ಅಪ್ರಾಪ್ತ ಬಾಲಕಿಗೆ ಬ್ಲ್ಯಾಕ್ ಮೇಲ್ ಮಾಡ್ತಿದ್ದ ಯುವಕನ ಬಂಧನ!
ಕೊಪ್ಪಳ, (ಸೆಪ್ಟೆಂಬರ್, 04): ಅಪ್ರಾಪ್ತ ಬಾಲಕಿಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್(blackmailing) ಮಾಡುತ್ತಿದ್ದ ಯುವಕನೋರ್ವನ್ನು ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ(Koppal) ಜಿಲ್ಲೆಯ ಗಂಗಾವತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಪ್ರೀತಿ-ಪ್ರೇಮ (Love) ನಾಟಕವಾಡಿ ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮುಸ್ತಾಫಾ ಎನ್ನುವಾತನ್ನನ್ನು ಗಂಗಾವತಿ ಪೊಲೀಸರು ಬಂಧಿಸಿದ್ದಾರೆ.
ಇನ್ಸ್ಟಾಗ್ರಾಮ್ ಮೂಲಕ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಬಳಿಕ ಪ್ರೀತಿ ಪ್ರೇಮ ನಾಟಕವಾಡಿದ್ದಾನೆ. ಹೀಗೆ ಒಂದು ದಿನ ಪ್ರೀತಿ ನಾಟಕದೊಂದಿಗೆ ನಂಬಿಸಿ ವಿಡಿಯೋ ಕಾಲ್ನಲ್ಲಿ ವಿದ್ಯಾರ್ಥಿನಿಯನ್ನು ಬೆತ್ತಲಾಗುವಂತೆ ಹೇಳಿ ಅದನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಹೀಗೆ ಪ್ರತಿ ಬಾರಿಯೂ ಸಹ ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸುತ್ತಿದ್ದ. ಆದ್ರೆ, ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದಾಗ ಆ ವಿಡಿಯೋವನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ. ಇದರಿಂದ ಬೇಸತ್ತು ವಿದ್ಯಾರ್ಥಿನಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ದೂರಿನಂತೆ ಪೊಲೀಸರು ಇದೀಗ ಆರೋಪಿ ಮುಸ್ತಾಫನನ್ನು ಪೋಕ್ಸೊ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ.
ತಂದೆಗೆ ಹುಷಾರಿಲ್ಲದ ಕಾರಣ ಚಿಕಿತ್ಸೆ ಕೊಡಿಸಲು ವಿದ್ಯಾರ್ಥಿನಿ, ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ತಾಫ್ ಪರಿಚಯ ಮಾಡಿಕೊಂಡಿದ್ದ. ಬಳಿಕ ಇನ್ಸ್ಟಾಗ್ರಾಮ್ ಐಡಿ ಕೇಳಿ ಪಡೆದುಕೊಂಡಿದ್ದ. ನಂತರ ಇಬ್ಬರ ನಡುವೆ ಚಾಟಿಂಗ್, ಮಾತುಕತೆ ಶುರುವಾಗಿದೆ. ಅಲ್ಲದೇ ಭೇಟಿಯಾದಗ ಅನುಚಿವಾಗಿ ವರ್ತಿಸಿದ್ದಾನೆ. ಅಲ್ಲದೇ ಒಂದು ದಿನ ರಾತ್ರಿ ಫೋನ್ ಮಾಡಿ ಬೆತ್ತಲೆಯಾಗುವಂತೆ ಒತ್ತಾಯಿಸಿದ್ದ. ಇದಕ್ಕೆ ವಿದ್ಯಾರ್ಥಿನಿ ಒಪ್ಪದಿದ್ದಾಗ, ನಾನು ನಿನ್ನ ತುಂಬಾ ಲವ್ ಮಾಡುತ್ತೇನೆ. ಮುಂದೆ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಬಾಲಕಿ, ವಿಡಿಯೋ ಕಾಲ್ನಲ್ಲಿ ನಗ್ನಳಾಗಿದ್ದಾಳೆ. ಅದನ್ನು ರೆಕಾರ್ಡ್ ಮಾಡಿಕೊಂಡಿದ್ದ ಮುಸ್ತಾಫ್ , ಪದೇ ಪದೇ ವಿಡಿಯೋ ಕಾಲ್ ಮಾಡಿ ನಗ್ನವಾಗಲು ಹೇಳುತ್ತಿದ್ದನಂತೆ. ಇದಕ್ಕೆ ವಿದ್ಯಾರ್ಥಿನಿ ಒಪ್ಪದಿದ್ದಕ್ಕೆ ಆ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ಕೊನೆಗೆ ಗಂಗಾವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಬೆಳಗಾವಿ: ಲೋಕಾಯುಕ್ತ ಎಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಅರೆಸ್ಟ್, ಮತ್ತೋರ್ವ ಎಸ್ಕೇಪ್
ಬೆಳಗಾವಿ, ಸೆ.04: ಕಳೆದೆರಡು ದಿನಗಳ ಹಿಂದೆ ಲೋಕಾಯುಕ್ತ ಅಧಿಕಾರಿ ಎಂದು ನಕಲಿ ಗುರುತನ್ನು(Fake officer) ತೋರಿಸಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್(Blackmailing) ಮಾಡುತ್ತಿದ್ದ ಆರೋಪದ ಮೇಲೆ ಬೆಳಗಾವಿ ಮೂಲದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು(Bengaluru Police) ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ಶನಿವಾರ ಮಾಹಿತಿ ನೀಡಿದರು. ಸಂತೋಷ್ ಕೊಪ್ಪದ್ ಬಂಧಿತ ಆರೋಪಿ. ಈತನ ಸಹಚರ ಬೈಲಹೊಂಗಲದ ದೇಶನೂರು ನಿವಾಸಿ ವಿಶಾಲ್ ಪಾಟೀಲ್ ತಲೆಮರೆಸಿಕೊಂಡಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಇಬ್ಬರು ಆರೋಪಿಗಳು ತಮ್ಮನ್ನು ಲೋಕಾಯುಕ್ತ ಅಧಿಕಾರಿಗಳು ಎಂದು ಹೇಳಿಕೊಂಡು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ದೂರಿನ ಬಳಿಕ ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ ಪೊಲೀಸರು, ಪಿಡಬ್ಲ್ಯುಡಿ ಅಧಿಕಾರಿಗಳು ಎಂಬ ನೆಪದಲ್ಲಿ ಆರೋಪಿಗಳಿಗೆ ದೂರವಾಣಿ ಕರೆ ಮಾಡಿ ಲಂಚ ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಆರೋಪಿಗಳು ಲಂಚ ಪಡೆಯಲು ಬಂದಾಗ ಸಂತೋಷ್ ಕೊಪ್ಪದ್ ಎಂಬಾತನನ್ನು ಬಂಧಿಸಿದ್ದಾರೆ. ಈ ವೇಳೆ ಮತ್ತೋರ್ವ ಆರೋಪಿ ಎಸ್ಕೇಪ್ ಆಗಿದ್ದಾನೆ.