ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Pabbas Gadbad: ಪ್ರಪಂಚದ 100 ಅತ್ಯಂತ ಐಕಾನಿಕ್ ಐಸ್ ಕ್ರೀಮ್ ಗಳ ಪಟ್ಟಿಯಲ್ಲಿ ಭಾರತದ 5 ಮೆಚ್ಚಿನವುಗಳಲ್ಲಿ ಒಂದಾದ 'ಮಂಗಳೂರು ಪಬ್ಬಾಸ್ ಗಡ್ಬಡ್ ಐಸ್-ಕ್ರೀಮ್'!

Twitter
Facebook
LinkedIn
WhatsApp
Pabbas Gadbad: ಪ್ರಪಂಚದ 100 ಅತ್ಯಂತ ಐಕಾನಿಕ್ ಐಸ್ ಕ್ರೀಮ್ ಗಳ ಪಟ್ಟಿಯಲ್ಲಿ ಭಾರತದ 5 ಮೆಚ್ಚಿನವುಗಳಲ್ಲಿ ಒಂದಾದ 'ಮಂಗಳೂರು ಪಬ್ಬಾಸ್ ಗಡ್ಬಡ್ ಐಸ್-ಕ್ರೀಮ್'!

ಸಾಮಾನ್ಯವಾಗಿ ಬೇಸಿಗೆ ಕಾಲಲ್ಲಿ ಅಂತೂ ಕೆಲವರಿಗೆ ಪ್ರತಿನಿತ್ಯ ಐಸ್ ಕ್ರೀಮ್ ಬೇಕು. ಮಕ್ಕಳು ಮತ್ತು ಯುವಕರು ಅತಿ ಹೆಚ್ಚಾಗಿ ಐಸ್ ಕ್ರೀಮ್ ಅನ್ನು ಇಷ್ಟಪಡುತ್ತಾರೆ. ಕೆಲವರು ಒಂದೊಂದು ಕ್ಷೇತ್ರದಲ್ಲಿ ಮಿಂಚುತ್ತಿರುತ್ತಾರೆ. ಏನಾದರೂ ಸಾಧನೆ ಮಾಡಿ ಉತ್ತುಂಗಕ್ಕೆ ಇರಲು ಕಠಿಣ ಪರಿಶ್ರಮ ಮಾಡುತ್ತಿರುತ್ತಾರೆ. ಅಂತಹದರಲ್ಲಿ ಹಲವರು ವಿಶ್ವಮಟ್ಟದಲ್ಲಿ ವಿಶೇಷ ಸ್ಥಾನಮಾನ ಪಡೆದಿರುವುದು ನಾವು ಕೇಳಿರುತ್ತೇವೆ.ಆದರೆ ಇದೀಗ “ಟೇಸ್ಟ್‌ ಅಟ್ಲಾಸ್‌” ಎನ್ನುವ ಸಂಸ್ಥೆ ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್‌ಕ್ರೀಮ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ದೇಶದ 5 ಐಸ್‌ ಕ್ರೀಮ್‌ ಸಂಸ್ಥೆಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಈ ಪೈಕಿ ಮಂಗಳೂರಿನ ಎರಡು ಸಂಸ್ಥೆಗಳು ಕೂಡ ಸ್ಥಾನಗಳನ್ನು ಪಡೆದಿವೆ

ಹಾಗಾದರೆ ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್‌ ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಂಗಳೂರಿನ ಆ ಎರಡು ಸಂಸ್ಥೆಗಳು ಯಾವುವು, ಅವುಗಳ ಹಿನ್ನೆಲೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್‌ ಕ್ರೀಮ್‌ಗಳ ಪಟ್ಟಿಯಲ್ಲಿ ಮುಂಬೈ, ಬೆಂಗಳೂರು & ಮಂಗಳೂರಿನ ಐಸ್‌ಕ್ರೀಮ್‌ ಸಂಸ್ಥೆಗಳಿಗೆ ಸ್ಥಾನ ನೀಡಲಾಗಿದೆ. ಈ ಸಂಸ್ಥೆಯು ಇತ್ತೀಚೆಗಷ್ಟೇ ವಿಶ್ವದ ಬೀದಿ ಬದಿಯಲ್ಲಿ ಸಿಗುವ ಸಿಹಿ ತಿನಿಸುಗಳ ಪಟ್ಟಿಯನ್ನೂ ಸಹ ಬಿಡುಗಡೆ ಮಾಡಿತ್ತು. ಇದರಲ್ಲಿ ರಾಜ್ಯದ ಮೈಸೂರು ಮೂಲದ ಮೈಸೂರು ಪಾಕ್‌ಗೆ 14ನೇ ಸ್ಥಾನ ಲಭಿಸಿತ್ತು. ಅಲ್ಲದೆ ಭಾರತದ ಮತ್ತೆರಡು ವಸ್ತುಗಳಿಗೂ ಮನ್ನಣೆ ನೀಡಿದೆ.

Pabbas Gadbad: ಪ್ರಪಂಚದ 100 ಅತ್ಯಂತ ಐಕಾನಿಕ್ ಐಸ್ ಕ್ರೀಮ್ ಗಳ ಪಟ್ಟಿಯಲ್ಲಿ ಭಾರತದ 5 ಮೆಚ್ಚಿನವುಗಳಲ್ಲಿ ಒಂದಾದ 'ಮಂಗಳೂರು ಪಬ್ಬಾಸ್ ಗಡ್ಬಡ್ ಐಸ್-ಕ್ರೀಮ್'!

ಇದೀಗ ಐಸ್‌ ಕ್ರೀಮ್‌ ವಿಭಾಗದಲ್ಲಿ ಟಾಪ್‌ 100ರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಐಸ್‌ಕ್ರೀಮ್‌ನ ಗುಣಮಟ್ಟ, ಬಳಕೆಯಾಗುವ ವಸ್ತು ಹಾಗೂ ಇದನ್ನು ತಯಾರಿಸುವ, ಮಾರಾಟ ಮಾಡುವ ಸಂಸ್ಥೆಗಳ ಬಗ್ಗೆಯೂ ಮಾಹಿತಿಯನ್ನು ನೀಡಿದೆ.

ಸ್ಥಾನ ಗಿಟ್ಟಿಸಿಕೊಂಡ ದೇಶದ 5 ಐಸ್‌ಕ್ರೀಮ್‌ ಸಂಸ್ಥೆಗಳು:

1. ಬೆಂಗಳೂರಿನ ಕಾರ್ನರ್‌ ಹೌಸ್‌ನಲ್ಲಿ ತಯಾರಿಸಲಾಗುವ “ಡೆತ್‌ ಬೈ ಚಾಕಲೇಟ್‌” ಐಸ್‌ಕ್ರೀಮ್‌

  • Death By Chocolate (Bengaluru)

2. ಮುಂಬೈನ ಕೆ. ರುಸ್ತೋಮ್‌ ಆ್ಯಂಡ್‌ ಕೋನಲ್ಲಿ ಸಿಗುವ “ಮ್ಯಾಂಗೋ” ಐಸ್‌ಕ್ರೀಮ್‌ ಸ್ಯಾಂಡ್‌ವಿಚ್‌

  • Mango Ice Cream Sandwich (Mumbai)

3. ಮುಂಬೈನ ಅಪ್ಸರಾ ಐಸ್‌ಕ್ರೀಮ್‌ ಸಂಸ್ಥೆಯವರು ತಯಾರು ಮಾಡುವ “ಗ್ವಾವಾ” ಐಸ್‌ಕ್ರೀಮ್‌

  • Guava Ice Cream (Mumbai)

4. ಮುಂಬೈ ನ್ಯಾಚುರಲ್ಸ್‌ ಸಂಸ್ಥೆಯ “ಟೆಂಡರ್‌ ಕೋಕನಟ್‌” ಐಸ್‌ಕ್ರೀಮ್‌

  • Tender Coconut (Mumbai)

5. ಮಂಗಳೂರಿನ ಪಬ್ಬಾಸ್‌ನಲ್ಲಿ ಸಿಗುವ “ಗಡ್‌ಬಡ್‌” ಐಸ್‌ಕ್ರೀಮ್‌

  • Mangaluru’s Gadbad Ice Cream

ವಿಶ್ವದ ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ “ಟೇಸ್ಟ್‌ ಅಟ್ಲಾಸ್‌”ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತದ 5 ಐಸ್‌ಕ್ರೀಮ್‌ ಕಂಪನಿಗಳಲ್ಲಿ ಎರಡು ಮಂಗಳೂರು ಮೂಲವಾಗಿರುವುದು ವಿಶೇಷವಾಗಿದೆ. ಮುಂಬೈಯಲ್ಲಿರುವ ನ್ಯಾಚುರಲ್ಸ್‌ ಸಂಸ್ಥೆ ಮೂಲತಃ ಮಂಗಳೂರು ಮೂಲದವರಿಂದ ಹುಟ್ಟಿ ಬೆಳೆದ ಸಂಸ್ಥೆಯಾಗುದೆ. ಎರಡನೇ ಸಂಸ್ಥೆ ಐಡಿಯಲ್‌ ಐಸ್‌ಕ್ರೀಮ್‌ ಅವರ ಪಬ್ಬಾಸ್‌ ಐಸ್‌ಕ್ರೀಮ್‌ ಮಳಿಗೆಯಲ್ಲಿ ಸಿಗುವ “ಗಡ್‌ಬಡ್‌” ಕೂಡ ಸ್ಥಾನ ಗಿಟ್ಟಿಸಿಕೊಂಟಿದೆ.

ಹಾಗೆಯೇ ಬೆಂಗಳೂರಿನ ಕಾರ್ನರ್‌ ಹೌಸ್‌ನಲ್ಲಿ ತಯಾರು ಮಾಡುವ “ಡೆತ್‌ ಬೈ ಚಾಕಲೇಟ್‌”ಗೂ ಸ್ಥಾನ ನೀಡಲಾಗದೆ. ಈ ಮೂಲಕ ಕರ್ನಾಟಕದ ಮೂರು ಐಸ್‌ ಕ್ರೀಂ ಸಂಸ್ಥೆಗಳು ಪಟ್ಟಿಯಲ್ಲಿ ಸ್ಥಾನ ಪಡೆಕೊಂಡಿವೆ. ಈ ಬಗ್ಗೆ ಐಡಿಯಲ್‌ ಸಂಸ್ಥೆಯ ಮುಖ್ಯಸ್ಥ ಮುಕುಂದ್‌ ಕಾಮತ್‌ ಪ್ರತಿಕ್ರಿಯಿಸಿ, ಪಬ್ಬಾಸ್‌ನಲ್ಲಿ ಸಿಗುವ “ಗಡ್‌ಬಡ್‌” ಐಸ್‌ಕ್ರೀಮ್‌ಗೆ ಟೇಸ್ಟ್‌ ಅಟ್ಲಾಸ್‌ನಲ್ಲಿ ವಿಶ್ವದ 100 ಐಸ್‌ ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಿರುವುದರಿಂದ ಬಹಳ ಸಂತೋಷವಾಗುತ್ತಿದೆ ಎಂದಿದ್ದಾರೆ ಅಂತಾ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಯಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist