ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Mangalore : ಉಳ್ಳಾಲದಲ್ಲಿ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಬಲಿ

Twitter
Facebook
LinkedIn
WhatsApp
Mangalore : ಉಳ್ಳಾಲದಲ್ಲಿ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಬಲಿ

Mangalore: ಮನೆ ಮೇಲೆ ಸಮೀಪದ ಮನೆಯ ಗೋಡೆ ಕುಸಿದ ಪರಿಣಾಮ ನಾಲ್ವರು ಮೃತಪಟ್ಟ ದುರಂತ ಘಟನೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಕುತ್ತಾರಿನ ಮದನಿ ನಗರ ಎಂಬಲ್ಲಿ ಜೂ.26 ರ ಬುಧವಾರ ಬೆಳಗ್ಗೆ ಸಂಭವಿಸಿದೆ.

ಮನೆಯೊಳಗೆ ವಾಸ್ತವ್ಯ ವಿದ್ದ ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಮೃತ ದುರ್ದೈವಿಗಳು. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ರಕ್ಷಣ ಕಾರ್ಯಾಚರಣೆ ನಡೆಸಲಾಗಿದೆ. ಇಬ್ಬರ ಶವಗಳನ್ನು ಹೊರ ತೆಗೆಯಲಾಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ. ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಕಂಪೌಂಡ್ ಕುಸಿದು ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಹಳೇ ಕಟ್ಟಡ ನೆಲಸಮ ವೇಳೆ ಗೋಡೆ ಕುಸಿತ; ಇಬ್ಬರು ಕಾರ್ಮಿಕರ ದುರ್ಮರಣ

ಬೆಂಗಳೂರು: ನಗರದ ಮಹಾಲಕ್ಷ್ಮೀ ಲೇಔಟ್​ನ 10ನೇ ಕ್ರಾಸ್​ನಲ್ಲಿ ಹಳೇ ಕಟ್ಟಡ ನೆಲಸಮ ಮಾಡುವ ವೇಳೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ. 

ಪಶ್ಚಿಮ ಬಂಗಳಾದ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರು ಇನಾಮ್ ಉಲ್ಲಾ, ಸಿರಾಜ್ ಉಲ್ಲಾ ಎಂದು ತಿಳಿದುಬಂದಿದೆ. ಹಳೇ ಕಟ್ಟಡದ ಪಿಲ್ಲರ್ ಕುಸಿದು ಅವಘಡ ಸಂಭವಿಸಿದೆ. ಒಂದು ವಾರದಿಂದ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್​ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. 

ಯುವತಿಗೆ ಗುಂಡು ಹಾರಿಸಿ ಹತ್ಯೆಗೈದ ಮಾಜಿ ಪ್ರಿಯಕರ:

ಬ್ಯೂಟಿ ಪಾರ್ಲರ್​ಗೆ ಬಂದಿದ್ದ ಯುವತಿಯನ್ನು ಮಾಜಿ ಪ್ರಿಯಕರ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಯುವಕ ಬೆನ್ನಿಗೊಂದು ಬ್ಯಾಗ್ ಹಾಗೂ ಕೈಯಲ್ಲಿ ಪಿಸ್ತೂಲ್ ಹಿಡಿದು ಬ್ಯೂಟಿ ಪಾರ್ಲರ್​ ಒಳಗೆ ಬಂದಿದ್ದಾನೆ.

ಆತ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ, ನಂತರ 32 ಸೆಕೆಂಡುಗಳಲ್ಲಿ ಯುವಕ ಯುವತಿಯ ಎದೆಗೆ ಎರಡು ಬಾರಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಧ್ಯಪ್ರದೇಶದ ದಾತಿಯಾ ನಿವಾಸಿ 20 ವರ್ಷದ ಕಾಜಲ್ ಭಾನುವಾರ ವಿವಾಹವಾಗಬೇಕಿತ್ತು, ಪಕ್ಕದ ಮನೆಯ ಯುವಕ ದೀಪಕ್ ಎಂಬಾತ ಆಕೆಯನ್ನು ಇಷ್ಟಪಟ್ಟಿದ್ದ, ಇಬ್ಬರೂ ಮದುವೆಯಾಗಲು ಬಯಸಿದ್ದರು. ಮದುವೆಗೆ ಸ್ವಲ್ಪ ಸಮಯದ ಮೊದಲು ಕಾಜಲ್ ಕೂಡ ದೀಪಕ್ ಜೊತೆ ಓಡಿ ಹೋಗಿದ್ದಳು. ಆದರೆ ನಂತರ ಅವಳು ತನ್ನ ಕುಟುಂಬ ಆಯ್ಕೆ ಮಾಡಿದ ಹುಡುಗನನ್ನು ಮದುವೆಯಾಗುವುದಾಗಿ ಹೇಳಿದಳು.

ನಂತರ ಕುಟುಂಬವು ಕಾಜಲ್ ಮದುವೆಯನ್ನು ಝಾನ್ಸಿಯ ಚಿರ್ಗಾಂವ್‌ನ ಸಿಂತಾರಿ ಗ್ರಾಮದ ನಿವಾಸಿ ರಾಜ್ ಅವರೊಂದಿಗೆ ನಿಶ್ಚಯಿಸಿತು. ಕಾಜಲ್ ತಂದೆ ವರನಿಗೆ 8 ಲಕ್ಷದ 41 ಸಾವಿರ ರೂಪಾಯಿ ಮೌಲ್ಯದ ಕಾರನ್ನು ಸಹ ನೀಡಿದ್ದರು. 

ಆದರೆ ಮದುವೆಗೂ ಮುನ್ನ ಕಾಜಲ್ ದೀಪಕ್ ನಿಂದ ಕೊಲೆಯಾಗಿದ್ದಾಳೆ. ಭಾನುವಾರ ಮದುವೆ ಮೆರವಣಿಗೆಗೂ ಮುನ್ನ ರೆಡಿಯಾಗಲು ಕಾಜಲ್ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದರು. ಅಷ್ಟರಲ್ಲಿ ದೀಪಕ್ ಅಲ್ಲಿಗೆ ಬಂದು ತನ್ನ ಜತೆ ಬರುವಂತೆ ಕೇಳಿದ್ದಾನೆ.

ಆಕೆ ನಿರಾಕರಿಸಿದಾಗ ಎದೆಗೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ನೀನು ನನ್ನವಳಾಗದಿದ್ದರೆ ಬೇರೆಯವರಿಗೂ ನಿನ್ನನ್ನು ಸಿಗಲು ಬಿಡುವುದಿಲ್ಲ ಎಂದು ಹೇಳಿ ಹತ್ಯೆ ಮಾಡಿದ್ದಾನೆ, ಕಾಜಲ್ ಅಲ್ಲಿಯೇ ಸಾವನ್ನಪ್ಪಿದ್ದಾಳೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ