MG Astor 2024 : ಹೊಸ ವಿನ್ಯಾಸ ಆಕರ್ಷಕ ಬೆಲೆಯಲ್ಲಿ ಎಂಜಿ ಆಸ್ಟರ್ ಲಭ್ಯ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ತನ್ನ ಎಂಜಿ ಆಸ್ಟರ್ (MG Astor) ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಎಂಜಿ ಆಸ್ಟರ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9.98 ಲಕ್ಷದಿಂದ ಪ್ರಾರಂಭವಾಗಿದೆ. ಈ ಹೊಸ ಮಾದರಿಯು ಆಕರ್ಷಕ ಬೆಲೆ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.
ಈ ಹೊಸ ಎಂಜಿ ಆಸ್ಟರ್ ಎಸ್‍ಯುವಿಯು ಸ್ಪ್ರಿಂಟ್, ಶೈನ್, ಸೆಲೆಕ್ಟ್, ಶಾರ್ಪ್ ಪ್ರೊ ಮತ್ತು ಹೊಸದಾಗಿ ಪರಿಚಯಿಸಲಾದ ಸ್ಯಾವಿ ಪ್ರೊ. ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊ ಎಂಜಿ ಆಸ್ಟರ್ ಎಸ್‍ಯುವಿ 1.5 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ ಅನ್ನು ಒಳಗೊಂಡಿರುತ್ತವೆ. ಇದು 110 PS ಪವರ್ ಮತ್ತು 144 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 8-ಸ್ಪೀಡ್ CVT ಗೇರ್‌ಬಾಕ್ಸ್ ಅನ್ನು ಒಳಗೊಂಡಿವೆ. ಇದು ಸ್ಪ್ರಿಂಟ್, ಶೈನ್, ಸೆಲೆಕ್ಟ್ ಮತ್ತು ಶಾರ್ಪ್ ಪ್ರೊ ಟ್ರಿಮ್‌ಗಳಲ್ಲಿ ಲಭ್ಯವಿರುವ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ, ಬೆಲೆ ಕ್ರಮವಾಗಿ 9.98 ಲಕ್ಷ, ರೂ. 11.68 ಲಕ್ಷ, ರೂ. 12.98 ಲಕ್ಷ ಮತ್ತು ರೂ. 14.40 ಲಕ್ಷವಾಗಿದೆ.
ಇನ್ನು ನ್ಯಾಚುರಲ್ ಇನ್ಸ್ಪೈರರ್ಡ್ ಪೆಟ್ರೋಲ್-CVT ಸಂಯೋಜನೆಯನ್ನು ಸೆಲೆಕ್ಟ್, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ರೂಪಾಂತರಗಳೊಂದಿಗೆ ನೀಡಲಾಗುತ್ತದೆ, ಇದರ ಬೆಲೆ ಕ್ರಮವಾಗಿ ರೂ. 13.98 ಲಕ್ಷ, ರೂ 15.68 ಲಕ್ಷ ಮತ್ತು ರೂ 16.58 ಲಕ್ಷವಾಗಿದೆ. ಸಾಂಗ್ರಿಯಾ ಬಣ್ಣದ ಯೋಜನೆಯಲ್ಲಿರುವ Savvy Pro CVT ರೂಪಾಂತರದ ಬೆಲೆ 16.68 ಲಕ್ಷ ರೂ. ಆಗಿದೆ.
ಹೆಚ್ಚುವರಿಯಾಗಿ, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪ್ರತ್ಯೇಕವಾಗಿ Savvy Pro ಟ್ರಿಮ್‌ಗಾಗಿ ಕಾಯ್ದಿರಿಸಲಾಗಿದೆ. ಈ ಮಾದರಿಯ ಬೆಲೆಯು ರೂ.17.89 ಲಕ್ಷಕ್ಕೆ ಲಭ್ಯವಿದೆ. ಈ ಎಂಜಿ ಆಸ್ಟರ್ ಮಾದರಿಯು ಐವರಿ ಮತ್ತು ಸಾಂಗ್ರಿಯಾ ಎಂಬ ಎರಡೂ ಬಾಹ್ಯ ಬಣ್ಣಗಳು ಎಲ್ಲಾ ರೂಪಾಂತರಗಳಲ್ಲಿ ಲಭ್ಯವಿವೆ.
2024ರ ಎಂಜಿ ಆಸ್ಟರ್ ಆಟೋ IRVM ಮತ್ತು ವೆಂಟಿಲೇಟೆಡ್ ಸೀಟ್‌ಗಳನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯಗಳ ನವೀಕರಣಗಳನ್ನು ಹೊಂದಿದೆ, ಇದು Savvy Pro ಟ್ರಿಮ್‌ಗಾಗಿ ಪ್ರತ್ಯೇಕವಾಗಿ ಲಭ್ಯವಿದೆ. ಸೆಲೆಕ್ಟ್ ಟ್ರಿಮ್‌ನಿಂದ ಪ್ರಾರಂಭಿಸಿ, ಈ ಎಸ್‍ಯುವಿ i-Smart 2.0 ಸಂಪರ್ಕಿತ ತಂತ್ರಜ್ಞಾನ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, ಪನರೊಮಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ನೀಡುತ್ತದೆ.
ಹೊಸ ಎಂಜಿ ಆಸ್ಟರ್ ಎಸ್‍ಯುವಿಯು ಲೆವೆಲ್ 2 ADAS ತಂತ್ರಜ್ಞಾನವನ್ನು ಉಳಿಸಿಕೊಂಡಿದೆ, 14 ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೋಂದಿರುತ್ತದೆ. ಈ ಎಸ್‍ಯುವಿಯಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲೆದರ್ ಅಪ್ಹೋಲ್‌ಸ್ಟರಿ ಮತ್ತು ಲೆದರ್ ನಿಂದ ಸುತ್ತುವರೆದ ಸ್ಟೀರಿಂಗ್ ವ್ಹೀಲ್ ಮತ್ತು ಬ್ಲೈಂಡ್-ಸ್ಪಾಟ್ ಡಿಟೆಕ್ಷನ್ ಅನ್ನು ಹೊಂದಿದೆ.
ಇದರೊಂದಿಗೆ 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ ಮತ್ತು ರೈನ್-ಸೆನ್ಸಿಂಗ್ ವೈಪರ್‌ಗಳು, 6-ವೇ ಪವರ್-ಹೊಂದಾಣಿಕೆ ಡ್ರೈವರ್ ಸೀಟ್, 6-ಸ್ಪೀಕರ್ ಮತ್ತು ಟ್ವೀಟರ್‌ಗಳು, ಲೇನ್ ಚೇಂಜ್ ಅಸಿಸ್ಟ್, ಹಿಂಬದಿಯ ಅಡ್ಡ-ಟ್ರಾಫಿಕ್ ಎಚ್ಚರಿಕೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಅನ್ನು ಹೊಂದಿದೆ.