿದ್ದಾರೆ, ಇದು ಅದ್ಭುತ ಅನುಭವ ಎಂದು ಹೇಳಲಾಗುತ್ತಿದೆ.
- ಹೌರಾ ಮೈದಾನ್ ಮೆಟ್ರೋ ನಿಲ್ದಾಣವು ದೇಶದ ಮೊದಲ ಅಂಡರ್‌ವಾಟರ್ ಮೆಟ್ರೋ ನಿಲ್ದಾಣ ಎಂಬ ಖ್ಯಾತಿಗೆ ಭಾಜನವಾಗಿದೆ
ದೇಶದ ಮೊದಲ ಮೆಟ್ರೋ ಕೋಲ್ಕೊತಾ ಮೆಟ್ರೋ ದೇಶದ ಮೊದಲ ಮೆಟ್ರೋ ಸಿಸ್ಟಂ ಎನಿಸಿದೆ. ಅಷ್ಟೇ ಅಲ್ಲ, ಏಷ್ಯಾದಲ್ಲೇ ಐದನೇ ಮೆಟ್ರೋ ಎನಿಸಿದೆ. ಮೊದಲ ಬಾರಿಗೆ 1984ರ ಅಕ್ಟೋಬರ್ 24ರಂದು ಕೋಲ್ಕೊತಾದಲ್ಲಿ ಮೊದಲ ಬಾರಿಗೆ ಮೆಟ್ರೋ ಸೇವೆ ಆರಂಭಿಸಲಾಯಿತು. ಮೊದಲು 3.4 ಕಿಲೋಮೀಟರ್ ವ್ಯಾಪ್ತಿಗೆ ಆರಂಭವಾದ ಮೆಟ್ರೋ ಸೇವೆ ಈಗ ನೂರಾರು ಕಿಲೋಮೀಟರ್‌ವರೆಗೆ ವ್ಯಾಪಿಸಿದೆ. ಇಂತಹ ಕೋಲ್ಕೊತಾದಲ್ಲಿಯೇ ಈಗ ದೇಶದ ಮೊದಲ ಅಂಡರ್‌ವಾಟರ್ ಮೆಟ್ರೋಗೆ ಚಾಲನೆ ನೀಡಲಾಗುತ್ತಿದೆ.
India's first underwater metro rail service - Howrah Maidan to Esplanade Metro Station will be inaugurated by PM Modi in Kolkata tomorrow.
— Rishi Bagree (@rishibagree) March 5, 2024
This will be the Deepest Metro Station and Metro line in India. pic.twitter.com/jRooRVvLMg
#WATCH | West Bengal: Visuals of India's first underwater metro train to be inaugurated by Prime Minister Narendra Modi in Kolkata today. pic.twitter.com/VxJ0LNlVk1
— ANI (@ANI) March 6, 2024