ಮಂಗಳೂರು: ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ..!
ಮಂಗಳೂರು: ಆದಾಯಕ್ಕೂ ಮೀರಿ ಅಕ್ರಮ ಆಸ್ತಿಗಳಿಕೆ ಆರೋಪದಡಿ ಮಂಗಳೂರಿನ ಮೆಸ್ಕಾಂ ಇಇ ಶಾಂತಕುಮಾರ್ (Mescom EE Shantakumar) ಮನೆ ಹಾಗೂ ಕಚೇರಿಗೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು (Lokayukta Officer) ದಾಳಿ ನಡೆಸಿದ್ದಾರೆ.
ಮಂಗಳೂರಿನ ಅತ್ತಾವರ ವಿಭಾಗದದಲ್ಲಿ ಕಳೆದ ಐದೂವರೆ ವರ್ಷದಿಂದ ಇಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಶಾಂತಕುಮಾರ್ ಅಕ್ರಮ ಆಸ್ತಿಹೊಂದಿರೋ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ. ನಗರದ ಕೊಂಚಾಡಿಯಲ್ಲಿರುವ ಶಿವಪ್ರಸಾದ್ ಗೋಲ್ಡ್ ಅಪಾರ್ಟ್‍ಮೆಂಟ್ ನ ಮನೆಗೂ ಹಾಗೂ ಅತ್ತಾವರದಲ್ಲಿರುವ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಾಂತಕುಮಾರ್ ಅವರ ಬೆಂಗಳೂರಿನಲ್ಲಿರುವ ಮನೆಗೂ ಇದೇ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಮೂರು ಕಡೆಗಳಲ್ಲೂ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಘೋಷಣೆಗಳು ಬೋಗಸ್ ಭರವಸೆ: ರೇಣುಕಾಚಾರ್ಯ
ಬೆಂಗಳೂರು: ಕಾಂಗ್ರೆಸ್ (Congress) ಘೋಷಣೆ ಮಾಡಿರುವ ಭರವಸೆಗಳು ಬೋಗಸ್ ಭರವಸೆಗಳು ಎಂದು ಮಾಜಿ ಸಚಿವ ರೇಣುಕಾಚಾರ್ಯ (M.P Renukacharya) ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಘೋಷಣೆ ಮಾಡಿರುವ ಭರವಸೆಗಳು ಬೋಗಸ್. ಅವರು ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದಿದ್ದಾರೆ. ಕೇವಲ 5 ಭರವಸೆಯಲ್ಲ ಸಾಕಷ್ಟು ಭರವಸೆ ಕೊಟ್ಟಿದ್ದಾರೆ. ಅವೆಲ್ಲವೂ ಬೋಗಸ್ ಭರವಸೆಗಳು ಎಂದು ಕಿಡಿಕಾರಿದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ ಮೋಸ ಆಗಿದೆ. ಗೃಹಲಕ್ಷ್ಮೀ 60% ಮಹಿಳೆಯರಿಗೆ ತಲುಪಿಲ್ಲ. ಯುವನಿಧಿ 5 ಲಕ್ಷ ಎಂದಿದ್ದರು, ಆದರೆ 3 ಸಾವಿರ ಜನರು ಮಾತ್ರವೇ ನೋಂದಣಿ ಆಗಿದ್ದಾರೆ. ಯುವನಿಧಿ ಸಹ ಫೇಲ್ಯೂರ್ ಆಗಿದೆ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗೃಹಜ್ಯೋತಿ ಸಹ ಸಮಸ್ಯೆ ಆಗಿದೆ. ನುಡಿದಂತೆ ಈ ಸರ್ಕಾರ ಎಲ್ಲಿ ನಡೆದಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಬಾಲಕೃಷ್ಣ ಬ್ಲ್ಯಾಕ್‍ಮೇಲ್ ಕೃಷ್ಣ, ಮತದಾರರಿಗೆ ಬ್ಲಾಕ್‍ಮೇಲ್ ಮಾಡ್ತೀರಾ? ಮಂತ್ರಾಕ್ಷತೆ ಕೊಟ್ಟಿದ್ದು ಲೋಕ ಕಲ್ಯಾಣಕ್ಕಾಗಿ ಮಾಡಿದ್ದು. ವೋಟ್‍ಗಾಗಿ ಕೊಟ್ಟಿದ್ದಲ್ಲ. ಜನರಿಗೆ ಒಳ್ಳೆಯದಾಗ್ಲಿ ಎಂದು ಮಂತ್ರಾಕ್ಷತೆ ಕೊಟ್ಟಿದ್ದು. ಈ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ ಆಗಿದೆ. ಭರವಸೆಗೆ ನಾವು ವಿರುದ್ಧವಾಗಿ ಇಲ್ಲ. ಆದರೆ ನಿನ್ನೆಯ ಹೇಳಿಕೆ ತೀವ್ರವಾಗಿ ಖಂಡಿಸುತ್ತೇನೆ. ಗ್ಯಾರಂಟಿ ಕೊಡಲಾಗದೇ ಇದನ್ನ ಸಿಎಂ ಹಾಗೂ ಡಿಸಿಎಂ ಅವರು ತಮ್ಮ ಶಾಸಕರ ಬಾಯಲ್ಲಿ ಹೇಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜನರು ನಿಮಗ್ಯಾಕೆ ಬೆಂಬಲ ಕೊಡಬೇಕು? ಇಷ್ಟು ವರ್ಷ ದೇಶ ಆಳಿಲ್ವಾ? ಹಾಳ್ ಮಾಡಿಲ್ವಾ? ಏನ್ ಗುತ್ತಿಗೆ ಪಡೆದಿದ್ದಾರೆ? ಮತ್ತೊಮ್ಮೆ ಮೋದಿ ಎಂದು ಜನ ಮಾತನಾಡುತ್ತಿದ್ದಾರೆ. ದೇಶದಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಕೇಂದ್ರದಲ್ಲಿ ಕೊಟ್ಟ ಭರವಸೆ ಎಲ್ಲಾ ಈಡೇರಿಸಿದ್ದೇವೆ. ಬಾಲಕೃಷ್ಣ ಮತದಾರರಿಗೆ ಬ್ಲಾಕ್‍ಮೇಲ್ ಮಾಡ್ತಿದ್ದಾರೆ. ಲೋಕಸಭಾ ಚುನಾವಣೆಯವರೆಗೂ (2024 Lok Sabha Elections) ಇವರ ಭರವಸೆ ಅಷ್ಟೇ. ಅದು ಅರೆ ಬರೆ ಬೆಂದ ಯೋಜನೆಗಳು. ಅಭಿವೃದ್ಧಿ ಇಲ್ಲ ಎಂದು ನಿಮ್ಮ ಶಾಸಕರೇ ಹೇಳ್ತಿದ್ದಾರೆ. ಜನರು ನಿಮಗೆ ಬುದ್ಧಿ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅವರು ಕಿಡಿಕಾರಿದ್ದಾರೆ.