ಐಪಿಎಲ್ ನಲ್ಲಿ ಬರೋಬ್ಬರಿ 24.75 ಕೋಟಿಗೆ ಸೇಲ್ ಆಗಿ ಭರ್ಜರಿ ದಾಖಲೆ ಸೃಷ್ಟಿಸಿದ ಮಿಚೆಲ್ ಸ್ಟಾರ್ಕ್..!
ಈ ಬಾರಿಯ ಐಪಿಎಲ್ ಹರಾಜು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಪ್ಯಾಟ್ ಕಮಿನ್ಸ್ ಅವರು 20.50 ಕೋಟಿ ರೂಗೆ ಹೈದರಾಬಾದ್ ತಂಡದ ಪಾಲಾಗಿ ದಾಖಲೆ ಬರೆದರೆ, ಕೆಲವೇ ನಿಮಿಷಗಳಲ್ಲಿ ಮಿಚೆಲ್ ಸ್ಟಾರ್ಕ್ ಅವರು ಈ ದಾಖಲೆ ಮುರಿದಿದ್ದಾರೆ.
ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಬರೋಬ್ಬರಿ 24.75 ಕೋಟಿ ರೂ ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿ ಐಪಿಎಲ್ ದಾಖಲೆ ಬರೆದರು.
ಕಳೆದ ಸೀಸನ್ ನಲ್ಲಿ ಸ್ಯಾಮ್ ಕರ್ರನ್ ಅವರು 18 ಕೋಟಿ ರೂ ಪಡೆದು ದುಬಾರಿ ಆಟಗಾರನಾಗಿದ್ದರು. ಆದರೆ ಇಂದಿನ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಅವರು 20.50 ಕೋಟಿ ರೂ ಪಡೆದಿದ್ದರು.
ಆದರೆ ಕೆಲವೇ ಕ್ಷಣದಲ್ಲಿ ಸ್ಟಾರ್ಕ್ ಈ ದಾಖಲೆ ಮುರಿದಿದ್ದಾರೆ. ಹಲವು ವರ್ಷಗಳ ಬಳಿಕ ಐಪಿಎಲ್ ಆಡಳಿದ ಸ್ಟಾರ್ಕ್ ಗೆ ಆರಂಭದಲ್ಲಿ ಮುಂಬೈ ಮತ್ತು ಡೆಲ್ಲಿ ತಂಡಗಳು ಬಿಡ್ಡಿಂಗ್ ನಡೆಸಿದವು. ಬಳಿಕ ಕೆಕೆಆರ್ ಮತ್ತು ಗುಜರಾತ್ ನಡುವೆ ಯುದ್ದವೇ ನಡೆಯಿತು. ಕೊನೆಗೆ 24.75 ಕೋಟಿ ರೂ ಗೆ ಕೆಕೆಆರ್ ಪಾಲಾದರು.
IPL 2024 Auction: ಚೆನ್ನೈ ಪಾಲಾದ ಕನ್ನಡಿಗ ರಚಿನ್ – ಕಿವೀಸ್ ಫ್ಲೇವರ್ ಆಯ್ತು ಸೂಪರ್ ಕಿಂಗ್ಸ್!
ದುಬೈ: ಐಪಿಎಲ್ ಮಿನಿ ಹರಾಜಿನಲ್ಲಿ ಬೆಂಗಳೂರು ಮೂಲದ ರಚಿನ್ ರವೀಂದ್ರ (Rachin Ravindra) ಚೆನ್ನೈ ಸೂಪರ್‌ಕಿಂಗ್ಸ್ (CSK) ತಂಡದ ಪಾಲಾಗಿದ್ದಾರೆ. ಇದರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಕಿವೀಸ್ ಫ್ಲೇವರ್ ಬಿರುದು ಕೊಟ್ಟಿದ್ದಾರೆ.
ಈಗಾಗಲೇ ಕಿವೀಸ್ ತಂಡದ ಡಿವೋನ್ ಕಾನ್ವೆ, ಮಿಚೆಲ್ ಸ್ಯಾಂಟ್ನರ್ ಸಿಎಸ್‌ಕೆ ತಂಡದಲ್ಲಿ ಮಿಂಚಿದ್ದಾರೆ. ಇದೀಗ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಅವರನ್ನ 1.80 ಕೋಟಿ ರೂ.ಗೆ ಹಾಗೂ ಡೇರಿಲ್ ಮಿಚೆಲ್ (Daryl Mitchell) ಅವರನ್ನ 14 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ತಂಡದ ಬಲ ಮತ್ತಷ್ಟು ಹೆಚ್ಚಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ನಲ್ಲಿದ್ದ ಶಾರ್ದೂಲ್ ಠಾಕೂರ್ ಅವರನ್ನು 4 ಕೋಟಿ ರೂ.ಗೆ ಚೆನ್ನೈ ತಂಡ ಖರೀದಿಸಿದೆ.
ಅಲ್ಲದೇ ಹರ್ಷಲ್ ಪಟೇಲ್ ಅವರನ್ನು 11.75 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್, ಅಲ್ಜಾರಿ ಜೋಸೆಫ್ ಅವರನ್ನ 11.50 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್, ಉಮೇಶ್ ಯಾದವ್ ಅವರನ್ನ 5.80 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್, ದಕ್ಷಿಣ ಆಫ್ರಿಕಾದ ಜೆರಾಲ್ಟ್ ಕೋಟ್ಜಿ ಅವರನ್ನ 5 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆ.
ಇನ್ನೂ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ್ದ ಟ್ರಾವಿಸ್ ಹೆಡ್ 6.80 ಕೋಟಿ ರೂ.ಗೆ ಎಸ್‌ಆರ್‌ಹೆಚ್ ಪಾಲಾದರೆ, ವೆಸ್ಟ್ ಇಂಡೀಸ್ ತಂಡದ ನಾಯಕ ರೋವ್ಮನ್ ಪೋವೆಲ್ 7.40 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ.
20.50ಕೋಟಿ ರೂ.ಗೆ ಬಿಕರಿಯಾದ ಪ್ಯಾಟ್ ಕಮ್ಮಿನ್ಸ್:
ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಬರೋಬ್ಬರಿ 20.50 ರೂ.ಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.