ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಮೇಶ್ ಜಾರಕಿಹೊಳಿಗೆ ಸಚಿವ ಲಾಡ್ ಸವಾಲು!

Twitter
Facebook
LinkedIn
WhatsApp
ರಮೇಶ್ ಜಾರಕಿಹೊಳಿಗೆ ಸಚಿವ ಲಾಡ್ ಸವಾಲು!

ಧಾರವಾಡ :  ರಾಜ್ಯ ಸರಕಾರವು ಬೀಳಿಸುವ ಬಗ್ಗೆ ಪದೇ ಪದೇ ರಮೇಶ್ ಜಾರಕಿಹೊಳಿ ಮಾತನಾಡುತ್ತಿದ್ದು, ಆ ಮಾದರಿ, ಈ ಮಾದರಿ ಎಂಬುದಾಗಿ ಹೇಳುವ ಬದಲು ಬೀಳಿಸೋದಾದರೆ ಒಮ್ಮೆ ಸರಕಾರ ಕೆಡವಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸುತ್ತೇನೆ, ಬೀಳಿಸುತ್ತೇನೆ ಅಂತ ರಮೇಶ್ ಜಾರಕಿಹೊಳಿ ಹೇಳುತ್ತಲೇ ಇದ್ದಾರೆ.ಒಮ್ಮೆ ಬೀಳಿಸಿ ಬಿಡ್ಲಿ ಬಿಡ್ರಿ. ಅದೇನು ಚೌಕಬಾರಾ ಆಟವಾ? ಪ್ರತಿಯೊಬ್ಬರು ಸರ್ಕಾರ ಕೆಡುವುತ್ತೇವೆ ಅಂತಾರೆ. ಮಹಾರಾಷ್ಟ್ರ ಮಾದರಿ, ಆ ಮಾದರಿ ಈ ಮಾದರಿ ಅಂತಾರೆ. ಹೀಗಾಗಿ ಸರ್ಕಾರ ಕೆಡುವುದಾಗಿ ಹೇಳಿದವರನ್ನೇ ಹೆಚ್ಚಿಗೆ ಕೇಳಿರಿ ಎಂದರು.

ಬಿಜೆಪಿಗೆ ಚುನಾವಣೆ ಮಾತ್ರ ಆಸಕ್ತಿ ಇರೋದು.ಚುನಾವಣೆ ಮತ್ತು ಅಧಿಕಾರದಲ್ಲಿ ಮಾತ್ರ ಬಿಜೆಪಿಗೆ ಆಸಕ್ತಿ. ಹೀಗಾಗಿ ಕಾಂಗ್ರೆಸ್ ಸರಕಾರ ಬಂದು ನೂರು ದಿನ ಆಯ್ತು. ಈಗಲೂ ಅಭಿವೃದ್ಧಿ ಆಗಿಲ್ಲ ಎಂಬುದನ್ನೇ ಹೇಳುತ್ತಾ ಕೂತಿದ್ದಾರೆ ಎಂದರು‌.

ಸಚಿವರ ಬದಲಾವಣೆ ಕೂಗು ಇರುವುದು ಸಹಜ. ಆದರೆ ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Kerala: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಕೇಸು

ಕೊಚ್ಚಿ: ಸಮಾಜದ ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಕೇರಳ ಪೊಲೀ ಸರು ಕೇಸು ದಾಖಲಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ಕೇರಳದಲ್ಲಿ ತುಷ್ಟೀಕರಣ ರಾಜಕೀಯ ನಡೆಯು ತ್ತಿದೆ ಎಂದು ರವಿವಾರ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಆರೋಪಿಸಿದ್ದರು. ಅದಕ್ಕೆ ಪೂರಕವಾಗಿ ಈ ಬೆಳವಣಿಗೆ ನಡೆದಿದೆ. ಪೊಲೀಸರ ಕ್ರಮವನ್ನು ಟೀಕಿಸಿದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಪಿಣರಾಯಿ ವಿಜಯನ್‌ ಅವರು, ಎಸ್‌ಡಿಪಿಐ, ಪಿಎಫ್ಐ, ಹಮಾಸ್‌ನಂಥ ಉಗ್ರ ಸಂಘಟನೆಗಳನ್ನು ಬೆಂಬಲಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಕೇಂದ್ರ ಸಚಿವರ ವಿರುದ್ಧ ಕೇಸು ದಾಖಲಿಸಿರುವುದು ಕೇರಳದಲ್ಲಿ ವಿಭಜನಾತ್ಮಕ ಶಕ್ತಿಗಳಿಗೆ ಕುಮ್ಮಕ್ಕು ನೀಡಿದಂತೆ ಆಗಲಿದೆ ಎಂದು ಬಿಜೆಪಿ ನಾಯಕ ಕೆ. ಸುರೇಂದ್ರನ್‌ ದೂರಿದ್ದಾರೆ.

ನ.29ರ ವರೆಗೆ ನ್ಯಾಯಾಂಗ ವಶಕ್ಕೆ:
ಕೊಚ್ಚಿಯಲ್ಲಿ ರವಿವಾರ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಡೊಮಿನಿಕ್‌ ಮಾರ್ಟಿನ್‌ನಲ್ಲಿ ನ.29ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕೋರ್ಟೊಂದು ಆದೇಶ ನೀಡಿದೆ. ಇದೇ ವೇಳೆ, ಕೇವಲ 3 ಸಾವಿರ ರೂ.ಗಳನ್ನು ವೆಚ್ಚ ಮಾಡಿ ಬಾಂಬ್‌ ಸಿದ್ಧಪಡಿಸಿದ್ದ ಬಗ್ಗೆ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ