ಕ್ಯಾಂಡಿ: ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಪಾಕಿಸ್ತಾನಿ ಬೌಲರ್ ನಸೀಮ್ ಶಾ (Naseem Shah) ಜೊತೆಗೆ ಊರ್ವಶಿ ಹೆಸರು ಸಖತ್ ಸದ್ದು ಮಾಡಿತ್ತು. ಇವರಿಬ್ಬರ ಮಧ್ಯೆ ಪ್ರೀತಿಯಿದೆ ಎಂಬರ್ಥದಲ್ಲಿ ಜಾಲತಾಣದಲ್ಲಿ ಪೋಸ್ಟ್‌ಗಳು ಸಖತ್ ಹರಿದಾಡುತ್ತಿದ್ದವು. ಇದೀಗ ಇಂಡೋ-ಪಾಕ್ ಪಂದ್ಯದ ವೇಳೆ ಮತ್ತೆ ನೆಟ್ಟಿಗರು ಊರ್ವಶಿ ರೌಟೇಲಾ ಅವರ ಕಾಲೆಳೆದಿದ್ದಾರೆ.
ಊರ್ವಶಿ ರೌಟೇಲಾ ಹಸಿರು ಸೀರೆಯುಟ್ಟ ಫೋಟೋ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಫೋಟೋವನ್ನ ಹಂಚಿಕೊಂಡಿದ್ದು, ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ನಸೀಮ್ ಶಾ ಇನ್‌ಸ್ಟಾಗ್ರಾಮ್ ಖಾತೆಗೂ ಫೋಟೋವನ್ನ ಟ್ಯಾಗ್ ಮಾಡಿ, ಊರ್ವಶಿ ರೌಟೇಲಾ ಸೀಕ್ರೆಟ್ ಆಗಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡ್ತಿದ್ದಾರೆ ಅಂತಾ ಟಾಂಗ್ ಕೊಡುತ್ತಿದ್ದಾರೆ.
Urvashi Rautela is secretly supporting Pakistani team ?? ? ?#NaseemShah #INDvsPAK #INDvPAK #AsiaCup23 pic.twitter.com/Yggn7pE4M1
— Itachi ? ?? (@uchiha_spurs_10) September 2, 2023