ಮೆಟ್ರೋ ರೈಲಿನಲ್ಲಿ ಮೈಬಿಸಿ ಏರಿಸುವ ಬಟ್ಟೆ ತೊಟ್ಟು ಯುವತಿಯರ ಡಾನ್ಸ್ – ನೆಟ್ಟಿಗರಿಂದ ಫುಲ್ ಕ್ಲಾಸ್!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ರೀಲ್ಸ್ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ಹಾಟ್ ಉಡುಗೆಗಳನ್ನ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್ (Dance) ಮಾಡಿ ರೀಲ್ಸ್ ಕ್ರಿಯೇಟ್ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಅಂತಹ ಸ್ಥಳಗಳ ಪೈಕಿ ದೆಹಲಿ ಮೆಟ್ರೋ (Delhi Metro) ತಾಣವೂ ಒಂದಾಗಿದೆ.
ಹೌದು. ದೆಹಲಿ ಮೆಟ್ರೋದಲ್ಲಿ ನಡೆಯುವ ಘಟನೆಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇವೆ. ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ಬಿಕಿನಿ ತೊಟ್ಟು ಓಡಾಡಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ನಂತರ ಮೆಟ್ರೋ ಪ್ಲಾಫ್‌ಫಾರ್ಮ್‌ನಲ್ಲೇ ಪ್ರೇಮಿಗಳಿಬ್ಬರು ಲಿಪ್ ಲಾಕ್ ಮಾಡಿದ್ದ ದೃಶ್ಯ ವೈರಲ್ ಆಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ಟ್ರಾನ್ಸ್ಪರೆಂಟ್ ಹಾಟ್ ಉಡುಗೆ ತೊಟ್ಟು ಡಾನ್ಸ್ ಮಾಡಿ ಪೇಚಿಗೆ ಸಿಲುಕಿದ್ದಳು. ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ನೋಡುಗರ ಕಣ್ಣುಕುಕ್ಕುವಂತೆ ಹಾಟ್ ಉಡುಗೆ ತೊಟ್ಟು ಯುವತಿಯರಿಬ್ಬರು ಬಾಲಿವುಡ್ ಸಾಂಗ್‌ಗೆ ಡಾನ್ಸ್ ಮಾಡಿ ರೀಲ್ಸ್ ಮಾಡಿದ್ದಾರೆ. ಮೆಟ್ರೋ ಕೋಚ್ ಒಳಗೆ ಪ್ರಯಾಣಿಕರು ಇದ್ದಾರೆ ಎಂಬ ಪರಿಜ್ಞಾನವೂ ಇಲ್ಲದೇ ಮೈಬಿಸಿ ಏರಿಸುವಂತೆ ಇಬ್ಬರೂ ಹಾಟ್ ಡ್ಯಾನ್ಸ್ ಮಾಡಿದ್ದಾರೆ.
https://twitter.com/i/status/1676871173769142272
ಇದೇ ತಿಂಗಳ ಜುಲೈ 6ರಂದು ಹಸ್ನಾಜರೂರಿಹೈ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಯುವತಿಯರ ಡಾನ್ಸ್ ವೀಡಿಯೋ ಹಂಚಿಕೊಳ್ಳಲಾಗಿದ್ದು, 1.75 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮೊದಲು ಈ ವಿಡಿಯೋ ಕಂಡಾಗ ಆಕೆ ಡ್ಯಾನ್ಸ್ ಮೇಲೆ ಕೆಲ ನೆಟ್ಟಿಗರ ಗಮನ ಸೆಳೆದಿದ್ದು, ಆಕೆಯ ಬಟ್ಟೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಆಕೆಯ ನಡವಳಿಕೆ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ. ದೆಹಲಿ ಮೆಟ್ರೋ ರೈಲು ನಿಗಮಕ್ಕೂ (DMRC) ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ದೆಹಲಿ ಗಂಭೀರವಾಗಿ ಚೆಕಪ್ ಮಾಡಬೇಕು. ಇತ್ತೀಚೆಗೆ ದೆಹಲಿ ಮೆಟ್ರೋ ರೀಲ್ಸ್ ಮೇಕರ್ಸ್‌ಗಳಿಗೆ ಹೊಸ ಸ್ಥಳ ಆಗ್ಬಿಟ್ಟಿದೆ. ಡಿಎಂಆರ್‌ಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಯುವತಿಯೊಬ್ಬಳು ದೆಹಲಿ ಮೆಟ್ರೋದಲ್ಲಿ ಬಿಕಿನಿ ತೊಟ್ಟು ಸಂಚರಿಸಿದ್ದಾಗ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಎಚ್ಚರಿಕೆ ನೀಡಿತ್ತು. ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಸಾಮಾಜಿಕ ಶಿಷ್ಟಾಚಾರವನ್ನು ಮೆಟ್ರೋದಲ್ಲಿ ಅನುಸರಿಸಬೇಕಾಗುತ್ತದೆ. ಪ್ರಯಾಣಿಕರು ಇತರರ ಸಂವೇದನೆಗೆ ಧಕ್ಕೆ ತರುವಂತಹ ಉಡುಪುಗಳ್ನು ಧರಿಸಬಾರದು. ಒಂದು ವೇಳೆ ಇನ್ಮುಂದೆ ಅಂತಹ ಸನ್ನಿವೇಶಗಳು ಕಂಡುಬಂದಲ್ಲಿ ಡಿಎಂಆರ್‌ಸಿ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 59ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಸಿತ್ತು.
ಅಚ್ಚರಿಯಾದ್ರೂ ಸತ್ಯ- ಅದಾನಿಗೆ ಸೇರಿದ 6 ಸಾವಿರ ಕೆ.ಜಿಯ ಸೇತುವೆ ಕಳ್ಳತನ!
ಮುಂಬೈ: ಅದಾನಿಗೆ ಸೇರಿದ 6 ಸಾವಿರ ಕೆ.ಜಿಯ ಸೇತುವೆಯ (Bridge Missing) ಕಳ್ಳತನವಾಗಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಹೌದು. ಅಚ್ಚರಿಯಾದರೂ ಸತ್ಯ ಘಟನೆಯಾಗಿದ್ದು, ಇದು ಮುಂಬೈನ ಮಲಾಡ್‍ನಲ್ಲಿ ನಡೆದಿದೆ. ಸೇತುವೆ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
2 ಲಕ್ಷ ಮೌಲ್ಯದ ಸುಮಾರು 90 ಅಡಿ ಉದ್ದವಿರುವ ಈ ಸೇತುವೆಯನ್ನು ಮುಂಬೈನ ಮಲಾಡ್ ಪ್ರದೇಶದಲ್ಲಿ ಸಣ್ಣ ತೊರೆಯನ್ನು ದಾಟಲು ಬಳಸಲಾಗುತ್ತಿತ್ತು. ಇದೀಗ ಈ ಸೇತುವೆ ನಾಪತ್ತೆಯಾಗಿರುವುದನ್ನು ಸ್ಥಳೀಯರು ಗಮನಿಸಿದ್ದು ಕಳ್ಳತನವಾಗಿರುವುದು ಬಯಲಾಗಿದೆ. ಕಬ್ಬಿಣದ ಸೇತುವೆಯನ್ನು ಕಳ್ಳರ ಗುಂಪೊಂದು ಕೆಡವಿ ಅದನ್ನು ಟ್ರಕ್‍ಗಳಲ್ಲಿ ಸಾಗಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಅದಾನಿ ಎಲೆಕ್ಟ್ರಿಸಿಟಿ (Adani Electricity) ಸಂಸ್ಥೆಯ ಬೃಹತ್ ವಿದ್ಯುತ್ ಕೇಬಲ್‍ಗಳನ್ನು ಸಾಗಿಸುವ ಸಲುವಾಗಿ ಈ ಕಬ್ಬಿಣದ ಸೇತುವೆಯನ್ನು ಚರಂಡಿಯ ಮೇಲೆ ಇರಿಸಲಾಗಿತ್ತು. ಅದಾದ ಬಳಿಕ ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಶಾಶ್ವತ ಸೇತುವೆ ಬಂದ ನಂತರ ಅದನ್ನು ಸ್ಥಳಾಂತರಿಸಲಾಯಿತು.
ಇತ್ತ ಸ್ಥಳೀಯರ ಗಮನಕ್ಕೆ ಬಂದ ಬಳಿಕ ಸೇತುವೆ ನಾಪತ್ತೆಯಾಗಿರುವುದನ್ನು ಕಂಡು ಅದಾನಿ ಎಲೆಕ್ಟ್ರಿಸಿಟಿ ಸಂಸ್ಥೆಯು ಜೂನ್ 26ರಂದು ಪೊಲೀಸರಿಗೆ ದೂರು ನೀಡಿತ್ತು. ಈ ಸಂಬಂಧ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ಯಾಸ್ ಕಟರ್ ಯಂತ್ರಗಳೊಂದಿಗೆ ಸೇತುವೆಯತ್ತ ಸಾಗುತ್ತಿದ್ದ ಭಾರೀ ವಾಹನವನ್ನು ಪೊಲೀಸರು ಗುರುತಿಸಿದ್ದಾರೆ. ಸದ್ಯ ಕಳ್ಳತನಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಓರ್ವ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಉಳಿದ ಮೂವರು ಆತನ ಸಹಚರರು ಎನ್ನಲಾಗಿದೆ.