ಮಂಗಳೂರು : ಮಾವನಿಗೆ ಸೊಸೆಯಿಂದ ಹಿಗ್ಗಾಮುಗ್ಗಾ ಥಳಿತ ; ಇಲ್ಲಿದೆ ವಿಡಿಯೋ
ಮಂಗಳೂರು: ಅತ್ತೆ -ಸೊಸೆ ಜಗಳದ (Daughter in law-Mother in law feud) ಬಗ್ಗೆ ನೂರಾರು ಕಥೆಗಳನ್ನು ಕೇಳಿದ್ದೇವೆ, ಅವರು ಹಾಕುವ ಕಣ್ಣೀರನ್ನೂ ನೋಡಿದ್ದೇವೆ. ವಯಸ್ಸಿನಲ್ಲಿ ಅತ್ತೆಯಾದವರು ಸೊಸೆಗೆ ಕಾಟ ಕೊಡುವುದು, ಅತ್ತೆಗೆ ವಯಸ್ಸಾದಾಗ ಸೊಸೆ ಸೇಡು ತೀರಿಸಿಕೊಳ್ಳುವುದು (Harassment Case) ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ಇಂಥ ಸಮಾಜದಲ್ಲೂ ಸ್ವಲ್ಪ ಸುರಕ್ಷಿತವಾಗಿರುವಂತೆ ಕಾಣುವುದು ಮಾವ ಮಾತ್ರ. ಆದರೆ, ಮಂಗಳೂರಿನಲ್ಲಿ (Mangalore News) ನಡೆದ ಘಟನೆ ಈ ನಂಬಿಕೆಯನ್ನೂ ಸುಳ್ಳು ಮಾಡಿದೆ. ಇಲ್ಲಿ ಸೊಸೆಯೊಬ್ಬಳು ತನ್ನ ಮಾವನನ್ನು ಮನಸೋ ಇಚ್ಛೆ ಥಳಿಸಿ, ನೆಲಕ್ಕೆ ತಳ್ಳಿದ್ದಾಳೆ!
ಮಂಗಳೂರಿನ ಕುಲಶೇಖರದಲ್ಲಿ ನಡೆದ ಸೊಸೆಯ ರಾಕ್ಷಸಿ ಕೃತ್ಯ ಈಗ ಸಿಸಿ ಟಿವಿ ಕ್ಯಾಮೆರಾದಲ್ಲಿ (CC TV Footage) ಸೆರೆಯಾಗಿದೆ. ಹೀಗೆ ಮಾವನನ್ನು ಹೀನಾಯವಾಗಿ ಥಳಿಸಿದ ಸೊಸೆಯ ಹೆಸರು ಉಮಾಶಂಕರಿ. ಹಾಗಂತ ಇವರು ಸಾಮಾನ್ಯರೇನೂ ಅಲ್ಲ. ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾರೆ (Officer in KEB).
ಕೆಇಬಿಯಲ್ಲಿ ಅಧಿಕಾರಿಯಾಗಿರುವ ಸೊಸೆ ಉಮಾಶಂಕರಿ ಅವರ ಪತಿ ವಿದೇಶದಲ್ಲಿದ್ದಾರೆ. ಪತಿಯ ತಂದೆ ಮಂಗಳೂರಿನ ಮನೆಯಲ್ಲಿ ಸೊಸೆಯ ಜತೆ ವಾಸವಾಗಿದ್ದಾರೆ. ಮಾವನಿಗೆ ವಯಸ್ಸು ಸುಮಾರು 76. ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿತ್ತು, ಸೊಸೆ ಮಾವನನ್ನು ಹೇಗೆ ನೋಡಿಕೊಳ್ಳುತ್ತಿದ್ದರು ಎನ್ನುವುದು ಗೊತ್ತಿಲ್ಲ. ಆದರೆ, ಮಾರ್ಚ್ 9ರಂದು ಸೊಸೆ ಥೇಟ್ ರಾಕ್ಷಸಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ.
ವಿಡಿಯೋ ವೀಕ್ಷೀಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸಿಸಿ ಟಿವಿಯಲ್ಲಿ ದಾಖಲಾದಂತೆ ಮಾರ್ಚ್ 9ರಂದು ಮಧ್ಯಾಹ್ನ 2.22ರ ಹೊತ್ತಿಗೆ ಈ ಘಟನೆ ನಡೆದಿದೆ. ಬಹುಶಃ ಉಮಾಶಂಕರಿ ಅವರು ಕಚೇರಿಯಿಂದ ಮಧ್ಯಾಹ್ನದ ಊಟಕ್ಕೆ ಬಂದ ವೇಳೆ ಈ ಘಟನೆ ನಡೆದಿದೆ. ಆಕೆಗೂ ಮಾವನಿಗೂ ಯಾವೂದೋ ವಿಷಯಕ್ಕೆ ಸಂಬಂಧಿಸಿ ಜಗಳವಾಗಿದೆ. ಆಗ ಆಕೆ ಮಾವನ ಕೈಯಲ್ಲಿದ್ದ ವಾಕಿಂಗ್ ಸ್ಟಿಕ್‌ನ್ನು ಕಿತ್ತುಕೊಂಡಿದ್ದಾರೆ. ಮೊದಲು ಆಕೆ ವಾಕಿಂಗ್ ಸ್ಟಿಕ್‌ನಿಂದ ಹೊಡೆಯುತ್ತಿದ್ದಂತೆಯೇ ಮಾವ ಅದನ್ನು ಕಿತ್ತುಕೊಳ್ಳಲು ಮುಂದಾಗುತ್ತಾರೆ.
ಈ ಹಂತದಲ್ಲಿ ಮಾವ ಸೊಸೆಯ ಕೈಯಲ್ಲಿದ್ದ ವಾಕಿಂಗ್ ಸ್ಟಿಕ್ಕನ್ನು ಕಿತ್ತುಕೊಳ್ಳಲು ಮುಂದಾಗುತ್ತಾರೆ. ಆಗ ಅವರಿಬ್ಬರ ನಡುವೆ ಒಂದಿಷ್ಟು ಎಳೆದಾಟ ನಡೆಯುತ್ತದೆ. ನರಪೇತಲ ಮಾವ ಸೊಸೆಯ ಕೈಲಿದ್ದ ವಾಕಿಂಗ್ ಸ್ಟಿಕ್ಕನ್ನು ಕಿತ್ತುಕೊಳ್ಳಲು ಯತ್ನಿಸುವಾಗ ಸಿಟ್ಟುಗೊಂಡ ಸೊಸೆ ಮಾವನನ್ನು ಜೋರಾಗಿ ತಳ್ಳಿ ಬಿಡುತ್ತಾಳೆ.
ವಾಕಿಂಗ್ ಸ್ಟಿಕ್ ಸಮೇತವಾಗಿ ಮಾವ ಹೋಗಿ ಸೋಫಾದ ಮೇಲೆ ಬೀಳುತ್ತಾರೆ, ಸೋಫಾದ ಬದಿಗಳು ಕೈಗೆ ಬಡಿದು ಗಾಯಗೊಳ್ಳುತ್ತಾರೆ. ಮಾವ ನೆಲದಲ್ಲಿ ಬಿದ್ದು ಹೊರಳಾಡಿದರೂ ಆಕೆ ಅವರನ್ನು ಎಬ್ಬಿಸಲು ಪ್ರಯತ್ನ ಮಾಡುವುದಿಲ್ಲ. ಬದಲಾಗಿ ಮಾವನ ಕೈಯಲ್ಲಿದ್ದ ವಾಕಿಂಗ್ ಸ್ಟಿಕ್ಕನ್ನು ಕಿತ್ತುಕೊಂಡು ಇನ್ನಷ್ಟು ಬೈಯುತ್ತಾರೆ. ಮಾವ ಅಮ್ಮಾ ಅಮ್ಮಾ ಎಂದು ಕಿರುಚುತ್ತಾರೆ.
ಅಂದ ಹಾಗೆ ಈ ಎಲ್ಲ ಘಟನೆಗಳು ಹೊರಬಂದಿದ್ದು ವಿದೇಶದಲ್ಲಿರುವ ಪತಿ ಮನೆಯ ಸಿಸಿಟಿವಿ ಫೂಟೇಜ್‌ಗಳನ್ನು ಗಮನಿಸಿದಾಗ. ಅವರು ಕೂಡಾ ಹೆಂಡತಿಯನ್ನು ಸಂರ್ಪಕಿಸಿ ವಿಷಯವೇನೆಂದು ಕೇಳುತ್ತಾರೆ. ಬಳಿಕ ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿ ಮನೆಗೆ ಹೋಗುವಂತೆ ವಿನಂತಿಸುತ್ತಾರೆ. ಹಾಗೆ ಬಂದ ಸಂಬಂಧಿಕರು ಮಾವನನ್ನು ಆಸ್ಪತ್ರೆಗೆ ಸೇರಿಸುತ್ತಾರೆ ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಪೊಲೀಸರು ಮುಂದೆ ಯಾವ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಉಮಾಶಂಕರಿ ಒಬ್ಬ ಅಧಿಕಾರಿಯಾಗಿದ್ದರಿಂದ ಮಾವನನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೆಲವೊಂದು ವಿಚಾರಗಳಲ್ಲಿ ಗಲಾಟೆ ಆಗುತ್ತಿತ್ತು ಎನ್ನಲಾಗಿದೆ. ನೋಡಿಕೊಳ್ಳಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಹತಾಶೆಯಿಂದ ಉಮಾಶಂಕರಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.