ಶಾಸಕ ಡಾ. ಚಂದ್ರು ಲಮಾಣಿ ಮೇಲೆ ಕಲ್ಲು ತೂರಾಟ
Twitter
Facebook
LinkedIn
WhatsApp
ಲಕ್ಷ್ಮೇಶ್ವರ(ಜೂ.01): ಸಮೀಪದ ಸೂರಣಗಿ ಗ್ರಾಮದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಅನಾಮಿಕನೊಬ್ಬ ಕಲ್ಲು ತೂರಿದ ಘಟನೆ ಕಳೆದ ಶನಿವಾರ (ಮೇ 27) ರಾತ್ರಿ 8 ಗಂಟೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಾಮನವಮಿ ಹಾಗೂ ಹನುಮ ಜಯಂತಿ ಅಂಗವಾಗಿ ಗ್ರಾಮದ ಚೌತಮನಿ ಕಟ್ಟೆಯ ಹತ್ತಿರ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಶಾಸಕರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಹೂವು ತೂರುತ್ತಿದ್ದ ವೇಳೆ ಯಾರೋ ಕಿಡಿಗೇಡಿ ಶಾಸಕರ ಮೇಲೆ ಕಲ್ಲು ತೂರಿದ್ದಾರೆ. ಕಲ್ಲು ತೂರಿದವರು ಯಾರೆಂದು ಗೊತ್ತಾಗಿಲ್ಲ ಎನ್ನಲಾಗಿದೆ.