Mantar gowda: ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಲ್ಪನೆಯ ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ ವಿನೂತನ "ಕಾಫಿ ದಸರಾ" ಕಾರ್ಯಕ್ರಮ . ದಸರಾ ಉತ್ಸವದಲ್ಲಿ ಕೊಡಗಿನ ಕಾಫಿಯ ಕಂಪು
ಮಡಿಕೇರಿ: ಶಾಸಕರಾದ ಡಾ. ಮಂತರ್ ಗೌಡ (Mantar gowda) ಪ್ರಯತ್ನದ ಫಲವಾಗಿ ಇದೇ ಮೊದಲ ಬಾರಿಗೆ ಮಡಿಕೇರಿ ದಸರಾದಲ್ಲಿ ಆಯೋಜಿತ ಕಾಫಿ ದಸರಾ ಸಂಬಂಧಿತ ಪೂರ್ವ ಭಾವಿ ಸಭೆ ನಡೆಯಿತು. ಶಾಸಕರಾದ ಡಾಕ್ಟರ್ ಮಂತರ್ ಗೌಡ ಕೆಪಿಎ. ಸಿಪಿಎ ಸೇರಿದಂತೆ ಕಾಫಿ ಬೆಳೆಗಾರ ಸಂಸ್ಥೆಗಳ ಪ್ರಮುಖರ ಜೊತೆ ಚರ್ಚೆ ನಡೆಸಿ ಕಾಫಿ ದಸರಾ ಯಶಸ್ಸಿಗೆ ಸಹಕಾರ ಕೋರಿದರು
ಮಾಜಿ MLC ವೀಣಾ ಅಚ್ಛಯ್ಯ, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್. ಟಿ. ದಸರಾ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್, ವಿ. ಪಿ. ಶಶಿಧರ್, ನಂದಾ ಬೆಳ್ಳಿಯಪ್ಪ, ರಾಜೀವ್, ವಿಶ್ವನಾಥ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಅಕ್ಟೋಬರ್ 6 ಮತ್ತು 7 ರಂದು ಮೊದಲ ಬಾರಿಗೆ ಕಾಫಿ ದಸರಾ ಮಡಿಕೇರಿಯಲ್ಲಿ ಆಯೋಜಿತ ಆಗಿದೆ.
ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ
ಚಿಕ್ಕಮಗಳೂರು: ಶೃಂಗೇರಿ ಬಳಿಕ ಹೊರನಾಡಲ್ಲೂ (Horanadu) ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಹೊರನಾಡು ಅನ್ನಪೂರ್ಣೇಶ್ವರಿ (Annapoorneshwari) ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆಯನ್ನು ಕಡ್ಡಾಯಗೊಳಿಸಲಾಗಿದೆ.
ಗಂಡಸರು ಶಲ್ಯ, ಪ್ಯಾಂಟ್, ಪಂಚೆ ಧರಿಸಬೇಕು. ಹೆಣ್ಣು ಮಕ್ಕಳು ಸೀರೆ ಹಾಗೂ ಚೂಡಿದಾರ ಧರಿಸುವಂತೆ ದೇವಾಲಯದ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಬರದಿದ್ದರೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಎಂದು ಆಡಳಿತ ಮಂಡಳಿ ಸೂಚನೆ ನೀಡಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡಿನಲ್ಲಿ ನೆಲೆಸಿರುವ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯಗೊಳಿಸಿದ್ದು, ಭಕ್ತರು ಸಹಕರಿಸುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಹತ್ಯೆ
ಚಿಕ್ಕಮಗಳೂರು, ಸೆ.19: ಜಿಲ್ಲೆಯ ಅಜ್ಜಂಪುರ(Ajjampura) ಠಾಣಾ ವ್ಯಾಪ್ತಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬರ್ಬರ ಕೊಲೆ ಮಾಡಿದಅಮಾನುಷ ಘಟನೆನಡೆದಿದೆ. ಜ್ವರ ಬಂದ ಹಿನ್ನೆಲೆ ಅಂಗನವಾಡಿಗೆ ಹೋಗದೇ ಬಾಲಕಿ ಮನೆಯಲ್ಲೇ ಇದ್ದಳು. ಇದನ್ನು ತಿಳಿದುಕೊಂಡು ಮನೆಗೆ ನುಗ್ಗಿದ ದುರುಳರು, ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದಿದ್ದಾರೆ. ನಂತರ ಬಾಲಕಿಯ ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದಾರೆ.
ಜ್ವರ ಎಂದು ಮಗು ಅಂಗನವಾಡಿಗೆ ಹೋಗಿರಲಿಲ್ಲ. ಇತ್ತ ತಾಯಿ ಜಮೀನು ಕೆಲಸಕ್ಕೆ ತೆರಳಿದ್ದರು. ಇದನ್ನೇ ಕಾಯುತ್ತಿದ್ದ ಕಾಮಾಂಧರು ಏಕಾಂಗಿಯಾಗಿದ್ದ ಮಗು ಮೇಲೆ ಅಮಾನುಷವಾಗಿ ಹಿಂಸೆಗೈದು, ಹತ್ಯೆ ಮಾಡಿದ್ದಾರೆ. ಇತ್ತ ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಅಜ್ಜಂಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.
ಅಪ್ರಾಪ್ತೆಯನ್ನು ಅಪಹರಿಸಿದ್ದ ಅಪರಾಧಿಗೆ 5 ವರ್ಷ ಕಠಿಣ ಜೈಲುಶಿಕ್ಷೆ
ಕೊಡಗು: ಅಪ್ರಾಪ್ತೆಯನ್ನು ಅಪಹರಿಸಿದ್ದ ಅಪರಾಧಿಗೆ ಐದು ವರ್ಷ ಕಠಿಣ ಶಿಕ್ಷೆ ನೀಡಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಅಸ್ಸಾಂನ ಕೂಲಿ ಕಾರ್ಮಿಕ ಸುರಸ್ ಅಲಿ(22)ಗೆ ಕಠಿಣ ಜೈಲು ಶಿಕ್ಷೆ ವಿಧಿಸಿ ನ್ಯಾಯಾದೀಶೆ ಶ್ರೀಮತಿ ಜಿ.ಪ್ರಶಾಂತಿ ಅವರು ತೀರ್ಪು ನೀಡಿದ್ದಾರೆ. 2021ರ ಆಗಸ್ಟ್ 11ರಂದು ಅಪ್ರಾಪ್ತೆyನ್ನು ಅಪಹರಿಸಿದ್ದ. ಈ ಹಿನ್ನಲೆ ಪೋಕ್ಸೋ ಕಾಯ್ದೆ, ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಬಳಿಕ ಸುಂಟಿಕೊಪ್ಪ ಠಾಣೆ ಪೊಲೀಸರು ತನಿಖೆ ನಡೆಸಿದ್ದರು.