ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾಲುವೆಯಲ್ಲಿ ಮುಳುಗಿ ವೈದ್ಯಕೀಯ ವಿದ್ಯಾರ್ಥಿ ಸಾವು

Twitter
Facebook
LinkedIn
WhatsApp
ಕಾಲುವೆಯಲ್ಲಿ ಮುಳುಗಿ ವೈದ್ಯಕೀಯ ವಿದ್ಯಾರ್ಥಿ ಸಾವು

ಮೈಸೂರು, ಅಕ್ಟೋಬರ್​​​​ 30: ಕಾಲುವೆಯಲ್ಲಿ ಮುಳುಗಿ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿರುವಂತಹ (death) ಘಟನೆ ಎಚ್.ಡಿ. ಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಮದ ಎಡದಂಡೆ ನಾಲೆಯಲ್ಲಿ ನಡೆದಿದೆ.

ಬೆಂಗಳೂರಿನ ನಿವಾಸಿ ಶೈಲೇಂದ್ರ ಎಂಬುವರ ಪುತ್ರ ಕಿಶನ್ (21) ಮೃತ ವೈದ್ಯಕೀಯ ವಿದ್ಯಾರ್ಥಿ. ಮೃತ ಕಿಶನ್ ಬೆಂಗಳೂರಿನ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿ.

ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ಆಗಮಿಸಿದ್ದು, ಎಡದಂಡೆ ನಾಲೆಗೆ ಈಜಲು ತೆರಳಿದ್ದಾರೆ. ಈ ವೇಳೆ ಈಜಲು ಬಾರದ ಕಿಶನ್ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Viral Video: ಸಮುದ್ರದೊಳಗೆ ತೇಲುತ್ತಿರುವ ಮನೆ; ನೆಟ್ಟಿಗರ ನಾನಾ ರೀತಿಯ ಪ್ರತಿಕ್ರಿಯೆ

Sea : ಮಧ್ಯಕಾಲದಲ್ಲಿ ಜನರು ಹೊಸ ಭೂಮಿ, ಸಂಪತ್ತು, ಚಿನ್ನಬೆಳ್ಳಿಯನ್ನು ಹುಡುಕಲು ಸಮುದ್ರದ ಮೂಲಕ ಪ್ರಯಾಣಿಸುತ್ತಿದ್ದರು. ಆಗ ಅವರೆಲ್ಲಾ ತಮ್ಮದೇ ಆದ ವಿಧಾನದಲ್ಲಿ ಪ್ರಯಾಣಿಸಿದರು. ಕೆಲವರು ಯಶಸ್ವಿಯೂ ಆದರು. ಅವರವರಿಗೆ ಕಂಡ ಅಚ್ಚರಿಗಳನ್ನೂ ಅನುಭವಿಸಿದರು, ಸಂಶೋಧನೆಗೂ (Research) ಒಳಪಡಿಸಿದರು ಮತ್ತು ಅಭಿವೃದ್ಧಿಗೂ ಅದು ಸಹಾಯವಾಯಿತು. ಒಟ್ಟಾರೆಯಾಗಿ ನೆಲೆ ಕಂಡುಕೊಳ್ಳಲು ಅನುಕೂಲವಾಯಿತು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ಗಮನಿಸಿ. ಸಮುದ್ರದೊಳಗೆ ಮನೆಯೊಂದು ತೇಲುತ್ತಲಿದೆ. ನೆಟ್ಟಿಗರು ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿ ಸಾಕಷ್ಟು ಜನರು ತೋಚಿದಂತೆ ಪ್ರತಿಕ್ರಿಯಿಸಿದ್ದಾರೆ.

ಅಕ್ಟೋಬರ್​ 28ರಂದು X ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈತನಕ ಸುಮಾರು 3 ಲಕ್ಷ ಜನರು ನೋಡಿದ್ದಾರೆ. ನೂರಾರು ಜನರು ಇದನ್ನು ಮರುಹಂಚಿಕೆ ಮಾಡಿದ್ದಾರೆ. ನೂರಾರು  ಜನರು ಈ ವಿಡಿಯೋದಡಿ ತಮ್ಮ ಅಭಿಪ್ರಾಯಗಳನ್ನು ತೇಲಿಸಿದ್ದಾರೆ. ನಿಮಗೂ ಈ ವಿಡಿಯೋ ನೋಡಬೇಕೆಂಬ ಆಸೆ ಆಗುತ್ತಿದೆಯಾ?

ಈ ಮನೆ ಸಮುದ್ರದಲ್ಲಿ ಹೇಗೆ ಬಂದಿರಬಹುದು? ಪ್ರವಾಹದಿಂದ ಕೊಚ್ಚಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಊಹಿಸಬಹುದು. ದುಬಾರಿ ಮನೆಗಳಿಗಿಂತ ಇಂಥ ಮನೆಗಳೇ ಸೂಕ್ತ ಎಂದು ಭಾವಿಸಿರುವ ಜನರ ಮನೆ ಇದಾಗಿರಬಹುದು ಎಂದಿದ್ದಾರೆ ಒಬ್ಬರು. ಭವಿಷ್ಯದಲ್ಲಿ ಎಲ್ಲರೂ ಇಂಥ ಮನೆಗಳ ಮೊರೆ ಹೋಗುತ್ತಾರೋ ಏನೋ, ಯೂಸ್ ಅಂಡ್ ಥ್ರೋದಂತೆ ಎಂದಿದ್ದಾರೆ ಇನ್ನೊಬ್ಬರು. ಈ ಮನೆ ನಂದಂತೂ ಅಲ್ಲ ಎಂದಿದ್ದಾರೆ ಮತ್ತೊಬ್ಬರು.

ಇದು ಲೈವ್​ ಆ್ಯಕ್ಷನ್ ಲೆಗೋ ಸಿನೆಮಾ ಎಂದಿದ್ದಾರೆ ಒಬ್ಬರು. ಈ ಮನೆಯನ್ನು ಯಾರೂ ಖರೀದಿಸಬೇಡಿ ಎಂದಿದ್ದಾರೆ ಇನ್ನೊಬ್ಬರು. ಸ್ಪಾಂಜ್​ಬಾಬ್ ಎಲ್ಲಿ? ಎಂದಿದ್ದಾರೆ ಮತ್ತೊಬ್ಬರು. ಇಂಥ ಮನೆಗಳನ್ನು ನಿರ್ಮಿಸುವಲ್ಲಿ ನನಗೆ ಬಹಳ ಆಸಕ್ತಿ ಇದೆ, ಇದು ಬಹಳ ಒಳ್ಳೆಯ ಕೆಲಸ ಎಂದಿದ್ದಾರೆ ಮಗದೊಬ್ಬರು. ಆಕಾಶಬುಟ್ಟಿಯಂತೆ ಕಾಣುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು. ಇಂಥ ಮನೆಗಳನ್ನು ನೋಡಿದ್ದೇವೆ ಬಹಳಷ್ಟು ಜನರು ಇಂಥ ಮನೆಗಳಲ್ಲಿ ವಾಸಿಸುತ್ತಾರೆ ಎಂದಿದ್ದಾರೆ ಮತ್ತೊಂದಿಷ್ಟು ಜನ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ