MLC Election:ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಚುನಾವಣೆ: ಕಾಂಗ್ರೆಸ್ಸಿನಿಂದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಡಿ. ಆರ್. ರಾಜು ಹೆಸರು ಮುಂಚೂಣಿಯಲ್ಲಿ.
MLC Election ಮಂಗಳೂರು: ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಎಂಎಲ್ಸಿ (MLC Election) ಚುನಾವಣೆಗೆ ಕಾಂಗ್ರೆಸ್ ನಿಂದ ಎರಡು ಅಭ್ಯರ್ಥಿಗಳ ಹೆಸರು ಮುಂಚೂಣಿಗೆ ಬಂದಿದೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್ ಶೆಟ್ಟಿ ತುಂಬೆ ಹಾಗೂ ಕಾರ್ಕಳದ ಕಾಂಗ್ರೆಸ್ ನಾಯಕ ಡಿ. ಆರ್ ರಾಜು ಹೆಸರು ಮುಂಚೂಣಿಯಲ್ಲಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಆದರೆ ಇನ್ನಷ್ಟು ಹೆಸರುಗಳು ಹೈಕಮಾಂಡ್ ಪಟ್ಟಿಯಲ್ಲಿ ತುಂಬಿಕೊಂಡಿದೆ ಎನ್ನಲಾಗುತ್ತಿದೆ. ಆದರೆ ಎರಡು ಹೆಸರುಗಳು ಮುಂಚೂಣಿಯಲ್ಲಿ ಇವೆ ಎಂದು ಕಾಂಗ್ರೆಸ್ ನ ಆಂತರಿಕ ಮೂಲಗಳು ಹೇಳಿಕೊಂಡಿವೆ.
ಈ ಬಗ್ಗೆ ಕಾಂಗ್ರೆಸ್ ಸಮಿತಿಯನ್ನು ರಚಿಸಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಿತಿ ಹೈಕಮಾಂಡಿಗೆ ವರದಿ ನೀಡಲಿದೆ ಎಂದು ತಿಳಿದುಬಂದಿದೆ.
ಆದರೆ ಬಿಜೆಪಿ ಇದುವರೆಗೆ ಯಾವುದೇ ಅಭ್ಯರ್ಥಿಗಳ ಘೋಷಣೆಯನ್ನ ಮಾಡಿಲ್ಲ. ಬಿಜೆಪಿ ಒಳಗಡೆ ಅಭ್ಯರ್ಥಿಯ ಬಗ್ಗೆ ಪೈಪೋಟಿ ಇರುವುದರಿಂದ ಅದು ಹೈಕಮಾಂಡ್ ಅಂಗಳಕ್ಕೆ ತಲುಪಿದೆ ಎನ್ನಲಾಗುತ್ತಿದೆ.
ಮಂಗಳೂರು : ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು
ಮಂಗಳೂರು : ಮಂಗಳೂರಿನ ಹೊರವಲಯದ ಅಡ್ಯಾರ್ ಗಾರ್ಡನ್ ಬಳಿ ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದಿದೆ. ಕಾರಿನಲ್ಲಿ ಬೆಂ*ಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತ್ತು.
ಏಕಾಏಕಿ ಕಾರಿಗೆ ಬೆಂ*ಕಿ ಹೊತ್ತಿಕೊಂಡಿದ್ದು ಸ್ಥಳೀಯರು ಬೆಂ*ಕಿಯನ್ನು ನಂದಿಸಲು ಯತ್ನಿಸುವ ಮೊದಲೇ ಕಾರು ಸುಟ್ಟು ಸಂಪೂರ್ಣ ಕರಕಲಾಗಿತ್ತು. ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು ಅಗ್ನಿಶಾಮಕ ದಳ ತಲುಪುವಷ್ಟರಲ್ಲಿ ಕಾರು ಸಂಪೂರ್ಣ ಭಸ್ಮವಾಗಿದೆ.
ಈ ಕಾರು ಮಾಲಕ ಬಿಸಿ ರೋಡಿನ ಗುರುದೀಪ್ ಎಂದು ತಿಳಿದು ಬಂದಿದ್ದು, ಕಾರು ಬಿ ಎಂ ಡಬ್ಲ್ಯೂ ಕಂಪೆನಿಗೆ ಸೇರಿದ 2011-12 ಮಾಡೆಲ್‌ನದ್ದಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಸುಟ್ಟು ಕರಕಲಾದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬೆಂಕಿ ಅವಘಡಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ.
ಅರ್ಜುನ್ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತದ ವತಿಯಿಂದ ಅಂತಿಮ ನಮನ:
ಕಾಸರಗೋಡು:ಶಿರೂರಿನಲ್ಲಿ ಭೂಕುಸಿತಕ್ಕೆ ಸಿಲುಕಿ ನದಿಪಾಲಾಗಿ ೭೨ ದಿನಗಳ ಬಳಿಕ ಪತ್ತೆಯಾದ ಲಾರಿ ಚಾಲಕ ಅರ್ಜುನ್ ಕೋಝಿಕ್ಕೋಡ್ ಕನ್ನಾಡಿಕ್ಕಾಲ್ ನ ಪಾರ್ಥಿವ ಶರೀರ ಅಂಬ್ಯುಲೆನ್ಸ್ ಮೂಲಕ ಕಾಸರಗೋಡಿಗೆ ತಲಪಿದಾಗ ಅಂತಿಮ ನಮನ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ . ಶಿಲ್ಪಾ ಮೊದಲಾದವರು ಪುಷ್ಪ ಚಕ್ರ ಅರ್ಪಿಸಿದರು. ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ತಡರಾತ್ರಿ ಯಾದಾರೂ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು.
ಅಂಬ್ಯುಲೆನ್ಸ್ ನಲ್ಲಿದ್ದ ಅರ್ಜುನ್ ರ ಸಹೋದರಿ ಪತಿ ಜಿತಿನ್, ಸಹೋದರ ಅಭಿಜಿತ್ ರವರನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಾಂತ್ವನ ಪಡಿಸಿದರು. ಮಂಜೇಶ್ವರ ಶಾಸಕ ಎ . ಕೆ . ಎಂ ಅಶ್ರಫ್ , ಕಾರವಾರ ಶಾಸಕ ಸತೀಶ್ ಸೈಲ್ ರವರು ಜೊತೆಗಿದ್ದರು. ಇಂದು ಬೆಳಿಗ್ಗೆ ೮. ೩೦ ರ ಸುಮಾರಿಗೆ ಅರ್ಜುನ್ ರ ಮೃತದೇಹ ಮನೆಗೆ ತಲಪಿಸಲಾಯಿತು. ಶೋಧದ ಬಳಿಕ ೭೨ ದಿನಗಳ ಬಳಿಕ ಗಂಗಾವಳಿ ನದಿಯ ಆಳಭಾಗದಲ್ಲಿ ಲಾರಿಯೊಂದರ ಒಳಗೆ ಕೊಳೆ ತ ಸ್ಥಿತಿಯಲ್ಲಿ ಅರ್ಜುನ್‌ರ ವರ ಮೃತದೇಹ ಲಭಿಸಿತ್ತು.
ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮಗುಚಿ ಬಿದ್ದ ಘಟನೆ ಇಂದು(ಸೆ.28) ಕೆಮ್ಮಾರದಲ್ಲಿ ನಡೆದಿದೆ. ಕಡಬ ಕಡೆಯಿಂದ ಕೆಮ್ಮಾರ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಕೂಡಲೇ ಸ್ಥಳೀಯರು ಕೂಡಿಕೊಂಡು ಕಾರನ್ನು ಮೇಲೆಕ್ಕೆತ್ತಿದ್ದಾರೆ.
ಬಸ್ ನಿಲ್ದಾಣದ ಬಳಿಯೇ ಈ ಘಟನೆ ನಡೆದಿದ್ದು, ಅಷ್ಟರಲ್ಲಾಗಲೇ ಬಸ್ ಬಂದು ಹೋಗಿದ್ದರಿಂದ ಅಲ್ಲಿ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಇದರಿಂದ ಸಂಭವನೀಯ ಅವಘ*ಡವೊಂದು ತಪ್ಪಿದಂತಾಗಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಯು ಹಳೆಗೇಟು- ಕೊಯಿಲದವರೆಗೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ-ಗುಂಡಿಗಳಿಂದ ಕೂಡಿದೆ. ಹಲವು ಬಾರಿ ಈ ಬಗ್ಗೆ ಮನವಿ ಮಾಡಿದರೂ ಲೋಕೋಪಯೋಗಿ ಇಲಾಖೆ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ವ್ಯಕ್ತವಾಗಿದೆ.