ಮಂಗಳೂರು: ಗಾಳ ಹಾಕಿ ಮೀನು ಹಿಡಿದ ಡಿ.ಕೆ. ಶಿವಕುಮಾರ್
ಮಂಗಳೂರು: ಸಮುದ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಾಳ ಹಾಕಿ ಮೀನು ಹಿಡಿದರು.
ಮಂಗಳೂರಿನ ಉಳ್ಳಾಲ ಬೀಚ್ ನಲ್ಲಿ ಫಿಶಿಂಗ್ ನಲ್ಲಿ ತೊಡಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸ್ಪೀಕರ್ ಯು.ಟಿ. ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್, ಸಾಥ್ ನೀಡಿದರು.
ಡಿಕೆಶಿ ತಮ್ಮ ತಂಡದೊಂದಿಗೆ ಇಂದು ಬೆಳಗ್ಗೆ ಉಳ್ಳಾಲ ಬೀಚ್ ಗೆ ಭೇಟಿ ನೀಡಿದ್ದರು.
ಜಗದೀಶ್ ಶೆಟ್ಟರ್‌ಗೆ ಕಾಂಗ್ರೆಸ್‌ನಿಂದ ಯಾವುದೇ ಅನ್ಯಾಯ ಆಗಿಲ್ಲ: ಸಿದ್ದರಾಮಯ್ಯ
ಮಡಿಕೇರಿ: ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ನಿಂದ (Congress) ಯಾವುದೇ ಅನ್ಯಾಯ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಕೊಡಗಿನ ವಿರಾಜಪೇಟೆ ಸಮೀಪದ ಅಂಬಟ್ಟಿಯ ಗಾಲ್ಫ್ ಮೈದಾನದಲ್ಲಿ ಮಾತಾನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ (Vidhanasabha Election) ಟಿಕೆಟ್ ನೀಡದೆ ಬಿಜೆಪಿ ವಂಚಿಸಿದೆ ಎಂದು ಹೇಳಿ ಅವರು ಕಾಂಗ್ರೆಸ್ ಗೆ ಬಂದರು. ಪಕ್ಷವು ಅವರಿಗೆ ಟಿಕೆಟ್ ನೀಡಿತು. ಸ್ವ-ಕ್ಷೇತ್ರದಲ್ಲೇ ಅವರು ಸೋತರು. ಆದರೂ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಲಾಯಿತು ಎಂದರು.
ಕಾಂಗ್ರೆಸ್ ಪಕ್ಷದಿಂದ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ. ಆದರೆ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವ ವಿಚಾರ ಗೊತ್ತಾಗಿಲ್ಲ. ಇತ್ತೀಚೆಗೆ ನನ್ನ ಬಳಿ ಮಾತನಾಡಿದ್ದಾಗಲೂ ಅವರು ಬಿಜೆಪಿ ನನಗೆ ಅನ್ಯಾಯ ಮಾಡಿದೆ. ವಾಪಸ್ ಆ ಪಕ್ಷಕ್ಕೆ ಹೋಗುವುದಿಲ್ಲ ಎಂದಿದ್ದರು. ಅಷ್ಟು ನನಗೆ ಗೊತ್ತು ಮತ್ತೆ ಅವರು ನನಗೆ ಸಿಕ್ಕಿಲ್ಲ ಎಂದು ಹೇಳಿದರು.
ಒಂದು ತಿಂಗಳ ಹಿಂದೆ ಸುರ್ಜೆವಾಲಾ ಬಂದ ದಿನ ಸಿಕ್ಕಿದ್ರು. ಹತ್ತು ದಿನದ ಹಿಂದೆ ಅವರು ಮೀಟಿಂಗ್ ನಲ್ಲಿ ಸಿಕ್ಕಿದ್ರು. ಆಗಲೂ ಅವರು ಏನೂ ಹೇಳಿಲ್ಲ ಎಂದರು.