ಮಂಗಳೂರು : ಗಾಳಿ ಸಹಿತ ಭಾರಿ ಮಳೆ; ಧರೆಗೆ ಉರುಳಿದ ಮರ
ಮಂಗಳೂರು: ಕರಾವಳಿ (Coastal) ಜಿಲ್ಲೆಗಳಿ ಗಾಳಿ ಸಹಿತ ಮಳೆಯಾಗುತ್ತಿದೆ (Rain). ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರಿನಲ್ಲಿ (Mangaluru) ಭಾರಿ ಮಳೆಯಾಗುತ್ತಿದೆ. ಜೊತೆಗೆ ಜೋರಾದ ಗಾಳಿ ಬೀಸಿದೆ. ಈ ಹಿನ್ನೆಲೆ ಈಗಾಗಲೆ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಅಲ್ಲದೇ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನು ಗಾಳಿ 80 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದರ ಪರಿಣಾಮ ಕಮರ್ಷಿಯಲ್ ಕಟ್ಟಡದ ಮೇಲೆ ಹಾಕಿದ್ದ ಜಾಹೀರಾತು ಫಲಕ ಬಿದ್ದು 10ಕ್ಕೂ ಹೆಚ್ಚು ಬೈಕ್ಗಳು ಜಖಂಗೊಂಡಿರುವ ಘಟನೆ ಮಂಗಳೂರು ನಗರದ ಬಿಕರ್ನಕಟ್ಟೆ ಎಂಬಲ್ಲಿ ನಡೆದಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಜನರಿಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಫಲಕ ಮಾತ್ರವಲ್ಲದೇ ಭಾರ ತಾಳಲಾಗದೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ಪರಿವರ್ತಕ ಕೂಡ ಧರಗೆ ಬಿದ್ದಿದೆ.
ಮಂಗಳೂರು ಹೊರವಲಯದ ಸೋಮೇಶ್ವರ ಪ್ರದೇಶದಲ್ಲಿ ಭಾರಿ ಗಾಳಿಮಳೆಗೆ ಮರಗಳು ಮನೆ ಮೇಲೆ ಉರುಳಿ ಬಿದ್ದಿವೆ. ಮರಗಳು ಉರುಳಿ ಮೂರು ಮನೆಗಳು, ವಾಹನಕ್ಕೆ ಹಾನಿಯಾಗಿದೆ. ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪೆರಿಬೈಲ್, ಕುಂಪಲ ಬಾರ್ದೆ, ಅಂಚಿಕಟ್ಟೆ ಪ್ರದೇಶದ ನಾಲ್ಕು ಮನೆಗಳ ಮೇಲೆ ಮರಗಳು ಉರುಳಿಬಿದ್ದು ಅಬ್ಬಾಸ್ , ಕುಂಪಲ ಬಾರ್ದೆಯ ಯಮುನಾ ಬಂಗೇರ, ಸುನಿಲ್ ಹಾಗೂ ಅಂಚೆಕಟ್ಟೆಯ ಯು.ಎ ಹಸೈನಾರ್, ಯು.ಎ.ಖಾದರ್ ಎಂಬವರ ಮನೆಗಳಿಗೆ ಹಾನಿಯಾಗಿದೆ. ಒಂದು ಸ್ಕೂಟರ್ ಮರದಡಿ ಸಿಲುಕಿ ನುಜ್ಜುಗುಜ್ಜಾಗಿದೆ.