ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶತಕ ಸಿಡಿಸಿ ಐತಿಹಾಸಿಕ ದಾಖಲೆ ಬರೆದ ಮ್ಯಾಕ್ಸ್‌ವೆಲ್‌

Twitter
Facebook
LinkedIn
WhatsApp
ಶತಕ ಸಿಡಿಸಿ ಐತಿಹಾಸಿಕ ದಾಖಲೆ ಬರೆದ ಮ್ಯಾಕ್ಸ್‌ವೆಲ್‌

ನವದೆಹಲಿ: ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಶರವೇಗದ ಶತಕ ಸಿಡಿಸುವ ಮೂಲಕ ಏಕದಿನ ವಿಶ್ವಕಪ್ (World Cup 2023) ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಕೇವಲ 40 ಬಾಲ್‌ಗಳಿಗೆ ಮಿಂಚಿನ ಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವಕಪ್‌ 2023 ಟೂರ್ನಿಯ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್‌ ಮಿಂಚಿನ ಬ್ಯಾಟಿಂಗ್‌ ನಡೆಸಿದರು. ನೆದರ್ಲೆಂಡ್ಸ್‌ ಬೌಲರ್‌ಗಳನ್ನು ಚೆಂಡಾಡಿದ ಮ್ಯಾಕ್ಸ್‌ವೆಲ್‌, ಕೇವಲ 40 ಬಾಲ್‌ಗಳಿಗೆ ಶತಕ ಸಿಡಿಸಿದರು. 8 ಫೋರ್‌ ಮತ್ತು 8 ಸಿಕ್ಸರ್‌ ಬಾರಿಸುವ ಮೂಲಕ ಶರವೇಗದಲ್ಲಿ ಶತಕ ದಾಖಲಿಸಿದರು.

ವಿಶ್ವಕಪ್‌ ಇತಿಹಾಸದಲ್ಲೇ ಅತೀ ಕಡಿಮೆ ಬಾಲ್‌ಗಳಿಗೆ ಶತಕ ಸಿಡಿಸಿದ ಆಟಗಾರನಾಗಿ ಮ್ಯಾಕ್ಸ್‌ವೆಲ್‌ ಹೊರಹೊಮ್ಮಿದ್ದಾರೆ. ಶ್ರೀಲಂಕಾ ವಿರುದ್ಧ 49 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ದ.ಆಫ್ರಿಕಾ ತಂಡದ ಏಡೆನ್ ಮಾರ್ಕ್ರಾಮ್ ಅವರ ದಾಖಲೆಯನ್ನು ಮ್ಯಾಕ್ಸ್‌ವೆಲ್‌ ಬ್ರೇಕ್‌ ಮಾಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲ ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ, ನೆದರ್ಲೆಂಡ್ಸ್‌ಗೆ 400 ರನ್‌ಗಳ ಗುರಿ ನೀಡಿದೆ. 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ ಆಸ್ಟ್ರೇಲಿಯಾ 399 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ತಂಡದ ಪರವಾಗಿ ಡೇವಿಡ್‌ ವಾರ್ನರ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಶತಕ ಸಿಡಿಸಿದ್ದಾರೆ.

ಅಬ್ಬರದ ಬ್ಯಾಟಿಂಗ್‌ ನಡೆಸಿದ ಡೇವಿಡ್‌ ವಾರ್ನರ್‌ 93 ಬಾಲ್‌ಗಳಿಗೆ 104 ರನ್‌ (11 ಫೋರ್‌, 3 ಸಿಕ್ಸರ್‌) ಬಾರಿಸಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ 44 ಬಾಲ್‌ಗಳಿಗೆ 106 ರನ್‌ ಸಿಡಿಸಿ (9 ಫೋರ್‌, 8 ಸಿಕ್ಸರ್‌) ಸಿಡಿಸಿ ಮಿಂಚಿದ್ದಾರೆ.

ಇಂಗ್ಲೆಂಡ್‌ ಪಂದ್ಯದಿಂದಲೂ ಔಟ್‌ – ಪಾಂಡ್ಯಗೆ ಗಾಯ ಗಂಭೀರ ಸ್ವರೂಪದ್ದು

ಲಕ್ನೋ: ಗಾಯದ (Injured) ಸಮಸ್ಯೆಗೆ ತುತ್ತಾಗಿರುವ ಟೀಂ ಇಂಡಿಯಾ ಉಪನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಭಾನುವಾರ ಇಂಗ್ಲೆಂಡ್‌ (England) ವಿರುದ್ಧವೂ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.

ಧರ್ಮಶಾಲಾದಲ್ಲಿ ನ್ಯೂಜಿಲೆಂಡ್‌ (New Zealand) ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಪಂದ್ಯ ಲಕ್ನೋದಲ್ಲಿ ನಡೆಯಲಿರುವ ಪಂದ್ಯಕ್ಕೆ ಲಭ್ಯವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇನ್ನೂ ಗಾಯದಿಂದ ಹಾರ್ದಿಕ್‌ ಪಾಂಡ್ಯ ಚೇತರಿಸಿಕೊಂಡಿಲ್ಲ.

ಆರಂಭದಲ್ಲಿ ಪಾಂಡ್ಯ ಮೊಣಕಾಲಿಗೆ ಆದ ಗಾಯ ಸಣ್ಣ ಪ್ರಮಾಣದ್ದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಗಾಯ ಗಂಭೀರ ಸ್ವರೂಪದ್ದು ಎನ್ನುವುದು ಈಗ ದೃಢಪಟ್ಟಿದೆ.

ಒಂದು ವೇಳೆ ಪಾಂಡ್ಯ ಪಂದ್ಯವಾಡದೇ ಇದ್ದರೆ ವೇಗದ ಬೌಲರ್‌ ಮತ್ತು ಬ್ಯಾಟರ್‌ ಕೊರತೆಯಾಗಲಿದೆ. ಪಾಂಡ್ಯ ಆಲ್‌ರೌಂಡರ್‌ ಸ್ಥಾನವನ್ನು ತುಂಬಬಹುದಾದ ಆಟಗಾರರು ಸದ್ಯಕ್ಕೆ ಸಿಗದೇ ಇದ್ದರೂ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಅವರಿಗೆ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆಯಿದೆ.

ಮುಂದಿನ ಪಂದ್ಯದಲ್ಲಿ ಸಿರಾಜ್‌ ಬದಲು ಶಾರ್ದೂಲ್‌ ಠಾಕೂರ್‌ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಬೌಲಿಂಗ್‌ನಲ್ಲಿ ವಿಕೆಟ್‌ ಪಡೆಯದ ಕಾರಣ ಟೀಂ ಇಂಡಿಯಾ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಪಾಂಡ್ಯಗೆ ಆಗಿದ್ದೇ?
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ (Bangladesh) ವಿರುದ್ಧದ ಪಂದ್ಯದಲ್ಲಿ 9ನೇ ಓವರ್ ನಲ್ಲಿ ಬೌಲಿಂಗ್ ಮಾಡುತ್ತಿದ್ದ ಪಾಂಡ್ಯ 3ನೇ ಎಸೆತ ಬೌಲಿಂಗ್ ಮಾಡಿದಾಗ ಕ್ರೀಸ್‌ನಲ್ಲಿದ್ದ ಲಿಟ್ಟನ್ ದಾಸ್ ಸ್ರೈಟ್‌ಡ್ರೈವ್‌ ಮಾಡಿದರು. ಆಗ ಪಾಂಡ್ಯ ಕಾಲಿನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಬ್ಯಾಲೆನ್ಸ್ ತಪ್ಪಿ ಕಾಲು ಉಳುಕಿಸಿಕೊಂಡರು. ತಕ್ಷಣವೇ ಫಿಸಿಯೋ ಥೆರಪಿಸ್ಟ್ ಬಂದು ಚಿಕಿತ್ಸೆ ನೀಡಿದರೂ ಮತ್ತೆ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಆಟದ ಮಧ್ಯದಲ್ಲೇ ಮೈದಾನ ತೊರೆಯಲು ನಿರ್ಧರಿಸಿದರು. ಬಳಿಕ ರೋಹಿತ್ ಶರ್ಮಾ ಜೊತೆ ಮಾತುಕತೆ ನಡೆದ ಕೊಹ್ಲಿ ಉಳಿದಿದ್ದ ಮೂರು ಎಸೆತಗಳನ್ನು ತಾವೇ ಎಸೆಯುವ ಮೂಲಕ ಬೌಲಿಂಗ್ ಪೂರ್ಣಗೊಳಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ