ಮತ್ಸ್ಯ ಕನ್ಯೆ ರೀತಿಯಲ್ಲಿ ಕಾಣಿಸಿಕೊಂಡ ನಿಶ್ವಿಕಾ!!
ಸ್ಯಾಂಡಲ್ವುಡ್ನಲ್ಲಿ ನಾಯಕಿ ನಟಿ ನಿಶ್ವಿಕಾ ನಾಯ್ಡು ಈಗೊಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಿಶ್ವಿಕಾ ತೊಟ್ಟ ಡ್ರೆಸ್ ಮತ್ತು ಲುಕ್ ಎರಡೂ ಸೂಪರ್ ಆಗಿದೆ. ಮತ್ಸ್ಯ ಕನ್ಯೆ ರೀತಿಯಲ್ಲೂ ನಿಶ್ವಿಕಾ ಇಲ್ಲಿ ಕಾಣಿಸುತ್ತಿದ್ದಾರೆ.
ನಿಶ್ವಿಕಾ ನಾಯ್ಡು ತೊಟ್ಟ ಬಿಳಿ ಬಣ್ಣದ ಡ್ರೆಸ್ನಲ್ಲಿ ಒಂದು ರೀತಿ ಅಪ್ಸರೆ ರೀತಿನೂ ಹೊಳೆಯುತ್ತಿದ್ದಾರೆ. ಆದರೆ ಎಲ್ಲರಿಗೂ ಇದೇ ರೀತಿ ಕಾಣಬೇಕು ಅಂತ ಏನೂ ಇಲ್ಲ ಬಿಡಿ. ಆದರೆ ಒಬ್ಬ ಅಭಿಮಾನಿ ಇದೀಗ ನಿಶ್ವಿಕಾ ನಾಯ್ಡುರನ್ನ ರಶ್ಮಿಕಾ ಮಂದಣ್ಣ ಅವರಿಗೂ ಹೋಲಿಸಿದ್ದಾರೆ.
ನಿಶ್ವಿಕಾ ನಾಯ್ಡು ಅವರೇ, “ಬರ್ತಾ ಬರ್ತಾ ನೀವು ರಶ್ಮಿಕಾ ಮಂದಣ್ಣ ಆಗುತ್ತಿದ್ದೀರಾ” ಅಂತಲೇ ಕಾಮೆಂಟ್ ಬಾಕ್ಸ್ ಅಲ್ಲಿಯೇ ಹಾಕಿದ್ದಾರೆ. ಆದರೆ ಈ ಒಂದು ಕಾಮೆಂಟ್ ಅನ್ನ ಯಾವ ಅರ್ಥದಲ್ಲಿ ಹಾಕಿದ್ದಾರೆ ಅನ್ನೋದು ಕೂಡ ಈಗ ಹೆಚ್ಚು ಕುತೂಹಲ ಮೂಡಿಸಿದೆ.
ನಿಶ್ವಿಕಾ ನಾಯ್ಡು ತುಂಬಾ ಒಳ್ಳೆ ಡ್ಯಾನ್ಸರ್ ಅನ್ನೋದು ಕೂಡ ಅಷ್ಟೇ ವಿಶೇಷವಾದ ಮಾತಾಗಿದೆ. ಗುರು-ಶಿಷ್ಯರು ಸಿನಿಮಾದ “ಆಣೆ ಮಾಡಿ ಹೇಳುತೀನಿ” ಅನ್ನೋ ಹಾಡು ಸೂಪರ್ ಆಗಿಯೇ ಇತ್ತು. ಈ ಹಾಡಿನಲ್ಲಿ ನಿಶ್ವಿಕಾ ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದರು. ವೈರಲ್ ಕೂಡ ಆಗಿದ್ದರು.
ನಿಶ್ವಿಕಾ ನಾಯ್ಡು ಅಭಿನಯದ ದಿಲ್ಪಸಂದ್ ಸಿನಿಮಾದ ಹಾಡು ಕೂಡ ಸೂಪರ್ ಆಗಿತ್ತು. ಈ ಹಿಂದಿನ ಮತ್ತು ನಿಶ್ವಿಕಾ ಅಭಿನಯದ ಮೊದಲ ಸಿನಿಮಾ ಅಮ್ಮ ಐ ಲವ್ ಯು ಚಿತ್ರದಲ್ಲೂ ಒಳ್ಳೆ ಗೀತೆಗಳೇ ಇದ್ದವು. ಆದರೆ ಇದರಲ್ಲಿ ನಿಶ್ವಿಕಾಗೆ ಡ್ಯಾನ್ಸ್ ಮಾಡೋಕೆ ಚಾನ್ಸ್ ಇರಲಿಲ್ಲ ಅಂತಲೇ ಹೇಳಬಹುದೇನೋ.
ನಿಶ್ವಿಕಾ ಸಿನಿಮಾ ಜೀವನದಲ್ಲಿ ಪಡ್ಡೆ ಹುಲಿ, ಜಂಟಲ್ಮ್ಯಾನ್, ರಾಮಾರ್ಜುನ, ಸಖತ್, ಗಾಳಿಪಟ-2 ಹೀಗೆ ಒಂದಷ್ಟು ಸಿನಿಮಾಗಳ ಒಂದು ಪುಟ್ಟ ಪಟ್ಟಿನೇ ಇದೆ. ಇದರ ಮಧ್ಯ ಆಗಾಗ ಸ್ಪೆಷಲ್ ಫೋಟೋ ಶೂಟ್ ಮೂಲಕ ನಿಶ್ವಿಕಾ ಗಮನ ಸೆಳೆಯುತ್ತಾನೆ ಇರ್ತಾರೆ.