ಮಂಡ್ಯ ಆರೋಗ್ಯ ಇಲಾಖೆ ಅಧಿಕಾರಿ ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ!
ಬೆಂಗಳೂರು, ಡಿ.2: ಭ್ರೂಣ ಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಮಂಡ್ಯದ (Mandya) ವೈದ್ಯ ಸತೀಶ್ ಕೊಡಗಿನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಬೆನ್ನಲ್ಲೇ ಮಂಡ್ಯ ಆರೋಗ್ಯ ಇಲಾಖೆ ಅಧಿಕಾರಿ ನಟರಾಜ್ ಬೆಂಗಳೂರಿನಲ್ಲಿ (Bengaluru) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ನಟರಾಜ್ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯ ನಿವಾಸದಲ್ಲಿ ನಟರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಹೃದಯಾಘಾತವಾಗಿದ್ದ ಹಿನ್ನೆಲೆ ನಟರಾಜ್ ರಜೆಯಲ್ಲಿದ್ದರು. ಇಂದು ಮಂಡ್ಯಕ್ಕೆ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು. ಆದರೆ ಮಂಡ್ಯ ಡಿಹೆಚ್ಒ ರಿಪೋರ್ಟ್ ಮಾಡಿಕೊಳ್ಳದಂತೆ ಸೂಚನೆ ನೀಡಿದ್ದಾರೆ.
ಇದರಿಂದ ಬೇಸತ್ತು ಡಾ.ನಟರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೈಮುರಿದು ದುಡಿದರೆ ಭೂತಾಯಿ ಕೈ ಹಿಡಿಯುತ್ತಾಳೆ ಎನ್ನುವ ಭಾಲ್ಕಿ ರೈತ ಗೋಲ್ಡನ್ ಸೀತಾಫಲ ಬೆಳೆದು ಬದುಕು ಬಂಗಾರವಾಗಿಸಿಕೊಂಡಿದ್ದಾರೆ!
ಆ ರೈತ ಕಬ್ಬು, ಸೋಯಾಬಿನ್ ಬೆಳೆಸಿ ಕೈ ಸುಟ್ಟುಕೊಂಡಿದ್ದ. ಕೃಷಿ ಸಹವಾಸವೇ ಬೇಡಾ ಅಂತಾ ನಿರ್ದರಿಸಿದ್ದ ಆದರೆ ಆತ ಕೊನೆಗೊಮ್ಮೆ ತೋಟಗಾರಿಕೆ ಬೆಳೆಯನ್ನು ಬೆಳೆಸೋಣ ಎಂದು ನಿರ್ಧಸಿದ. ಅದರಂತೆ ಗೋಲ್ಡನ್ ತಳಿಯ ಸೀತಾಫಲ ಬೆಳೆಸಿ ಕೈ ತುಂಬಾ ಆದಾಯ ಗಳಿಸುತ್ತಿದ್ದಾನೆ ಈಗ. ಸೀತಾಫಲ ಬೆಳೆಸಿ ಕೈತುಂಬಾ ಆದಾಯ ಗಳಿಸುತ್ತಿರುವ ರೈತ ( farmer)… ವೈಜ್ಜಾನಿಕ ಪದ್ದತಿಯಲ್ಲಿ ಬೆಳೆಸಿದ ಸೀತಾಫಲ ತಂದಿದೆ ಬಂಪರ್ ಇಳುವರಿ… ಸೀತಾಫಲ (custard apple) ಬೆಳೆಸಿ ಬದುಕು ಕಟ್ಟಿಕೊಂಡ ಸಂಜು ಪ್ರಭು… ಹೌದು ಬೀದರ್ ಜಿಲ್ಲೆ (Bhalki, Bidar) ಅಂದರೆ ನಮಗೆ ನೆನಪಿಗೆ ಬರೋದು ಬರ..ಬರ.. ಬರ… ಪ್ರತಿ ವರ್ಷ ಅತಿವೃಷ್ಠಿ ಅನಾವೃಷ್ಠಿಯಿಂದಾಗಿ ರೈತ ತೊಂದರೆ ಅನುಭವಿಸೋದು ಜಿಲ್ಲೆಯಲ್ಲಿ ಮಾಲೂಲಿ. ಆದರೇ ಇಂತಹ ಹತ್ತಾರು ಸಮಸ್ಯೆಗಳ ನಡುವೆ ಇಲ್ಲೊಬ್ಬ ರೈತ ಸೀತಾಫಲ ಬೆಳೆಯುವುದರ ಮೂಲಕ ಅನಾವೃಷ್ಠಿ-ಅತಿವೃಷ್ಠಿಗೆ ಸೆಡ್ಡು ಹೊಡೆದು ನಿಂತಿದ್ದು ಸರಕಾರಿ ನೌಕರರ ಸಂಬಳಕ್ಕಿಂತ ಹೆಚ್ಚಿಗೆ ಗಳಿಸುತ್ತಿದ್ದಾರೆ (success story).
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ರೈತ ಸಂಜು ಪ್ರಭಾ ಅವರು ಎರಡು ಎಕರೆಯಲ್ಲೇ ಸೀತಾಫಲ ಬೆಳೆಸಿ ವರ್ಷಕ್ಕೆ ಸುಮಾರು 5 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಕಠಿಣ ಪರಿಶ್ರಮದಿಂದ ಎರಡು ಎಕರೆಯಲ್ಲಿ ಬೆಳೆದ ಸೀತಾಫಲ ಹಣ್ಣಿನಿಂದ ಆರ್ಥಿಕತೆ ಬಲಪಡಿಸಿಕೊಂಡು ಇತರೆ ಸಣ್ಣ ರೈತರಿಗೆ ಮಾದರಿಯಾಗಿದ್ದಾರೆ.
ತೋಟಗಾರಿಕೆ ಅಧಿಕಾರಿಗಳ ಪ್ರೇರಣೆಯಿಂದ ಸೀತಾಫಲ ಬೆಳೆಯಲು ನಿರ್ಧರಿಸಿ, ತೆಲಂಗಾಣ ರಾಜ್ಯದ ಸಂಗಾರೆಡ್ಡಿಯಿಂದ 2020ರಲ್ಲಿ ಗೋಲ್ಡನ್ ತಳಿಯ 800 ಸೀತಾಫಲ ಸಸಿಗಳನ್ನು ತಂದು ಎರಡು ಎಕರೆಯಲ್ಲಿ ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ 12×12 ಅಡಿ ಅಂತರದಲ್ಲಿ ಗಿಡಗಳನ್ನ ನಾಟಿ ಮಾಡಿದ್ದಾರೆ. ಈ ಗಿಡಗಳು ಹುಲುಸಾಗಿ ಬೆಳೆದು ಮೂರು ವರ್ಷಕ್ಕೇ ಫಸಲು ನೀಡಲು ಪ್ರಾರಂಭಿಸಿದ್ದರಿಂದ ಮೊದಲನೇ ಫಸಲಿನಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ಆದಾಯ ಗಳಿಸಿರುವೆ ಎಂದು ರೈತ ಸಂಜು ಪ್ರಭ ಹೇಳುತ್ತಿದ್ದಾರೆ.
ನೀರಾವರಿಗಾಗಿ ಒಂದು ಕೊಳವೆ ಬಾವಿಯಿದ್ದು, ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದಾರೆ. ಸೀತಾಫಲ ಪ್ರತಿ ಗಿಡಕ್ಕೆ ವರ್ಷಕ್ಕೊಮ್ಮೆ ತಿಪ್ಪೆಗೊಬ್ಬರ, ಹಸುವಿನ ಸಗಣಿಯಿಂದ ತಯಾರಿಸಿದ ಜೀವಾಮೃತ ಹಾಕುತ್ತಾರಂತೆ. ಈ ಬೆಳೆಗೆ ಬೇಸಿಗೆಯಲ್ಲಿ ಐದಾರು ದಿನಕ್ಕೊಮ್ಮೆ, ಮಳೆಗಾಲದಲ್ಲಿ 15 ದಿನಕ್ಕೊಮ್ಮೆ ನೀರುಣಿಸುತ್ತಾರೆ. ನವೆಂಬರ್ ನಿಂದ ಆರಂಭವಾಗುವ ಸೀತಾ ಫಲ ಸೀಸನ್ ಜನವರಿ ವರೆಗೆ ಕಾಯಿ ಬಿಡುತ್ತದೆ. ಒಂದು ಗಿಡಕ್ಕೆ ಕನಿಷ್ಠವೆಂದರೂ ಹತ್ತಕ್ಕೂ ಹೆಚ್ಚು ಕಾಯಿ ಬಿಡುತ್ತದೆ. ಸುಮಾರು ಮೂರರಿಂದ ನಾಲ್ಕು ಕೆಜಿ ವರೆಗೆ ಒಂದು ಗಿಡಕ್ಕೆ ಸೀತಾಫಲ ಸಿಗುತ್ತದೆ.