ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಎಂಕ್ ಅರ್ಥ ಅಪುಂಡು, ಮುಕ್ಲೆಗ್ ಅವೊಡೆ? ಆದಿವೇಶನದಲ್ಲಿ ತುಳುವಿನಲ್ಲಿ ಮಾತನಾಡಿ ಸಂಚಲನ ಸೃಷ್ಟಿಸಿದ ಅಶೋಕ್ ರೈ ಮತ್ತು ಯುಟಿ ಖಾದರ್ !

Twitter
Facebook
LinkedIn
WhatsApp
ಎಂಕ್ ಅರ್ಥ ಅಪುಂಡು, ಮುಕ್ಲೆಗ್ ಅವೊಡೆ? ಆದಿವೇಶನದಲ್ಲಿ ತುಳುವಿನಲ್ಲಿ ಮಾತನಾಡಿ ಸಂಚಲನ ಸೃಷ್ಟಿಸಿದ ಅಶೋಕ್ ರೈ ಮತ್ತು ಯುಟಿ ಖಾದರ್ !

ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡವರಿಗೆ 1.3 ಸೆಂಟ್ಸ್ ಜಾಗಕ್ಕೆ ಹಕ್ಕುಪತ್ರ ನೀಡುತ್ತಿದ್ದು ಅದನ್ನು ಬದಲಾಯಿಸಿ ಪ್ರತೀ ಕುಟುಂಬಕ್ಕೆ 2.75 ಸೆಂಟ್ಸ್ ಜಾಗವನ್ನು ಮಂಜೂರು ಮಾಡಿ ಅವರಿಗೆ ಹಕ್ಕುಪತ್ರ ನೀಡುವಂತೆ ಪುತ್ತೂರು ಶಾಸಕ ಅಶೋಕ್ ರೈ ವಿಧಾನಸಭಾ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.

ಸುಮಾರು 200 ಕುಟುಂಬಗಳಿಗೆ 1.3 ಸೆಂಟ್ಸ್ ಜಾಗವನ್ನು ನಮೂದಿಸಿ ಹಕ್ಕುಪತ್ರವನ್ನು ನೀಡಲಾಗಿದ್ದು ಯಾವುದೇ ಫಲಾನುಭವಿಗಳು ಆ ಹಕ್ಕುಪತ್ರವನ್ನು ಸ್ವೀಕಾರ ಮಾಡಿಲ್ಲ. ಕರಾವಳಿ ಪ್ರದೇಶ ಎತ್ತರತಗ್ಗಿನಿಂದ ಕೂಡಿರುವ ಕಾರಣ 1.3 ಸೆಂಟ್ಸ್ ಜಾಗದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಮತ್ತು ಅದಕ್ಕೆ ಬ್ಯಾಂಕಿನವರು ಲೋನ್ ಕೂಡಾ ನೀಡುತ್ತಿಲ್ಲ. ನಗರಸಭಾ ವ್ಯಾಪ್ತಿಯಲ್ಲಿ 2.75 ನಿವೇಶನವನ್ನು 94 ಸಿಸಿ ಯಡಿ ನೀಡಲಾಗುತ್ತಿದೆ ಅದೇ ನಿಯಮವನ್ನು ಪಟ್ಟಣ ಪಂಚಾಯತಿಗೂ ಅನ್ವಯವಾಗುವಂತೆ ಮಾಡಿ ಎಂದು ಸರಕಾರಕ್ಕೆ ಮನವಿ ಮಾಡಿದರು.

ಸಭಾಧ್ಯಕ್ಷರೇ ಈರ್ಲ ಸಪೋರ್ಟು ಮಲ್ಪುಲೆ… ಅಧಿವೇಶನದಲ್ಲಿ ತುಳುವಿನಲ್ಲಿ ಸಭಾಧ್ಯಕ್ಷರ ಜೊತೆ ಮಾತನಾಡಿದ ಶಾಸಕ ಅಶೋಕ್ ರೈ “ ಸಭಾಧ್ಯಕ್ಷರೇ ಇರೆನ ಕೈತಲ್ಪದ ಊರು ವಿಟ್ಲ, ಈರ್ ಗೊಬ್ಬೊಂದಿತ್ತನ ಊರು.. ಪಾಪ ಅಲ್ಪ ಪಾಪದಕುಲು ಸರಕಾರಿ ಜಾಗೊಡು ಇಲ್ಸ್ ಕಟ್ಟದ್ ಕುಲ್ಲುದೆರ್ ಅಗ್‌ಲೆಗ್ ಒಂಜಿ ವ್ಯವಸ್ಥೆ ಆವೊಡತ್ತ ಇರೆನ ಸಪೋರ್ಟು ಬೋಡು ಎಂದು ಹೇಳಿದರು. ಈ ಹಿಂದಿನ ಸರಕಾರದ ಎಡವಟ್ಟಿನಿಂದಾಗಿ ಇಂದು 200 ಕುಟುಂಬಗಳು ಸಂಕಷ್ಟದಲ್ಲಿದೆ. ಸರಕಾರ ಹೊಸ ನಿಯಮವನ್ನು ರೂಪಿಸುವ ಮೂಲಕ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಡವರಿಗೆ 2.75 ನಿವೇಶನಕ್ಕೆ ಹಕ್ಕುಪತ್ರವನ್ನು ನೀಡುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.

ಡಿ ಸಿ ಯಿಂದ ವರದಿ ತರಿಸುತ್ತೇನೆ: ಕಂದಾಯ ಸಚಿವ ಶಾಸಕರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರಾದ ಕೃಷ್ಣಬೈರೇಗೌಡರವರು ನಗರಸಭಾ ಅಥವಾ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ 600 ಚ. ಅಡಿ ಮತ್ತು ಗ್ರಾಮಾಂತರ ಭಾಗದಲ್ಲಿ 1200 ಚ ಅಡಿ ನಿವೇಶನಕ್ಕೆ ಹಕ್ಕುಪತ್ರವನ್ನು ನೀಡಲಾಗುತ್ತದೆ ಈ ಬಗ್ಗೆ ನಿಯಮವಲ್ಲ ಕಾನೂನು ರಚನೆ ಮಾಡಲಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ಶಾಸಕರು ಗಮನಹರಿಸಿದ್ದಾರೆ. 

ದ ಕ ಜಿಲ್ಲಾಧಿಕಾರಿಯಿಂದ ವರದಿ ತರಿಸಿ ಆ ನಂತರ ಅದನ್ನು ಪರಿಶೀಲನೆ ಮಾಡಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರಕಾರದ ಜೊತೆ ಚರ್ಚೆ ನಡೆಸಲಾಗುವುದು.ಸಮಸ್ಯೆ ಇತ್ಯರ್ಥಪಡಿಸಲು ಖಂಡಿತವಾಗಿಯೂ ಪ್ರಯತ್ನವನ್ನು ಮಾಡಲಾಗುವುದು. ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿರುವ ಬಡ ಕುಟುಂಬಗಳಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ