ಮಂಗಳವಾರ, ಜೂನ್ 18, 2024
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?-ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ ನಾಳೆ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ.?-ಶಿವಮೊಗ್ಗ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಕುಸಿದುಬಿದ್ದು ನಿಧನ..!-Rain Alert: ಜೂನ್ 21ರಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ..!-ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

miyazaki mango: ಜಗತ್ತಿನಲ್ಲಿ ದುಬಾರಿ ಮಾವಿನ ಹಣ್ಣಿನ ಪಟ್ಟಿಯಲ್ಲಿ ಮಿಯಾಜಕಿ ಹಣ್ಣಿನ ವಿಶೇಷತೆ ಏನು..?

Twitter
Facebook
LinkedIn
WhatsApp
miyazaki mango: ಜಗತ್ತಿನಲ್ಲಿ ದುಬಾರಿ ಮಾವಿನ ಹಣ್ಣಿನ ಪಟ್ಟಿಯಲ್ಲಿ ಮಿಯಾಜಕಿ ಹಣ್ಣಿನ ವಿಶೇಷತೆ ಏನು..?

ಐಶಾರಾಮಿ ವಸ್ತುಗಳು, ಮೊಬೈಲ್‌ಗಳು, ವಾಹನಗಳು, ಮನೆಗಳ ಬಗ್ಗೆ ನೀವು ಕೇಳಿದ್ದೀರ. ಆದರೆ ಐಶಾರಾಮಿ ಮಾವಿನ ಹಣ್ಣಿನ ಬಗ್ಗೆ ಎಂದಾದರೂ ಕೇಳಿದ್ದೀರಾ? ಇಲ್ಲ ಎನ್ನುವುದು ನಿಮ್ಮ ಉತ್ತರವಾದರೆ ನೀವೀಗ ಓದುತ್ತಿರುವುದು ಅಂತಹ ಒಂದು ಐಶಾರಾಮಿ ಮಾವಿನ ಹಣ್ಣಿನ ಕಥೆ.

ಒಂದು ಕೆಜಿ ಮಾವಿನ ಹಣ್ಣಿಗೆ ನೀವು ಎಷ್ಟು ರೂಪಾಯಿ ಕೊಟ್ಟೀರುತ್ತೀರಾ? ಹೆಚ್ಚೂ ಅಂದ್ರೂ 200-250 ರೂಪಾಯಿಯ ಒಳಗಿರಬಹುದು ಅಲ್ವೇ. ಆದರೆ ವಿಶ್ವದಲ್ಲೇ ಅತಿ ದುಬಾರಿ ರಸಭರಿತ ಮಾವಿ ಹಣ್ಣು ಯಾವುದು ಎಂದು ತಿಳಿದು ಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ ಅಲ್ವೇ? ಅಪರೂಪದಲ್ಲಿ ಅಪರೂಪ ಈ ಮಾವಿನ ಹಣ್ಣು.. ಅತಿ ದುಬಾರಿ ಬೆಲೆ.. ಜತೆಗೆ ಬಣ್ಣವೂ ವಿಭಿನ್ನ!

ಹಣವಂತರು ಐದಾರು ಕೋಟಿ ರೂಪಾಯಿ ಕೊಟ್ಟು ಕಾರು, ಅದೇ ಕೋಟಿ ರೂಪಾಯಿ ಖರ್ಚು ಮಾಡಿ ಒಂದು ಬೈಕ್ ಖರೀದಿಸುತ್ತಾರೆ. ಹತ್ತಾರು ಲಕ್ಷ ರೂಪಾಯಿ ಕೊಟ್ಟು ಬಟ್ಟೆ ಕೊಳ್ಳುತ್ತಾರೆ. ಮತ್ತು ಅದೇ ಲಕ್ಷಗಳನ್ನು ಚೆಲ್ಲಿ ಮೊಬೈಲ್ ಫೋನು ಕೊಂಡು ಬೀಗುತ್ತಾರೆ. ಹೀಗೆ ಸಾಮಾನ್ಯಕ್ಕಿಂತಲೂ ಅತಿ ಹೆಚ್ಚು ಬೆಲೆ ಕೊಟ್ಟು ಖರೀದಿಸುವ ಇವೆಲ್ಲವನ್ನೂ ಐಶಾರಾಮಿ ವಸ್ತು, ವಾಹನಗಳೆನ್ನಲಾಗುತ್ತದೆ. ಆದರೆ ಜಪಾನ್‌ನಲ್ಲಿ ಐಶಾರಾಮಿ ಮಾವಿನ ಹಣ್ಣು ಕೂಡ ಇದೆ. ಆ ತಳಿಯ ಹೆಸರು ಮಿಯಾಜಕಿ. ಅದರ ಬೆಲೆ ಒಂದು ಕೆ.ಜಿ.ಗೆ ಬರೋಬ್ಬರಿ 2.7 ಲಕ್ಷ ರೂಪಾಯಿ. ಜಪಾನ್‌ನ ನೈರುತ್ಯ ಭಾಗದಲ್ಲಿರುವ ಹಾಗೂ ಅಲ್ಲಿನ ಪ್ರಮುಖ ದ್ವೀಪಗಳಲ್ಲಿ ಒಂದಾದ ಕ್ಯುಶು ಎಂಬಲ್ಲಿರುವ ಮಿಯಾಜಕಿ ನಗರ ಈ ಮಾವಿನ ಹಣ್ಣಿನ ತಳಿಯ ಮೂಲ. ಮೊದಲೆಲ್ಲಾ ಜಪಾನ್‌ಗಷ್ಟೇ ಸೀಮಿತವಾಗಿದ್ದ ಈ ತಳಿ ಈಗ ಭಾರತದಲ್ಲೂ ಇದೆ. ಅದು ಕೂಡ ಮಧ್ಯಪ್ರದೇಶದ ಊರೊಂದರಲ್ಲಿ ಮಾತ್ರ.

miyazaki mango

ವಿಶೇಷ ಬಣ್ಣದಿಂದ ಸೆಳೆಯುವ ಹಣ್ಣು

ತನ್ನ ಭಿನ್ನ ನೋಟ ಹಾಗೂ ವಿಶಿಷ್ಟ ಬಣ್ಣದಿಂದ ಬೇರೆ ಮಾವಿಗಿಂತ ಈ ಮಾವು ಆಕರ್ಷಿತವಾಗಿ ಕಾಣುತ್ತದೆ. ನೇರಳೆ ಬಣ್ಣದ ಈ ಹಣ್ಣನ್ನು ಜಪಾನ್‌ನ ಕ್ಯೂಶು ಪ್ರಾಂತ್ಯದ ಮಿಯಾಝಾಕಿ ನಗರದಲ್ಲಿ ಬೆಳೆಯಲಾಗುತ್ತದೆ. ಜಪಾನ್‌ನಲ್ಲಿ ಇದು ಸ್ಥಳೀಯ ಹಣ್ಣಿನ ತಳಿಯಾಗಿದ್ದು, ಏಪ್ರಿಲ್‌ನಿಂದ ಆಗಸ್ಟ್‌ನಲ್ಲಿ ಈ ಮಾವನ್ನು ಬೆಳೆಯಲಾಗುತ್ತದೆ

ವಿಶ್ವದ ಅತಿ ದುಬಾರಿ ಮಾವಿನ ತಳಿ

ಅತಿ ಹೆಚ್ಚಿನ ಬೆಲೆಗೆ ಈ ಮಾವನ್ನು ಮಾರಾಟ ಮಾಡಲಾಗುತ್ತದೆ. ಹೀಗಾಗೇ ಇದನ್ನು ವಿಶ್ವದಲ್ಲೇ ಅತಿ ದುಬಾರಿ ಮಾವಿನ ತಳಿ ಎಂದು ಕರೆಯಲಾಗಿದೆ. ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 2.70 ಲಕ್ಷ ರೂಗೆ ಮಾರಾಟವಾಗಿತ್ತು ಎಂದು ಜಪಾನ್ ಮಾಧ್ಯಮ ವರದಿ ಮಾಡಿದೆ. ಆದರೆ ಹಣ್ಣಿಗೆ ಏಕಿಷ್ಟು ದುಬಾರಿ ಬೆಲೆ ಎಂಬುದರ ಕುರಿತು ಸೂಕ್ತ ಉಲ್ಲೇಖಗಳಿಲ್ಲ. ಉತ್ಪಾದನೆ ಕಡಿಮೆ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಹಳದಿ ಪೆಲಿಕಾನ್ ಮಾವಿಗಿಂತ ಇದು ಭಿನ್ನವಾಗಿದ್ದು, ಆಗ್ನೇಯ ಏಷ್ಯಾ ದೇಶಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಮಿಯಾಝಾಕಿಯಲ್ಲಿ ಬೆಳೆದ ಈ ಹಣ್ಣನ್ನು ಜಪಾನ್‌ನೆಲ್ಲೆಡೆ ಸರಬರಾಜು ಮಾಡಲಾಗುತ್ತದೆ.

ಉಡುಪಿಯಲ್ಲೂ ಈ ಮಾವನ್ನು ಬೆಳೆದು ಯಶಸ್ಸು ಕಂಡ ರೈತ

ವರ್ಷಕ್ಕೊಮ್ಮೆ ಬರುವ ಈ ಮಾವಿನ ಸೀಜನ್ ಬೆಳೆಗಾರರಿಗೆ ಸುಗ್ಗಿ ಕಾಲ. ಮಾವು ಬೆಳೆದು ಯಶ್ವಸಿಯಾದ ನೂರಾರು ರೈತರ ಪೈಕಿ ಉಡುಪಿಯ ಶಂಕರಪುರ ನಿವಾಸಿ ಜೋಸೆಫ್ ಲೋಬೋ ಒಬ್ಬರಾಗಿದ್ದಾರೆ.ಪ್ರಾಯೋಗಾರ್ಥವಾಗಿ ಕೇರಳದಿಂದ ತಂದು ಬೆಳೆಸಿದ ವಿದೇಶಿ ತಳಿಯ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತದೆ. ಕೃಷಿಯಿಂದಲೇ ಬದುಕು ಕಟ್ಟಿಕೊಂಡ ಈ ಕೃಷಿಕ ಹಲವು ಬಗೆಯ ಕೃಷಿ ಮಾಡುವ ಮೂಲಕ ಗುರುತಿಸಿಕೊಂಡವರು. ತಮ್ಮ ಮನೆಯ ಟೆರೀಸ್‌ ಮೇಲೆ ಕೃಷಿ ಮಾಡುವ ಇವರು ಜಪಾನಿ ತಳಿಗೆ ಲಕ್ಷ ಲಕ್ಷ ಮಾರುಕಟ್ಟೆ ಬೆಲೆ ಇದೆ.

ಪಕ್ಕದ ಕೇರಳ ರಾಜ್ಯದಿಂದ ಪ್ರಯೋಗಾರ್ಥವಾಗಿ ವಿದೇಶಿ ತಳಿಯ ಮಾವಿನ ಗಿಡವನ್ನ ತಂದಿದ್ದ ಈ ಕೃಷಿಕ ತಮ್ಮ ಮಹಡಿಯ ಮೇಲೆ ಈ ಗಿಡವನ್ನು ನೆಟ್ಟಿದ್ದರು. ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡ ಈ ಬಾರಿ ಮಾವಿನ ಫಸಲನ್ನು ನೀಡಿದ್ದು ಉತ್ತಮ ಆದಾಯ ನೀಡಿದೆ. ಇದು ಉಡುಪಿಯ ಶಂಕರಪುರ ನಿವಾಸಿ ಜೋಸೆಫ್ ಲೋಬೋ ಅವರ ಮಾವಿನ ಹಣ್ಣಿನ ಬೆಳೆಯ ಕಥೆ. ಜೋಸೆಫ್ ಲೋಗೋ ಅವರು ನೆಟ್ಟಿದ್ದು ಜಪಾನಿ ಮಾವಿನಹಣ್ಣಿನ ತಳಿಯಾದ ಮಿಯಾಯೋಕಿ. ಈ ಮಿಯಾಯೋಕಿ ತಳಿ ಮಾವಿನಹಣ್ಣಿಗೆ ಪ್ರತಿ ಕಿಲೋಗೆ 2 ಲಕ್ಷ ಎಪ್ಪತ್ತು ಸಾವಿರ ಬೆಲೆ ಇದೆ. ಕೇವಲ ಒಂದು ಹಣ್ಣಿನ ಬೆಲೆ 10,000ಯಾಗಿದೆ.

ಆ್ಂಟಿಆಕ್ಸಿಡಂಟ್‌ಗಳು ಈ ತಳಿಯ ಮಾವಿನಲ್ಲಿ ಅತಿ ಹೆಚ್ಚಾಗಿದೆ. ಬೆಟಾ ಕೆರೋಟಿನ್, ಫೋಲಿಕ್ ಆಸಿಡ್ ಹೆಚ್ಚಿದ್ದು, ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗಿದೆ. ದೃಷ್ಟಿ ಮಂದವಾಗುತ್ತಿರುವವರಿಗೂ ಇದು ಸಹಾಯಕ್ಕೆ ಬರುತ್ತದೆ. 70-80ರ ದಶಕದಲ್ಲಿ ಈ ಮಿಯಾಝಾಕಿ ಹಣ್ಣನ್ನು ಜಪಾನ್‌ನಲ್ಲಿ ಸ್ಥಳೀಯವಾಗಿ ಬೆಳೆಯಲು ಆರಂಭಿಸಲಾಯಿತು. ಬೆಚ್ಚನೆಯ ವಾತಾವರಣ, ಸೂರ್ಯನ ಬೆಳಕು, ಆಗಾಗ್ಗೆ ಬೀಳುವ ಮಳೆ ಈ ಮಾವಿಗೆ ಪೂರಕ ವಾತಾವರಣ ಸೃಷ್ಟಿಸಿತ್ತು. ಇದೀಗ ಹೆಚ್ಚಿನ ಮಟ್ಟದಲ್ಲಿ ಈ ಮಾವನ್ನು ಬೆಳೆಯಲಾಗುತ್ತಿದೆ.

  1. ಜಪಾನ್‌ನ ಮಿಯಾಜಾಕಿ ನಗರದಲ್ಲಿ ಮಾವುಗಳನ್ನು ಬೆಳೆಯಲಾಗುತ್ತದೆ
  2. ಈ ಮಾವಿನ ಹಣ್ಣುಗಳು ಸಾಮಾನ್ಯ ಮಾವಿನ ಹಣ್ಣಿಗಿಂತ 350 ಗ್ರಾಂ ಹೆಚ್ಚು ತೂಗುತ್ತವೆ
  3. ಮಿಯಾಝಾಕಿ ಮಾವಿನಹಣ್ಣಿನಲ್ಲಿ ಸಾಮಾನ್ಯ ಮಾವಿನಹಣ್ಣುಗಳಿಗಿಂತ 15% ಹೆಚ್ಚು ಸಕ್ಕರೆ ಅಂಶವಿದೆ
  4. ಈ ಮಾವುಗಳನ್ನು ಏಪ್ರಿಲ್ ಮತ್ತು ಆಗಸ್ಟ್ ನಡುವಿನ ಗರಿಷ್ಠ ಸುಗ್ಗಿಯ ಸಮಯದಲ್ಲಿ ಬೆಳೆಯಲಾಗುತ್ತದೆ
  5. ಮಿಯಾಜಾಕಿ ಮಾವಿನಹಣ್ಣುಗಳನ್ನು ಸೂರ್ಯನ ಮೊಟ್ಟೆಗಳು ಎಂದೂ ಕರೆಯುತ್ತಾರೆ 
  6. ಮಾವಿನಹಣ್ಣುಗಳು ತಮ್ಮ ಬೆಳವಣಿಗೆಗೆ ಬಿಸಿ ವಾತಾವರಣ, ಸೂರ್ಯನ ಬೆಳಕು ಮತ್ತು ಹೇರಳವಾದ ಮಳೆಯ ಅಗತ್ಯವಿರುತ್ತದೆ. 
  7. ಮಿಯಾಝಾಕಿ ಮಾವಿನಹಣ್ಣುಗಳು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ, ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ 2.7 ಲಕ್ಷದ ಭಾರಿ ಬೆಲೆಗೆ ಮಾರಾಟವಾಗಿದೆ. 
  8. ಇದು ಇರ್ವಿನ್ ಮಾವಿನ ಒಂದು ವಿಧವಾಗಿದ್ದು ಇದು ಹಳದಿ ಬಣ್ಣದ ಪೆಲಿಕನ್ ಮಾವಿನ ಬಣ್ಣದಿಂದ ಭಿನ್ನವಾಗಿದೆ. 
  9. ಮಿಯಾಜಾಕಿ ಮಾವಿನಹಣ್ಣುಗಳು ಓಕಿನಾವಾ ನಂತರ ಜಪಾನ್‌ನಲ್ಲಿ ಬೆಳೆಯುವ ಎರಡನೇ ದೊಡ್ಡ ಮಾವಿನ ತಳಿಯಾಗಿದೆ.
  10. ಮಿಯಾಝಾಕಿ ಮಾವಿನ ಹಣ್ಣಿನಲ್ಲಿ ಫೋಲಿಕ್ ಆಮ್ಲದ ಜೊತೆಗೆ ಆಂಟಿಆಕ್ಸಿಡೆಂಟ್ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ.

ಅತ್ಯುನ್ನತ ಗುಣಮಟ್ಟದ ಮಿಯಾಝಾಕಿ ಮಾವುಗಳನ್ನು ‘ತೈಯೊ-ನೋ-ಟೊಮಾಗೊ’ ಅಥವಾ ‘ಎಗ್ಸ್ ಆಫ್ ಸನ್‌ಶೈನ್’ ಎಂದು ಬ್ರಾಂಡ್ ಮಾಡಿ ಮಾರಾಟ ಮಾಡಲಾಗುತ್ತದೆ. ಈ ಮಾವು ದೈತ್ಯ ಕೆಂಪು ಡೈನೋಸಾರ್ ಮೊಟ್ಟೆಯಂತೆ ಕಾಣುತ್ತದೆ. ಈ ತಳಿಯ ಒಂದು ಮಾವು 350 ಗ್ರಾಂಗಳಷ್ಟು ತೂಗುತ್ತದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ