ಮೆಕ್ಯಾನಿಕ್ ಕೆಲಸಗಾರನಾದ ರಾಹುಲ್ ಗಾಂಧಿ
ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ(Rahul Gandhi) ರಾತ್ರೋ ರಾತ್ರಿ ಮೆಕ್ಯಾನಿಕ್ ಆಗಿದ್ದಾರೆ ಅಂದುಕೊಂಡ್ರಾ ಇಲ್ಲ, ದೆಹಲಿಯ ಕರೋಲ್ಬಾಗ್ನಲ್ಲಿ ಮೋಟಾರ್ ಸೈಕಲ್ ಮೆಕ್ಯಾನಿಕ್ಗಳ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದರು, ಅವರೊಂದಿಗೆ ಮಾತುಕತೆ ನಡೆಸಿ ಬೈಕ್ ಫಿಕ್ಸ್ ಮಾಡುವುದು ಹೇಗೆ ಎಂಬುದನ್ನು ಕಲಿತರು ಆಗ ಕ್ಲಿಕ್ಕಿಸಿದ ಚಿತ್ರವಿದು.
ಕಾಂಗ್ರೆಸ್ ರಾಹುಲ್ ಅವರ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಕೈಗಳು ಭಾರತವನ್ನು ನಿರ್ಮಿಸುತ್ತವೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಬಟ್ಟೆಗಳ ಮೇಲಿನ ಗ್ರೀಸ್ ನಮ್ಮ ಹೆಮ್ಮೆ ಮತ್ತು ಸ್ವಾಭಿಮಾನ. ಅವರನ್ನು ಹುರಿದುಂಬಿಸುವ ಕೆಲಸವನ್ನು ಒಬ್ಬ ಸಾರ್ವಜನಿಕ ನಾಯಕ ಮಾತ್ರ ಮಾಡಬಲ್ಲ ಎಂದು ಬರೆಯಲಾಗಿದೆ.
यही हाथ हिंदुस्तान बनाते हैं
— Congress (@INCIndia) June 27, 2023
इन कपड़ों पर लगी कालिख
हमारी ख़ुद्दारी और शान है
ऐसे हाथों को हौसला देने का काम
एक जननायक ही करता है
? दिल्ली के करोल बाग में बाइक मैकेनिक्स के साथ श्री @RahulGandhi
‘भारत जोड़ो यात्रा’ जारी है... pic.twitter.com/0CeoHKxOan
2024ರ ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಎಲ್ಲೆಡೆ ಕಾಂಗ್ರೆಸ್, ಬಿಜೆಪಿ ಚುನಾವಣಾ ಪ್ರಚಾರಗಳನ್ನು ಆರಂಭಿಸಿವೆ. ಪ್ರತಿಪಕ್ಷಗಳಅಭಿಪ್ರಾಯಗಳಿಗೆ ಮುಖ್ಯವಾಹಿನಿಯಲ್ಲಿ ಸರಿಯಾದ ಸ್ಥಾನ ಸಿಗದೇ ಇದ್ದಾಗ ಪ್ರಜಾಪ್ರಭುತ್ವ, ಅಧಿಕಾರಶಾಹಿಗಳ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವುದು ಅಗತ್ಯ ಎಂದು ಕಾಂಗ್ರೆಸ್ನ ಸುಪ್ರಿಯಾ ಹೇಳಿದ್ದಾರೆ.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಮೇ 23 ರಂದು ಟ್ರಕ್ನಲ್ಲಿ ಚಲಿಸಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಅವರು ಈ ಹಿಂದೆ ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಜತೆ ಸ್ಕೂಟರ್ನಲ್ಲಿ ಕುಳಿತಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.