ಭಾನುವಾರ, ಮೇ 19, 2024
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Mangalore : ಬಸ್ ಮುಂಭಾಗ ರಸ್ತೆ ದಾಟಿದ್ದ ವಿದ್ಯಾರ್ಥಿ, ಪವಾಡ ಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರು !

Twitter
Facebook
LinkedIn
WhatsApp
Mangalore : ಬಸ್ ಮುಂಭಾಗ ರಸ್ತೆ ದಾಟಿದ್ದ ವಿದ್ಯಾರ್ಥಿ, ಪವಾಡ ಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರು !

Mangalore : ವಿದ್ಯಾರ್ಥಿಯೋರ್ವ ಪವಾಡ ಸದೃಶ ಪಾರಾದ ಘಟನೆ ಮಂಗಳೂರಿನ ಹೊರವಲಯದ ಕುಳಾಯಿಯಲ್ಲಿ ನಡೆದಿದೆ. ಲೆಯಿಂದ ಬಂದಿಳಿದು ರೋಡ್ ಕ್ರಾಸ್ ಮಾಡುತ್ತಿದ್ದಾಗ ಅದೇ ಬಸ್ಸಿನಡಿ ಬಿದ್ದ ವಿದ್ಯಾರ್ಥಿಪವಾಡ ಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. 

ಸುರತ್ಕಲ್ ನ‌ ಆಂಗ್ಲ‌ ಮಾಧ್ಯಮ ಶಾಲೆಯ ಈ ವಿದ್ಯಾರ್ಥಿ ಸ್ಕೂಲ್ ಬಸ್ಸಿನಲ್ಲಿ ಆಗಮಿಸಿ ಮನೆ ಸಮೀಪ ಇಳಿದಿದ್ದಾನೆ. ಇಳಿದ ತಕ್ಷಣ ಬಸ್ ಮುಂಭಾಗದಿಂದ ರಸ್ತೆ ದಾಟಲು ಹೊರಟ ವೇಳೆ ಬಸ್ ಚಾಲಕ ಇದರ ಅರಿವಿಲ್ಲದೆ ಬಸ್ ಚಲಾಯಿಸಿದ್ದಾನೆ, ಪರಿಣಾಮ ಬಾಲಕ ಬಸ್ ನಡಿಗೆ ಬಿದ್ದಿದ್ದಾನೆ.

ಇದನ್ನು ಗಮನಿಸಿದ ಅಲ್ಲೇ ಇದ್ದ ಮತ್ತೋರ್ವ ವಿದ್ಯಾರ್ಥಿ ಹಾಗೂ ಮಹಿಳೆ ಚೀರಾಡಿದ್ದಾರೆ. ಆಗ ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾನೆ. ಪರಿಣಾಮ ಬಾಲಕ ಬಸ್ ನಡಿಗೆ ಬಿದ್ದರೂ ಪವಾಡ ಸದೃಶವೆಂಬಂತೆ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಸ್ಕೂಲ್ ಬಸ್ ನಲ್ಲಿ ನಿರ್ವಾಹಕ ಇರಲಿಲಿಲ್ಲ ಎಂದು ಹೇಳಲಾಗುತ್ತಿದೆ. ಚಾಲಕನ ವಿರುದ್ದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಯುವ ಮಹಿಳಾ ನ್ಯಾಯವಾದಿ ಶ್ರೀಮತಿ ಗೀತಾ ಡಿ. ನ್ಯಾಯಾಧೀಶರಾಗಿ ಆಯ್ಕೆ

ಮಂಗಳೂರು: ಕರ್ನಾಟಕ ಸಿವಿಲ್ ನ್ಯಾಯಾಧೀಶರ 2023ನೆ ಸಾಲಿನ ಪರೀಕ್ಷೆಯಲ್ಲಿ ತುಮಕೂರು ಮೂಲದ ಗೀತಾ ಡಿ. ಉತ್ತೀರ್ಣರಾಗಿದ್ದು, ಸಿವಿಲ್ ನ್ಯಾಯಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮತ್ತು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಕರಾವಳಿಗೆ ಕೀರ್ತಿ ತಂದಿದ್ದಾರೆ.

ಮಂಗಳೂರಿನ ಹೆಸರಾಂತ ವಕೀಲರಾದ ಮಯೂರ ಕೀರ್ತಿ ಹಾಗೂ ಶ್ರೀ ಶರತ್ ಕುಮಾರ್ ಬಿ. ರವರ ಕಛೇರಿಯಲ್ಲಿ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿ ತಮ್ಮ ವೃತ್ತಿಯನ್ನು ಮುಂದುವರಿಸುತ್ತಾ ಬಂದಿರುತ್ತಾರೆ. ನಂತರ ಗೀತಾ ಡಿ. ರವರು ವಕೀಲರಾದ ಕಾರ್ತಿಕ್ ಮಚ್ಚಿಲರವನ್ನು ವಿವಾಹವಾಗಿದ್ದು ತಮ್ಮ ವೃತ್ತಿಯನ್ನು ಮುಂದುವರಿಸುತ್ತಾ ಬಂದಿರುತ್ತಾರೆ. ಶ್ರೀಮತಿ ಗೀತಾ ಡಿ. ರವರು ಡಿ. ಕೊಂಬೇಗೌಡ ಹಾಗೂ ಶ್ರೀಮತಿ ಕೋಮಲ ರವರ ಪುತ್ರಿಯಾಗಿರುತ್ತಾರೆ.

ಮೂಲತಃ ತುಮಕೂರಿನವರಾದ ಗೀತಾ ಪ್ರಸಕ್ತ ಕಡಬ ಸಮೀಪದ ಚಾರ್ವಾಕದಲ್ಲಿ ಪತಿಯೊಂದಿಗೆ ನೆಲೆಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ