ಮಂಗಳೂರು : 17 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ..!
Twitter
Facebook
LinkedIn
WhatsApp
ಮಂಗಳೂರು: ಕಳೆದ 17 ವರ್ಷಗಳಿಂದ ಪೊಲೀಸರಿಗೆ ಸಿಗದೇ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ ಜೇಸನ್ ಪೀಟರ್ ಡಿ ಸೋಜಾ (42) ಎಂಬಾತನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಮೇರಮಜಲು ಪಕಾಲ ಪಡ ಹೌಸ್‌ನ ಆರೋಪಿ ಜೇಸನ್, ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಹಾಗೂ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ.
ಈ ಪ್ರಕರಣವನ್ನು ನ್ಯಾಯಾಲಯವು ಎಲ್‌ಪಿಸಿ ಅಂದರೆ ಪತ್ತೆಯಾಗದ ಪುಕರಣವೆಂದು ಪರಿಗಣಿಸಲಾಗಿತ್ತು.
ಇದೀಗ ಕೇಂದ್ರ ವಿಭಾಗ ಎಸಿಪಿ ಮಹೇಶ್ ಕುಮಾರ್ ನಿರ್ದೇಶನದಂತೆ ಉತ್ತರ ಪೋಲಿಸ್ ಠಾಣೆಯ ನಿರೀಕ್ಷಕ ರಾಘವೇಂದ್ರ .ಎಂ. ಬೈಂದೂರ್ ಮಾರ್ಗದರ್ಶನದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ಸಾಧನೆಯನ್ನು ಆಯುಕ್ತರು ಕುಲದೀಪ್ ಕುಮಾರ್ ಜೈನ್ ಪ್ರಶಂಶಿಸಿದ್ದಾರೆ