ಶನಿವಾರ, ಸೆಪ್ಟೆಂಬರ್ 30, 2023
ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಇಬ್ಬರು ಐಪಿಎಸ್ ಅಧಿಕಾರಿಗಳು ವರ್ಗಾವಣೆ-ಸಲಾರ್ ಚಿತ್ರದ ನಂತರ ಅಧಿಕೃತವಾಗಿ ‘ಕೆಜಿಎಫ್ 3’ ಘೋಷಣೆ ಮಾಡಿದ ಹೊಂಬಾಳೆ ಫಿಲ್ಮ್ಸ್..!-Bank strike: ದೇಶಾದ್ಯಂತ ಬ್ಯಾಂಕ್ ಮುಷ್ಕರ ; ಡಿಸೆಂಬರ್- ಜನವರಿಯಲ್ಲಿ 13 ದಿನ ಬ್ಯಾಂಕುಗಳು ಬಂದ್!-ತಮಿಳು ನಟ ಸಿದ್ದಾರ್ಥ್ ಚಿಕ್ಕು ಚಿತ್ರದ ಪತ್ರಿಕಾಗೋಷ್ಠಿ ತಡೆದು ರಕ್ಷಣಾ ವೇದಿಕೆ ಆಕ್ರೋಶ ; ಕ್ಷಮೆ ಕೋರಿದ ಪ್ರಕಾಶ್ ರಾಜ್-KPSC ನೇಮಕಾತಿಗೆ ಅರ್ಜಿ ಸಲ್ಲಿಸಲು ನಾಳೆ ಸೆ.30 ಕೊನೆಯ ದಿನ-ಹಾಲಿವುಡ್ ನ ಖ್ಯಾತ ನಟ, ಹ್ಯಾರಿ ಪಾಟರ್ ನಲ್ಲಿ ಹೆಡ್ ಮಾಸ್ಟರ್ ಪಾತ್ರ ಮಾಡಿದ್ದ ಮೈಕಲ್ ಗ್ಯಾಂಬೋನ್ ನಿಧನ..!-ಇಂಜಿನ್ ತಾಂತ್ರಿಕ ದೋಷದಿಂದ ಸಮುದ್ರದ ಮಧ್ಯೆ ಸಿಲುಕಿಕೊಂಡ 10 ಮೀನುಗಾರನ್ನು ರಕ್ಷಿಸಿದ ಮಂಗಳೂರು ಕೋಸ್ಟ್ ಗಾರ್ಡ್!-21 ವರ್ಷದ ಗರ್ಭಿಣಿ ಮಹಿಳೆಯನ್ನು ಕಾಡಿಗೆ ಕರೆದೊಯ್ದು ಬೆಂಕಿ ಹಚ್ಚಿದ ಸಹೋದರ, ತಾಯಿ!-ಕರಾವಳಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ - ಆರೆಂಜ್ ಅಲರ್ಟ್ ಘೋಷಣೆ-ಮಂಗಳೂರು: ಇಂದಿನ ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ಸಿಗದ ಬೆಂಬಲ ;ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಧ್ಯಪ್ರದೇಶ: ಮದುವೆಯಾಗಿ 17 ದಿನದಲ್ಲೇ ಪತ್ನಿಯ ಕತ್ತು ಸೀಳಿ ಹತ್ಯೆಗೈದ ಪತಿ

Twitter
Facebook
LinkedIn
WhatsApp
s

ಇಂದೋರ್:‌ ಮದುವೆಯಾದ 17 ದಿನದಲ್ಲೇ ಪತಿಯೇ ಪತ್ನಿಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಮಧ್ಯ ಪ್ರದೇಶದ ಇಂದೋರ್‌ ನಲ್ಲಿ ನಡೆದಿರುವುದು ವರದಿಯಾಗಿದೆ.

ವಿಕ್ರಮ್‌ ಅವರ ವಿವಾಹ 22 ವರ್ಷದ ಅಂಜಲಿ ಸತೋಲಿಯಾ ಅವರೊಂದಿಗೆ ಮೇ.21 ರಂದು ನಡೆದಿದೆ. ಮದುವೆಯಾಗಿ ಸಂತಸದಲ್ಲಿ ಇರಬೇಕಾದ ನವದಂಪತಿ ಬಾಳಿನಲ್ಲಿ ಭೀಕರ ಘಟನೆ ನಡೆದಿದೆ.

ಇಂದೋರ್‌ ನ ಮ್ಹೋವ್ ಪ್ರದೇಶದ ಧರ್ ನಾಕಾದಲ್ಲಿ ಈ ಘಟನೆ ನಡೆದಿದ್ದು,ಗ್ರಾಮಾಂತರ ಎಸ್ಪಿ ಹಿತಿಕಾ ವಾಸಲ್ ಅವರು ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪತಿ – ಪತ್ನಿ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಪತಿ ಸಿಟ್ಟಿನಲ್ಲಿ ಕಿಚನ್‌ ಗೆ ಹೋಗಿ ಚಾಕು ತಂದು, ಪತ್ನಿ ಅಂಜಲಿ ಅವರ ಕತ್ತು ಸೀಳಿ, 15 ಬಾರಿ ಚುಚ್ಚಿ ಕೊಲೆಗೈದಿದ್ದಾನೆ. ಆ ಬಳಿಕ ತನ್ನ ಕೈಗೆ ಚುಚ್ಚಿಕೊಂಡಿದ್ದಾರೆ ಎಂದು ಪೊಲೀಸರಿಗೆ ಮೃತ ಮಹಿಳೆಯ ಅತ್ತೆ ಹೇಳಿದ್ದಾರೆ.

ಘಟನೆ ನಡೆದ ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ತೀವ್ರ ರಕ್ತಸ್ರಾವವಾಗಿ ಅಂಜಲಿ ಮೃತಪಟ್ಟಿದ್ದಾಳೆ. ಪತಿ ವಿಕ್ರಮ್‌ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಕ್ರಮ್‌ ಅವರಿಗೆ, ಮದುವೆ ಇಷ್ಟವಿರಲಿಲ್ಲ. ಬಲವಂತವಾಗಿ ಮನೆಯವರು ಮದುವೆ ಮಾಡಿಸಿದ್ದಾರೆ. ಈ ಕಾರಣದಿಂದ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ