ಮಂಗಳೂರು: ಹಠಾತ್ ಬ್ರೇಕ್ ಹಾಕಿದಾಗ ಬಸ್‌ನಿಂದ ಹೊರಕ್ಕೆಸೆಯಲ್ಪಟ್ಟು ಮಹಿಳೆ ಸಾವು...!
ಮಂಗಳೂರು: ಚಲಿಸುತ್ತಿದ್ದ ಬಸ್‌ಗೆ ಚಾಲಕ ಸಡನ್ ಬ್ರೇಕ್ ಹಾಕಿದ ಪರಿಣಾಮ ಹೊರಗೆ ಎಸೆಯಲ್ಪಟ್ಟ ಪ್ರಯಾಣಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಜೋಕಟ್ಟೆ ಕ್ರಾಸ್ ಬಳಿ ನಡೆದಿದೆ. 65 ವರ್ಷದ ಈರಮ್ಮ ಮೃತ ಮಹಿಳೆ. ಅವರು ಮಗಳೊಂದಿಗೆ ಸುರತ್ಕಲ್ ಕಡೆಗೆ ಪ್ರಯಾಣಿಸುತ್ತಿದ್ದರು.
ಬೆಳಿಗ್ಗೆ 10:10 ರ ಸುಮಾರಿಗೆ ಬಸ್ಸು ಜೋಕಟ್ಟೆ ಕ್ರಾಸ್ ಬಳಿಯ ಸರ್ವೀಸ್ ಸ್ಟೇಷನ್ ತಲುಪಿದಾಗ, ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಚಾಲಕನ ಪಕ್ಕದ ಮುಂದಿನ ಸೀಟಿನಲ್ಲಿ ಕುಳಿತಿದ್ದ ಈರಮ್ಮ ಬಸ್ಸಿನಿಂದ ಹೊರಕ್ಕೆ ಬಿದ್ದಿ ಎಸೆಯಲ್ಪಟ್ಟಿದ್ದಾರೆ. ಬಸ್‌ನ ಹಿಂಭಾಗದ ಎಡ ಚಕ್ರವು ಈರಮ್ಮ ಅವರ ಮೇಲೆ ಚಲಿಸಿದೆ. ತಲೆಗೆ ಗಂಭೀರ ಗಾಯವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಭತ್ತ ಕತ್ತರಿಸುವ ಯಂತ್ರಕ್ಕೆ ಬೈಕ್ ಡಿಕ್ಕಿ: ಇಬ್ಬರು ಮಕ್ಕಳೊಂದಿಗೆ ತಂದೆ ತಾಯಿ ಮೃತ್ಯು
ಚಾಮರಾಜನಗರ: ಭೀಕರ ಬೈಕ್ ಅಪಘಾತ ಸಂಭವಿಸಿ ಇಬ್ಬರು ಮಕ್ಕಳೊಂದಿಗೆ ತಂದೆ ತಾಯಿ ಸಾವಿಗೀಡಾದ ಹೃದಯವಿದ್ರಾವಕ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಸಂತೋಷ (37), ಸೌಮ್ಯ (27) ಹಾಗು ಮಕ್ಕಳಾದ ಸಾಕ್ಷಿ (4), ಅಭಿ (9) ಮೃತರು.
ಹಬ್ಬಕ್ಕೆ ಬಟ್ಟೆ ಖರೀದಿಸಲು ಕೊಳ್ಳೇಗಾಲಕ್ಕೆ ಸಂತೋಷ್ ಕುಟುಂಬ ತೆರಳುತ್ತಿದ್ದ ಕುಟುಂಬ ಸಾವಿನ ಮನೆಗೆ ತೆರಳಿದೆ. ಅವರ ಬೈಕ್ ಜಿನಕನಹಳ್ಳಿ ಸಮೀಪ ಭತ್ತ ಕತ್ತರಿಸುವ ಯಂತ್ರಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್‌ನಿಂದ ನಾಲ್ವರೂ ಕೆಳಕ್ಕೆ ಬಿದ್ದಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೀವಂತ ಇದ್ದ ಮಗು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಸಾವನ್ನಪ್ಪಿದೆ.