ಮಂಗಳೂರು ಲೋಕಸಭೆ ಬಿಜೆಪಿ ಅಭ್ಯರ್ಥಿ: ಇನ್ನು ಗುಟ್ಟು ಬಿಟ್ಟುಕೊಡದ ಪಕ್ಷದ ಹೈಕಮಾಂಡ್!
ಮಂಗಳೂರು: ಮಂಗಳೂರು ಲೋಕಸಭೆಯ ಬಿಜೆಪಿ ಅಭ್ಯರ್ಥಿ ಯಾರಾಗಬಹುದೆಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ.
ಬಿಜೆಪಿ ಹೈಕಮಾಂಡ್ ಇನ್ನೂ ಸಮರ್ಪಕವಾದಂತ ಕ್ಲೂ ಬಿಟ್ಟುಕೊಡದೆ ಸಸ್ಪೆನ್ಸ್ ಹಾಗೆ ಇಟ್ಟಿದೆ ಎನ್ನಲಾಗುತ್ತಿದೆ.
ನಳಿನ್ ಕುಮಾರ್ ಕಟೀಲ್, ಚೌಟ ನಡುವೆ ಸ್ಪರ್ಧೆ ಇದೆ ಎನ್ನಲಾಗುತ್ತಿದೆ. ಆದರೆ ಯಾರು ಅಭ್ಯರ್ಥಿಯಾಗಬಹುದು ಎಂಬ ಕುತೂಹಲ ಇನ್ನು ಮನೆ ಮಾಡಿದೆ
ನಳಿನ್ ಕುಮಾರ್ ಕಟೀಲ್ ಫಾರ್ ದಕ್ಷಿಣ ಕನ್ನಡ’ ಎಂಬ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಬಿಜೆಪಿ ಹಾಲಿ ಸಂಸದ ಕಟೀಲ್ ಅವರು ಮತ್ತೊಮ್ಮೆ ಸಂಸದರಾಗಬೇಕು ಎಂಬ ಕೂಗು ಕೇಳಿಬರುತ್ತಿದೆ.
ʻಉರಿಯೋರು ಭೂದಿಯಾಗ್ತಾರೆ, ಕುದಿಯೋರು ಆವಿಯಾಗ್ತಾರೆ. ಈ ಬಾರಿಯೂ ನಮ್ಮಣ್ಣ ನಳಿನ್ ಕುಮಾರ್ ಅವರೇ ಗೆಲ್ತಾರೆʼ, ʻಚಾಲ್ತಿಲಿ ಇಲ್ಲದ ನಾಣ್ಯ ಶಬ್ಧ ಜಾಸ್ತಿ. ಯಾರು ಎಷ್ಟೇ ಬೊಬ್ಬೆ ಹಾಕಿದ್ರೂ ನಮ್ಮಣ್ಣ ನಳಿನ್ ಅವರೇ 2024ಕ್ಕೆ MP. ಬರೆದಿಟ್ಕೊಳಿʼ ʻ ನಮ್ಗಂತೂ ಯಾವ ಫ್ರೀ ಸ್ಕೀಮೂ ಸಿಗ್ಲಿಲ್ಲ. ಆದ್ರೆ ಈ MP ಎಲೆಕ್ಷನ್ ಲ್ಲಿ ನಮ್ಮ ನಳಿನ್ ಅಣ್ಣನ ಗೆಲುವು ಸಂಭ್ರಮಿಸೋಕೆ ನಾವೇ ಫ್ರೀ ಪಟಾಕಿ ಹಂಚ್ತೀವಿʼ, ʻ ಕರಿ ʻMoney’ ಮಾಲೀಕ ನೀವಲ್ಲಾ, ಸಂಘಟನೆಯ ಸಿದ್ಧಾಂತ ಬಿಟ್ಟಿಲ್ಲ.. ನಿಮ್ಮನ್ನು ಗೆಲ್ಲಿಸದಿದ್ರೆ ಆ ದೇವ್ರು ಖಂಡಿತ ಮೆಚ್ಚಲ್ಲ ಅಣ್ಣʼ ಅಂತೆಲ್ಲಾ ಟ್ವೀಟಿಸಿ ಅಭಿಮಾನಿಗಳು ಸಂಸದ ನಳಿನ್ ಕುಮಾರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಅವರಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್ ನೀಡುವುದು ನಿಶ್ಚಿತವಾಗಿದ್ದು, ಅವರು ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಲಿದ್ದಾರೆ ಎಂಬುದು ಅವರ ಅಭಿಮಾನಿಗಳ ನಿರೀಕ್ಷೆ ಮತ್ತು ಕಾತರವಾಗಿದೆ.
ಇತ್ತ ಬ್ರಿಜೆಷ್ ಚೌಟ ಗೂ ಟಿಕೆಟ್ ಸಿಗುವ ನಿರೀಕ್ಷೆ ಇದ್ದು ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿದೆ ಎಂದು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಜಟಾಪಟಿ ಯಲ್ಲಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸುವುದೇ ಬಿಜೆಪಿಗೆ ದೊಡ್ಡ ತಲೆನೋವಾಗಿದೆ.
Nalin Anna supremacy. #NalinKumarForDakshinaKannada is trending across India. Nalin Anna Hawa it is that Pandey, Raut, Shukla, Paul are wanting him as MP. Such a Nobel Soul MP he is. #NewMPforDK#NoToNalin pic.twitter.com/rXzXcCQ0TX
— Ganesh (@me_ganesh14) March 6, 2024
ಇನ್ನೊಂದು ಕಡೆ ಸತ್ಯಜಿತ್ ಸುರತ್ಕಲ್ ಅವರು ಕೂಡ ಅಕಾಂಕ್ಷಿಯಾಗಿದ್ದು ಇದನ್ನೆಲ್ಲ ಯಾವ ರೀತಿ ಬಿಜೆಪಿ ರಾಷ್ಟ್ರೀಯ ನಾಯಕರು ಹತೋಟಿಗೆ ತರಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.