ಮೈಸೂರು :ಪ್ರಿಯತಮೆಗೆ ಮೆಸೇಜ್ ಮಾಡಿದ ರೂಂಮೇಟ್‍ಗೆ ಚಾಕುವಿನಿಂದ ಇರಿದ!
ಮೈಸೂರು: ತನ್ನ ಪ್ರಿಯತಮೆಗೆ ಮೆಸೇಜ್ (Message to Lover) ಮಾಡಿದನೆಂದು ಯುವಕನೊಬ್ಬ ತನ್ನ ರೂಮೇಟ್‍ಗೆ ಚಾಕು ಇರಿದ ಪ್ರಸಂಗವೊಂದು ಅರಮನೆ ನಗರಿ ಮೈಸೂರಿ (Mysuru) ನಲ್ಲಿ ನಡೆದಿದೆ. ಗಾಯಾಳುವನ್ನು ಶಿವಕುಮಾರ್ ಎಂದು ಗುರುತಿಸಲಾಗಿದ್ದು, ಈತನಿಗೆ ಸ್ನೇಹಿತ ಶ್ರೇಯಸ್ ಚಾಕು ಇರಿದಿದ್ದಾನೆ.
ನಡೆದಿದ್ದೇನು..?: ಶ್ರೇಯಸ್ ಹಾಗೂ ಶಿವಕುಮಾರ್ ಇಬ್ಬರು ಸ್ನೇಹಿತರಾಗಿದ್ದು, ಜನತಾನಗರದಲ್ಲಿ ಒಂದೇ ರೂಮಿನಲ್ಲಿ ವಾಸವಾಗಿದ್ದರು. ಶ್ರೇಯಸ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಅದೇ ಯುವತಿ ಜೊತೆ ಸ್ನೇಹಿತ ಹಾಗೂ ರೂಮೇಟ್ ಆಗಿರುವ ಶಿವಕುಮಾರ್ ಕಾಂಟಾಕ್ಟ್ ಮಾಡಿದ್ದಾನೆ. ಹೀಗೆ ಶ್ರೇಯಸ್ ಪ್ರೀತಿಸುತ್ತಿದ್ದ ಯುವತಿಗೆ ಶಿವಕುಮಾರ್ ಮೆಸೇಜ್ ಮಾಡುತ್ತಿದ್ದ. ಈ ಮೂಲಕ ಸ್ನೇಹಿತನ ಪ್ರಿಯತಮೆ ಜೊತೆ ಶಿವಕುಮಾರ್ ನಿರಂತರ ಸಂಪರ್ಕದಲ್ಲಿದ್ದನು.
ಈ ವಿಚಾರ ಶ್ರೇಯಸ್ ಗೆ ಗೊತ್ತಾಗಿ ಇಬ್ಬರ ನಡುವೆ ವಾಗ್ವಾದಗಳು ನಡೆದಿವೆ. ಅಲ್ಲದೆ ನನ್ನ ಲವ್ವರ್‍ಗೆ ಮೆಸೇಜ್ ಮಾಡಬೇಡ ಎಂದು ಶ್ರೇಯಸ್ ಎಚ್ಚರಿಕೆ ನೀಡಿದ್ದನು. ಆದರೂ ಶಿವಕುಮಾರ್ ಆಗಾಗ ಯುವತಿಗೆ ಮೆಸೇಜ್ ಮಾಡುತ್ತಿದ್ದ. ಈ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದಿದ್ದು, ಜಗಳ ತಾರಕಕ್ಕೇರಿ ಶ್ರೇಯಸ್, ಶಿವಕುಮಾರ್ ಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಶಿವಕುಮಾರ್ ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆ (Vidyaranyapuram Police Station) ಯಲ್ಲಿ ಪ್ರಕರಣ ದಾಖಲಾಗಿದೆ.