ಮೆಟ್ರೋ ಕಾಮಗಾರಿ ವೇಳೆ ಕ್ರೇನ್ ಪಲ್ಟಿ-ತಪ್ಪಿದ ಬಾರಿ ಅನಾಹುತ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಮೆಟ್ರೋ (Namma Metro) ಮಹಾ ದುರಂತವೊಂದು ತಪ್ಪಿದೆ. ಕೆಲವೇ ಕೆಲವು ಸೆಕೆಂಡ್ ಗಳಲ್ಲಿ ವಾಹನ ಸವಾರರು ಬಚಾವ್ ಆಗಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (BMRCL) ಮೆಟ್ರೋ ಪಿಲ್ಲರ್ (Metro Piller) ದುರಂತಕ್ಕೆ ಈ ಹಿಂದೆ ತಾಯಿ-ಮಗು ಬಲಿಯಾಗಿದ್ರು. ಈ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಆದರೆ ಅದೃಷ್ಟವಶಾತ್ ಯಾವ್ದೇ ಪ್ರಾಣಹಾನಿಯಾಗಿಲ್ಲ. ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ (Silk Board Junction) ಬಳಿ ಮೆಟ್ರೋ ಪಿಲ್ಲರ್ ಅಳವಡಿಕೆಗೆ ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕ್ರೇನ್ ವಾಹನವೊಂದು ಮಣ್ಣನ್ನು ಹೊರ ತೆಗೆಯುತ್ತಿತ್ತು. ಆಗ ಕ್ರೇನ್ ವಾಹನನಕ್ಕೆ ಓವರ್ ಲೋಡ್ ಆಗಿ, ಕ್ರೇನ್ (Craine) ವಾಹನವೇ ಸರ್ವಿಸ್ ರಸ್ತೆಗ ಪಲ್ಟಿಯಾಗಿ, ಪಕ್ಕದಲ್ಲಿದ್ದ ರಾಜಕಾಲುವೆಯ ತಡೆಗೊಡೆಗೆ ಅಂಟಿಕೊಂಡು ನಿಂತಿದೆ.
ಘಟನಾ ಸ್ಥಳದಲ್ಲಿ ಕ್ರೇನ್ ತೆರವು ಕಾರ್ಯಾಚರಣೆ ಹಿನ್ನಲೆ ಬೊಮ್ಮನಹಳ್ಳಿಯಿಂದ ಮಡಿವಾಳ ಕಡೆ ಬರುವ ರಸ್ತೆಯನ್ನ ಬಂದ್ ಮಾಡಲಾಗಿತ್ತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನೂ ಮೆಟ್ರೋ ಕಾಮಗಾರಿಗಳು ನಡೆಯುವ ಜಾಗಗಳಲ್ಲಿ ಯಾವ್ದೇ ಸುರಕ್ಷತಾ ಕ್ರಮಗಳಿಲ್ಲ. ಜೀವಕ್ಕೆ ಏನಾದ್ರೂ ಹಾನಿಯಾದ್ರೆ ಯಾರು ಹೊಣೆ ಅಂತ ವಾಹನ ಸವಾರರು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ್ರು.