ಮಡಂತ್ಯಾರು :ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಂಡಕ್ಕೆ ಬಿದ್ದ ಕಾರು...!
Twitter
Facebook
LinkedIn
WhatsApp
ಬೆಳ್ತಂಗಡಿ : ಮಂಗಳೂರು- ಧರ್ಮಸ್ಥಳ ಹೆದ್ದಾರಿಯಲ್ಲಿ ಇಂದು ಮಡಂತ್ಯಾರು ಪೇಟೆಯಲ್ಲಿ ಬೆಳ್ಳಂಬೆಳಗ್ಗೆ ಕಾರೋಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ. ಪುಂಜಾಲಕಟ್ಟೆ ಯಿಂದ ಬೆಳ್ತಂಗಡಿ ಮಾರ್ಗವಾಗಿ ಕಾರು ಚಲಿಸುತಿದ್ದು, ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ ಚಾಲಕ ಸೇರಿದಂತೆ ಎಷ್ಟು ಮಂದಿ ಪ್ರಯಾಣಿಕರಿದ್ದರು ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಪುಂಜಾಲಕಟ್ಟೆ ಯಿಂದ ಚಾರ್ಮಾಡಿ ವರೆಗೆ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಸವಾರರು ಜಾಗರೂಕತೆಯಿಂದ ವಾಹನ ಸಂಚಾರ ಮಾಡಬೇಕಾಗಿದೆ.
ರಸ್ತೆ ಬದಿ ಕೆಲವೆಡೆ ಯಾವುದೇ ಸೂಚನಾ ಫಲಕಗಳಿಲ್ಲದೇ ಅಗೆದಿಟ್ಟ ಗುಂಡಿಗೆ ಬೀಳುವ ಅಪಾಯದಲ್ಲಿದೆ. ಈ ರೀತಿಯಲ್ಲಿ ಸವಾರರಿಗೆ ಅವಘಡ ಸಂಭವಿಸಿದಲ್ಲಿ ಹೊಣೆ ಹೊತ್ತುವರು ಯಾರು? ಹೆದ್ದಾರಿ ಪ್ರಾಧಿಕಾರ ಆದಷ್ಟು ಬೇಗ ರಸ್ತೆ ಬದಿ ಸೂಚನಾ ಫಲಕ ಹಾಕಿಸಿ ಮುಂದಕ್ಕೆ ಆಗುವ ಅಪಾಯ ತಪ್ಪಿಸ ಬೇಕಿದೆ.