Madikeri: ಪತ್ನಿಯನ್ನು ಕೊಲೆಗೈದು ಬಂದೂಕಿನೊಂದಿಗೆ ಪೊಲೀಸರಿಗೆ ಶರಣಾದ ಪತಿ
Madikeri: ದಂಪತಿಯ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಟೋಳಿ ಗ್ರಾಮದಲ್ಲಿ ಜು.20ರ ಶನಿವಾರ ನಡೆದಿದೆ.
18 ವರ್ಷದ ಹಿಂದೆ ಶಿಲ್ಪ ಹಾಗೂ ಬೋಪಣ್ಣ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಯ ಸಂಕೇತ ಎಂಬಂತೆ ಇಬ್ಬರು ಮುದ್ದಾದ ಮಕ್ಕಳು ಇದ್ದರು. ಅದ್ಯಾಕೋ ಗೊತ್ತಿಲ್ಲ ಅವರ ಕುಟುಂಬದಲ್ಲಿ ಬಿರುಗಾಳಿ ಎದ್ದಿತ್ತು.
ಪತಿ-ಪತ್ನಿ ನಡುವೆ ಕಳೆದ ಕೆಲ ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ಜು.20ರ ಶನಿವಾರ ಬೆಳಿಗ್ಗೆ ಇದು ವಿಕೋಪಕ್ಕೆ ತಿರುಗಿ ಬೋಪಣ್ಣ ಅವರು ಶಿಲ್ಪಾ ಸೀತಮ್ಮ ಅವರ ಮೇಲೆ ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ. ನಾಯಕಂಡ ಸಿ.ಬೋಪಣ್ಣ ಅವರು ವಿರಾಜಪೇಟೆ ಪೊಲೀಸರಿಗೆ ಶರಣಾಗಿದ್ದು, ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.
ದಂಪತಿಗೆ ಪ್ರಥಮ ಪಿಯುಸಿ ಹಾಗೂ ಏಳನೇ ತರಗತಿ ಓದುವ ಎರಡು ಹೆಣ್ಣು ಮಕ್ಕಳು ಇದ್ದಾರೆ. ಅಮ್ಮನನ್ನ ಕಳೆದುಕೊಂಡು ಮಕ್ಕಳಿಬ್ಬರು ತಬ್ವಲಿಗಳಾಗಿದ್ದಾರೆ. ಪ್ರೀತಿಸಿ ಮದುವೆಯಾದ ನಂತರ ಹೊಂದಾಣಿಕೆ ಜೀವನ ಮಾಡಿದ್ರೆ ಸಂಸಾರ ಚೆನ್ನಾಗಿರುತ್ತಿತ್ತು. ಆದ್ರೆ, ಇಬ್ಬರೂ ಜಗಳವಾಡಿ ಸಂಸಾರವನ್ನು ಅಂತ್ಯ ಮಾಡಿಕೊಂಡಿದ್ದಾರೆ.
ಅಪ್ಪನ ಗನ್ ಜೊತೆ ಆಟವಾಡುತ್ತಾ ಮುಖಕ್ಕೆ ಶೂಟ್ ಮಾಡಿಕೊಂಡ 3 ವರ್ಷದ ಬಾಲಕ
ಲೂಸಿಯಾನ: ಅಮೆರಿಕದ ಲೂಸಿಯಾನ ರಾಜ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮೂರು ವರ್ಷದ ಬಾಲಕ ತನ್ನ ತಂದೆಯ ಗನ್ ಜೊತೆ ಆಟವಾಡುವಾಗ ಆಕಸ್ಮಿಕವಾಗಿ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡಿದ್ದಾನೆ. ಇದರಿಂದ ಆ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಬೆಡ್ ರೂಂನಲ್ಲಿ ಇಟ್ಟಿದ್ದ ತನ್ನ ತಂದೆಯ ಗನ್ ಅನ್ನು ತೆಗೆದುಕೊಂಡ ಬಾಲಕ ಅದರೊಂದಿಗೆ ಆಟವಾಡುತ್ತಿದ್ದ. ಇದು ಯಾರ ಗಮನಕ್ಕೂ ಬರಲಿಲ್ಲ. ಈ ವೇಳೆ ಆತ ತನ್ನ ಮುಖದ ಮುಂದೆ ಗನ್ ಹಿಡಿದುಕೊಂಡು ಟ್ರಿಗರ್ ಒತ್ತಿದ್ದಾನೆ. ಇದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶಬ್ದ ಕೇಳಿ ಓಡಿಬಂದ ಆತನ ತಂದೆ ಅವನನ್ನು ಬದುಕಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಆ ಗನ್ ಅನ್ನು ಹಾಸಿಗೆಯ ಮೇಲ್ಭಾಗದಲ್ಲಿದ್ದ ಶೆಲ್ಫ್ನಲ್ಲಿ ಇರಿಸಲಾಗಿತ್ತು. ಹೀಗಾಗಿ, ಆ ಮಗುವಿಗೆ ಅದು ಸುಲಭವಾಗಿ ಸಿಕ್ಕಿತ್ತು.
ತಂದೆ ಬಂದೂಕನ್ನು ಸುರಕ್ಷತೆಯ ದೃಷ್ಟಿಯಿಂದ ಇಟ್ಟುಕೊಂಡಿದ್ದರೂ ಅದನ್ನು ಸರಿಯಾಗಿ ಭದ್ರಪಡಿಸದಿರುವುದು ದುರದೃಷ್ಟಕರ ದುರಂತಕ್ಕೆ ಕಾರಣವಾಗಿದೆ.