ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಜ್ಜಿ ಕರ್ನಾಟಕದ ಮೊದಲ ಮಹಿಳಾ ಉದ್ಯಮಿ 'ಕಾಫಿ ಪುಡಿ ಸಾಕಮ್ಮ'ಹೆಸರಿನಲ್ಲಿ ಪೋಸ್ಟಲ್ ಕವರ್ ಬಿಡುಗಡೆ
ಹಾಸನ- ಅರಕಲಗೂಡು ಕ್ಷೇತ್ರದ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರ ಧರ್ಮಪತ್ನಿ ಶ್ರೀಮತಿ ತಾರಾ ಅವರ ಅಜ್ಜಿ ಕಾಫಿಪುಡಿ ಸಾಕಮ್ಮ ಅವರ ಪೋಸ್ಟರ್ ಕವರ್ ಬಿಡುಗಡೆ ಮಾಡಿದರು.
ಭಾರತೀಯ ಅಂಚೆ ಇಲಾಖೆಯ ವತಿಯಿಂದ ಬೆಂಗಳೂರು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ #karnapex2024 ಅಂಚೆಚೀಟಿಗಳ ಹಬ್ಬ ಕಾರ್ಯಕ್ರಮದಲ್ಲಿ. ಕರ್ನಾಟಕದ ಮೊದಲ ಮಹಿಳಾ ಉದ್ಯಮಿ ಕಾಫಿಪುಡಿ ಸಾಕಮ್ಮ ಅವರ ಕುರಿತು ವಿಶೇಷ ಪೋಸ್ಟಲ್ ಕವರ್ ಅನ್ನು ಇಂದು ಸೋಮವಾರಪೇಟೆ ಸಾಕಮ್ಮನವರ ಕುಟುಂಬಸ್ಥರಾದ ಶ್ರೀಮತಿ ತಾರಾ ಮಂಜು, ಅರಕಲಗೂಡು ಶಾಸಕ ಎ. ಮಂಜು, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಧರ್ಮಪತ್ನಿ ಶ್ರೀಮತಿ ದಿವ್ಯ ಮಂತರ್ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಶ್ರೀ ವಿನೋದ್ ಶಿವಪ್ಪನವರು ಮುಂತದವರು ಪೋಸ್ಟರ್ ಕವರ್
ಬಿಡುಗಡೆಗೊಳಿಸಿದರು.
ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಸ್ಥಳದಲ್ಲೇ ಇಬ್ಬರು ಸಾವು
ತುಮಕೂರು: ಮುಂದೆ ಹೋಗುತ್ತಿದ್ದ ಬೈಕ್‌ಗೆ (Bike) ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು (Tumakuru) ಜಿಲ್ಲೆ ಹುಲಿಯೂರು (Huliyuru) ದುರ್ಗದಲ್ಲಿ ನಡೆದಿದೆ.
ರಾಮನಗರ (Ramanagara) ಜಿಲ್ಲೆಯ ಚನ್ನಪಟ್ಟಣ ಮೂಲದ ಅಮಾನುತುಲ್ಲಾ ಖಾನ್ (60), ಮುನಾವರ್ (50) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಇಬ್ಬರು ಬೈಕ್ ಸವಾರರು ಕಳೆದ ರಾತ್ರಿ ಹುಲಿಯೂರು ದುರ್ಗದ ಕಡೆಯಿಂದ ಚನ್ನಪಟ್ಟಣದ ಕಡೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಕೃಷ್ಣಪ್ಪನ ಕೊಪ್ಪಲು ಬಳಿ ವೇಗವಾಗಿ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಸವಾರರು ರಸ್ತೆಯಲ್ಲಿ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಕುರಿತು ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪರಿಚಿತ ವಾಹನದ ಪತ್ತೆಗೆ ಬಲೆ ಬೀಸಿದ್ದಾರೆ.