ಮಣಿಪಾಲ :ಕೋಳಿ ಅಂಕ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ ವಶ ಪಡೆಸಿದ 25 ಕೋಳಿಗಳು ಹರಾಜು..!
ಸಾಮಾನ್ಯವಾಗಿ ಪೊಲೀಸ್ ಠಾಣೆಗಳಲ್ಲಿ ವಾರಸುದಾರರಿಲ್ಲದ ವಾಹನಗಳನ್ನು ಹರಾಜು ಹಾಕುವುದನ್ನು ನೋಡಿರುತ್ತೀರಿ. ಆದರೆ ಈ ಪೊಲೀಸ್ ಠಾಣೆಯಲ್ಲಿ ಕೋಳಿಗಳನ್ನು ಹರಾಜು ಹಾಕಲಾಗಿದೆ. ಹೌದು ಉಡುಪಿ ತಾಲೂಕಿನ ಮಣಿಪಾಲ ಠಾಣೆ ಪೊಲೀಸರು ಕೋಳಿ ಅಂಕದಲ್ಲಿ ಬೆಟ್ಟಿಂಗ್ ನಡೆಯುವ ವೇಳೆ ದಾಳಿ ಮಾಡಿ ಸುಮಾರು 25 ಕೋಳಿಗಳನ್ನು ವಶಕ್ಕೆ ಪಡೆದಿದ್ದರು. ಈ ಕೋಳಿಗಳನ್ನು ಇಂದು (ಫೆ.05) ಹರಾಜು ಹಾಕಲಾಗಿದೆ. ಒಂದು ಕೋಳಿಗೆ 400 ರೂ. ಒಂದು ವಾರ್, ಎರಡು ವಾರ್, ಮೂರು ವಾರ್ ಅಂತ ಹರಾಜು ಪ್ರಕ್ರಿಯೆ ನಡೆದಿದೆ. ಈ ಕೋಳಿಗಳನ್ನು ಖರೀದಿಸಲು ಕೋಳಿ ಪ್ರೀಯರು ಮುಗಿಬಿದ್ದಾರೆ.
ಕರಾವಳಿ ಭಾಗದಲ್ಲಿ ಸಂಪ್ರದಾಯ ಹೆಸರಿನಲ್ಲಿ ಕೋಳಿ ಅಂಕ ಬೆಟ್ಟಿಂಗ್ ಜೋರಾಗಿ ನಡೆಯುತ್ತದೆ. ಇದು ಒಂದು ಜೂಜು ಆಗಿದೆ. ಇನ್ನು ಈ ಕೋಳಿ ಅಂಕ ನಡೆಸಲು ಅನುಮತಿ ಪಡೆಯಬೇಕು. ಆದರೆ ಅನುಮತಿ ಪಡೆಯದೆ ಕೋಳಿ ಅಂಕ ನಡೆಸಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.
ನಮೀಬಿಯಾ ಅಧ್ಯಕ್ಷ ಗೇನ್ ಗೋಬ್ ನಿಧನ
ನಮೀಬಿಯಾ ಅಧ್ಯಕ್ಷ ಹೇಗ್ ಗೇನ್ ಗೋಬ್ ಕ್ಯಾನ್ಸರ್ನಿಂದ ಇಂದು ಗೇನ್ ಗೋಬ್ ವಿಂಡ್‌ಹೋಕ್ ನಲ್ಲಿರುವ ಲೇಡಿ ಪೊಹಂಬಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ಕೆಲವು ವಾರಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಹೇಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯಕೀಯ ತಪಾಸಣೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯುನೈಟೆಡ್ ಸ್ಟೇಟ್ಸ್‌ಗೆ ಕರೆದು ಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಗೇನ್ಗೋಬ್ ವಿಂಡ್‌ಹೋಕ್‌ನಲ್ಲಿರುವ ಲೇಡಿ ಪೊಹಂಬಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಹೇಗ್ ಗೇನ್ಗೋಬ್ ಅವರು 2014ರಲ್ಲಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ತಾವು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಚೇತರಿಸಿಕೊಂಡಿರುವುದಾಗಿ ಸಾರ್ವಜನಿಕರಿಗೆ ತಿಳಿಸಿದ್ದರು. ಈ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ದೇಶದಲ್ಲಿ ಅಧ್ಯಕ್ಷೀಯ ಮತ್ತು ಸಂಸದೀಯ ಚುನಾವಣೆಗಳು ನಡೆಯಲಿವೆ. ಇದೀಗ ಈ ಘಟನೆ ವರದಿಯಾಗಿದ್ದು ಇದರಿಂದ ಸ್ಥಳೀಯ ಜನರು ಹಾಗೂ ಹಲವು ಗಣ್ಯರು ಹೇಗ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.