ಬಿಟ್ ಕಾಯಿನ್ ಹೆಸರಲ್ಲಿ ಹಣ ಡಬಲ್ ಮಾಡುತ್ತೇವೆ ಎಂದು ಲಕ್ಷಾಂತರ ರೂಪಾಯಿ ಪಂಗನಾಮ ; ಅಪ್ಪ - ಮಗ ಅಂದರ್!
ಬೆಂಗಳೂರು, ಅ.21: ಬಿಟ್ ಕಾಯಿನ್ನೆ ಪದಲ್ಲಿ ಹಣ ಡಬಲ್ ಮಾಡುತ್ತೇವೆ ಎಂದು ಜನರಿಂದ ಲಕ್ಷಾಂತರ ರೂ. ಹಣ ಪಡೆದು ಮೋಸ ಮಾಡುತ್ತಿದ್ದ ಅಪ್ಪ-ಮಗನನ್ನು ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಂದೆ ಸತೀಶ್ ಹಾಗೂ ಮಗ ಶ್ರೀಕಾಂತ್ ಬಂಧಿತ ಆರೋಪಿಗಳು. ಇನ್ನು ಸತೀಶ್, ಬೆಂಗಳೂರಿನ ಗಾಂಧಿಬಜಾರ್, ಅವೆನ್ಯೂ ರೋಡ್, ಬಳೆ ಪೇಟೆ ಹಾಗೂ ಬಸವನಗುಡಿ ಸೇರಿ ಒಟ್ಟು 4 ಕಡೆ ಇರುವ ಪಂಚ ಐಶ್ವರ್ಯ ಕೋ ಆಪರೇಟಿವ್ ಸೊಸೈಟಿ ಪಾಲುದಾರರಾಗಿದ್ದಾರೆ. ಸಾರ್ವಜನಿಕರಿಂದ ನಿಮ್ಮ ಹಣ ಡಬಲ್ ಮಾಡುತ್ತೀವಿ ಎಂದು ಹಣ ಪೀಕುತ್ತಿದ್ದ ಇಬ್ಬರು ಇದೀಗ ಅಂದರ್ ಆಗಿದ್ದಾರೆ.
ಬಿಟ್ ಕಾಯಿನ್ ಡಬಲ್ ಮನಿ ಆಸೆ ತೋರಿಸಿ ವಂಚನೆ ಆರೋಪ
2021-2022 ರಲ್ಲಿ ಜಿಜಿಗೇಮಿಂಗ್ ಆ್ಯಪ್ ತರುತ್ತೇವೆ ಎಂದು ಹೇಳಿದ್ದ ಇವರು, ಈ ಆ್ಯಪ್ ಮುಖಾಂತರ ಜನರಿಗೆ ಬಿಟ್ ಕಾಯಿನ್ ಅಸೆ ತೋರಿಸುತ್ತಿದ್ದರು. ಜನರಿಂದ ದಿನಕ್ಕೆ 10 ಸಾವಿರ ರೂಗಳು ಇನ್ವೆಸ್ಟ್ಮೆಂಟ್ ಮಾಡಿದರೆ, ತಿಂಗಳಲ್ಲಿ 45 ಸಾವಿರ ಲಾಭ ಎಂದು ಹೇಳುತ್ತಿದ್ದರು. ಇನ್ನು ಶ್ರೀಕಾಂತ್ ಪ್ರತಿಷ್ಠಿತ ಹೊಟೇಲಿಗೆ ಇನ್ವೆಸ್ಟರ್ಸ್ ಕರೆಸಿ ಮೋಸ ಮಾಡುತ್ತಿದ್ದ ಆರೋಪ ಕೂಡ ಕೇಳಿಬಂದಿದೆ. ಜೊತೆಗೆ ಬ್ಯಾಂಕ್ ವಂಚನೆ ಸಂಬಂಧ ವಂಚನೆಗೊಳಗಾದವರು ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಇದೀಗ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಅವರಿಂದ 6 ಕಂಪ್ಯೂಟರ್, 4 ಮೊಬೈಲ್ ಫೋನ್, 2 ಲ್ಯಾಪ್ ಟಾಪ್ ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು, ವಿಚಾರಣೆ ಮುಂದುವರೆಸಿದ್ದಾರೆ
ನಟೋರಿಯಸ್ ಹ್ಯಾಕರ್ ಬಂಧಿಸಿದ್ದ ಎಸ್ಐಟಿ
ಇನ್ನುಇದೇ ಅಕ್ಟೋಬರ್ 05 ರಂದು ಬಿಟ್ ಕಾಯಿನ್ ಹಗರಣದ ತನಿಖೆ ವೇಳೆ ನಟೋರಿಯಸ್ ಹ್ಯಾಕರ್ನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ರಾಜೇಂದ್ರಸಿಂಗ್ ಬಂಧಿತ ಆರೋಪಿ. ಇನ್ನುಇತ ಸರ್ಕಾರಿ ಹಾಗೂ ಖಾಸಗಿ ವೆಬ್ ಸೈಟ್ಗಳನ್ನು ಹ್ಯಾಕ್ ಮಾಡುತ್ತಿದ್ದ. ಈ ಹ್ಯಾಕರ್ಗಾಗಿ ನಾಲ್ಕು ವರ್ಷಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಹುಡುಕಾಟ ನಡೆಸಿದ್ದು, ಸಿಐಡಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದ ತಂಡ ಬಂಧಿಸಿತ್ತು.