ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪ್ರೀತಿಸಿ ನಂಬಿಸಿ ವಂಚನೆ ಆರೋಪ; 70ರ ಅಜ್ಜನ ವಿರುದ್ಧ ಠಾಣೆ ಮೆಟ್ಟಿಲೇರಿದ 63 ರ ಅಜ್ಜಿ!

Twitter
Facebook
LinkedIn
WhatsApp
ಪ್ರೀತಿಸಿ ನಂಬಿಸಿ ವಂಚನೆ ಆರೋಪ; 70ರ ಅಜ್ಜನ ವಿರುದ್ಧ ಠಾಣೆ ಮೆಟ್ಟಿಲೇರಿದ 63 ರ ಅಜ್ಜಿ!

ಬೆಂಗಳೂರು: ಮದುವೆ ಆಗೋದಾಗಿ ನಂಬಿಸಿ 72 ವರ್ಷದ ವೃದ್ಧ (Old Man) ಮೋಸ (Cheat) ಮಾಡಿದ್ದಾನೆ ಎಂದು 63 ವರ್ಷದ ವೃದ್ಧೆ (Old Woman) ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ದಯಾಮಣಿ (63) ಎಂಬ ವೃದ್ಧೆ ಲೋಕನಾಥ್ (72) ಎಂಬ ವೃದ್ಧನ ವಿರುದ್ಧ ಬೆಂಗಳೂರಿನ ಪೂರ್ವ ವಿಭಾಗ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಹಲಸೂರು ನಿವಾಸಿಯಾದ ದಯಾಮಣಿಗೆ ಮದುವೆ ಆಗಿ ಗಂಡ ಮರಣ ಹೊಂದಿದ್ದರು. ಲೋಕನಾಥ್ ಪತ್ನಿ ಕೂಡ ಮರಣ ಹೊಂದಿದ್ದು, ಮಗನಿಗೆ ಮದುವೆ ಮಾಡಿಸುವ ಸಲುವಾಗಿ ಹೆಣ್ಣು ನೋಡುತ್ತಿದ್ದರು. ಈ ವೇಳೆ ದಯಾಮಣಿ ಹೆಣ್ಣು ತೋರಿಸುವುದಾಗಿ ಲೋಕನಾಥ್‌ಗೆ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ (Love) ತಿರುಗಿ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದರು.

ಇದೇ ಖುಷಿಯಲ್ಲಿ ಇಬ್ಬರೂ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಟ್ರಿಪ್ ಕೂಡ ಹೋಗಿದ್ದರು. ಆದರೆ ಇತ್ತೀಚಿಗೆ ಲೋಕನಾಥ್, ದಯಾಮಣಿಯನ್ನು ದೂರ ಮಾಡಲು ಶುರು ಮಾಡಿದ್ದರು. ಇದರಿಂದ ನೊಂದ ದಯಾಮಣಿ ಲೋಕನಾಥ್‌ಗೆ ಫೋನ್ ಮಾಡಿ ಕೇಳಿದ ವೇಳೆ ಮದುವೆ ಆಗೋಕೆ ಆಗಲ್ಲ. ಅದೇನ್ ಮಾಡ್ಕೋತಿಯಾ ಮಾಡ್ಕೋ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ಇದರಿಂದ ಬೇಸತ್ತ ದಯಾಮಣಿ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಗೃಹಲಕ್ಷ್ಮೀ ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್​ ಆಗಿರುವುದರ ಹಿಂದೆ ರಾಜಕೀಯ ಷಡ್ಯಂತ್ರದ ಮಾತು

ಬೆಂಗಳೂರು, (ಆಗಸ್ಟ್ 21): ಗೃಹಲಕ್ಷ್ಮೀ.. ಕಾಂಗ್ರೆಸ್​ನ ಗ್ಯಾರಂಟಿಗಳಲ್ಲಿ ಮಹತ್ವದ ಯೋಜನೆ. ರಾಜ್ಯದ ಮಹಿಳೆಯರ ಕಾತರಕ್ಕೆ ಕಾರಣವಾಗಿರುವ ಗಿಫ್ಟ್‌​.. ಈ ಕೊಡುಗೆ ಫಲಾನುಭವಿಗಳ ಕೈಗೆ ಸಿಗುವುದಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಈಗಾಗಲೇ ಮೂರು ಗ್ಯಾರಂಟಿಗಳು ಒಂದೊಂದಾಗಿ ಅನುಷ್ಠಾನವಾಗಿದ್ದು, ನಾಲ್ಕನೇ ಗ್ಯಾರಂಟಿಯಾಗಿ ಗೃಹಲಕ್ಷ್ಮೀ ಇದೇ ಆಗಸ್ಟ್​ 30 ರಂದು ಮನೆಗಳಿಗೆ ಎಂಟ್ರಿ ಕೊಡಲಿದ್ದಾಳೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಈಗಿನಿಂದಲೇ ತಯಾರಿಗಳು ನಡೆಯುತ್ತಿದ್ದು, ರಾಹುಲ್​ ಗಾಂಧಿ, ಮಲ್ಲಿಕಾರ್ಜುನ್​ ಖರ್ಗೆ ಬಟನ್​ ಒತ್ತುವ ಮೂಲಕ ಗೃಹಲಕ್ಷ್ಮೀಗೆ ಚಾಲನೆ ನೀಡಲಿದ್ದಾರೆ. ಆದ್ರೆ, ಈ ಕಾರ್ಯಕ್ರಮವನ್ನು ಮೊದಲು ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು. ಆದ್ರೆ, ಇದೀಗ ಕಾರ್ಯಕ್ರಮವನ್ನು ಮೈಸೂರಿಗೆ ಶಿಫ್ಟ್​ ಮಾಡಿರುವುದ ನಾನಾ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಈ ಬಗ್ಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್​ನಲ್ಲಿ ಬೇರೆ ಮಾತುಗಳು ಹರಿದಾಡಲು ಶುರುವಾಗಿವೆ.

ಹೌದು….ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಕಾರ್ಯಕ್ರಮದಿಂದ ಬೆಳಗಾವಿ ಜಿಲ್ಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವರ್ಚಸ್ಸು ಹೆಚ್ಚಾಗುತ್ತೆ. ಹೀಗಾಗಿ ಬೆಳಗಾವಿಯಿಂದ ಮೈಸೂರಿಗೆ ಶಿಪ್ಟ್ ಮಾಡಿಸಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಅಲ್ಲದೇ ಹೆಬ್ಬಾಳ್ಕರ್ ರಾಜಕೀಯ ವಿರೋಧಿಗಳು ಸಿಎಂ ಮೇಲೆ ಒತ್ತಡ ಹೇರಿ ಈ ಕಾರ್ಯಕ್ರಮವನ್ನು ಮೈಸೂರಿಗೆ ಸ್ಥಳಾಂತರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಸತೀಶ್ ಜಾರಕಿಹೊಳಿ ಅವರೇ ಕಾರ್ಯಕ್ರಮ ಮೈಸೂರಿಗೆ ಸ್ಥಳಾಂತರ ಮಾಡಿಸಿದ್ದಾರೆ ಎಂದು ಪರೋಕ್ಷವಾಗಿ ಹೆಸರು ಹೇಳದೇ ಲಕ್ಷ್ಮೀ ಹೆಬ್ಬಾಳ್ಕರ್​ ಬೆಂಬಲಿಗರು ಆರೋಸಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್​ನಲ್ಲಿ ನಾಯಕರ ಮುಸುಕಿನ ಗುದ್ದಾಟ ಶುರುವಾಗಿದೆ.

ಬೆಳಗಾವಿಯಲ್ಲೇ ಗೃಹ ಲಕ್ಷ್ಮೀ ಯೋಜನೆ ಚಾಲನೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಸಾಲದಕ್ಕೆ ಎರಡು ಕಡೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಸ್ತು ಎಂದಿದ್ದರು. ಖುದ್ದು ಡಿಕೆ ಶಿವಕುಮಾರ್ ಅವರೇ ತಮ್ಮ ಮೊಬೈಲ್ ನಲ್ಲಿ ವಾಸ್ತು ನೋಡಿ ಅದೇ ರೀತಿ ವೇದಿಕೆ ನಿರ್ಮಾಣಕ್ಕೆ ಸೂಚನೆ ನೀಡಿದ್ದರು. ಇದೀಗ ಏಕಾಏಕಿ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್​ ಮಾಡಿರುವುದು ಕಾರ್ಯಕರ್ತರು ಹಾಗೂ ನಾಯಕರ ಮಧ್ಯೆ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಏಕಾಏಕಿ ಕಾರ್ಯಕ್ರಮವನ್ನು ಶಿಫ್ಟ್ ಮಾಡಲು ಅಸಲಿ ಕಾರಣಗಳೇನು ಎನ್ನುವುದು ಲಕ್ಷ್ಮೀ ಹೆಬ್ಬಾಳ್ಕರ್​ ಬೆಂಬಲಿಗರು ಪ್ರಶ್ನೆಯಾಗಿದೆ.

ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್​ಗೆ ಅಸಲಿ ಕಾರಣ

ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್​ ಗಾಂಧಿ, ಮಲ್ಲಿಕಾರ್ಜುನ್​ ಖರ್ಗೆ ಬಟನ್​ ಒತ್ತುವ ಮೂಲಕ ಗೃಹಲಕ್ಷ್ಮೀಗೆ ಚಾಲನೆ ನೀಡಲಿದ್ದಾರೆ. ಮತ್ತೊಂದು ವಿಷಯ ಏನಂದ್ರೆ ಸಂಸದ ರಾಹುಲ್​ ಗಾಂಧಿ ಆಗಸ್ಟ್​ 30ರಂದೇ ವಯನಾಡಿಗೆ ತೆರಳಬೇಕಿರುವುದರಿಂದ ಬೆಳಗಾವಿಯಲ್ಲಿನ ಕಾರ್ಯಕ್ರಮವನ್ನು ಮೈಸೂರಿಗೆ ಶಿಫ್ಟ್​ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮ ಸ್ಥಳಾಂತರದ ಹಿಂದೆ ಷಡ್ಯಂತ್ರದ ಮಾತು

ಎಂಎಲ್​ಸಿ ಚನ್ನರಾಜ ಹಟ್ಟಿಕೊಳಿ ಮಾತನಾಡಿ, ಮುಖ್ಯಮಂತ್ರಿಗಳು ಎಲ್ಲರನ್ನೂ ಏಕತೆಯಿಂದ ನೋಡುತ್ತಾರೆ ಹಾಗೂ ನಾನು ಅವರನ್ನು ಹತ್ತಿರದಿಂದ ತಿಳಿದಿದ್ದೇನೆ. ನಡೆದಿರುವ ಎಲ್ಲಾ ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಸದ್ಯಕ್ಕೆ ಅವೆಲ್ಲವನ್ನೂ ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿವ ಮೂಲಕ ಮೂಲಕ ಕಾರ್ಯಕ್ರಮ ಸ್ಥಳಾಂತರದ ಹಿಂದೆ ಷಡ್ಯಂತ್ರ ಆಗಿರುವುದನ್ನ ಪರೋಕ್ಷವಾಗಿ ಹೇಳಿದರು.

ಸತೀಶ್ ಜಾರಕಿಹೊಳಿರವರ ನೇತೃತ್ವದಲ್ಲಿ ಎರಡು ಸ್ಥಳಗಳನ್ನು ನಿಗದಿಮಾಡಲಾಗಿತ್ತು. ಬೆಳಗಾವಿ ದೊಡ್ಡ ಜಿಲ್ಲೆಯಾದ್ದರಿಂದ, ಎಲ್ಲಾ ಸಿದ್ಧತೆಗಳನ್ನು ಮಾಡಿಯಾಗಿತ್ತು. ಆದರೆ ಕೆಲವೊಂದು ಅನಿರೀಕ್ಷಿತ ಕಾರಣಗಳಿಂದ ಮೈಸೂರಿನಲ್ಲಿ ಉದ್ಘಾಟನೆಯಾಗುತ್ತಿದೆ. ಎಲ್ಲವೂ ಒಳ್ಳೆಯದೇ ಆಗಿದೆ, ಮಂಬರುವ ದಿನಗಳಲ್ಲಿ ರಾಜ್ಯದ ಮಹಿಳೆಯರಿಗೆ ಒಳ್ಳೆಯದೇ ಆಗುತ್ತದೆ ಎಂದರು.

ಕಾರ್ಯಕ್ರಮ ಸ್ಥಳಾಂತರಕ್ಕೆ ಅಸಲಿ ಕಾರಣ ಕೊಟ್ಟ ಜಾರಕಿಹೊಳಿ

ಮೈಸೂರಿಗೆ ಶಿಫ್ಟ್​ ಆಗಿರುವ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿಯವರಿಗೆ ವೈಯನಾಡಿನಲ್ಲಿ ಕಾರ್ಯಕ್ರಮವಿರುವುದರಿಂದ ಅದಕ್ಕೆ ಹತ್ತಿರವಾಗಲೆಂದು ಮೈಸೂರಿಗೆ ಸ್ಥಳಾಂತರಿಸುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ. ಉದ್ಘಾಟನಾ ಕಾರ್ಯಕ್ರಮ ಎಲ್ಲಿಯೇ ಆದರೂ, ಗೃಹಲಕ್ಷ್ಮೀ ಯೋಜನೆ ನಮ್ಮದಾಗುತ್ತದೆ. ಇದು ಜಿಲ್ಲಾ ಮಟ್ಟದ ಕಾರ್ಯಕ್ರಮವಲ್ಲ, ರಾಜ್ಯ ಮಟ್ಟದ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದರು.

ನಾವೆಲ್ಲಾ ಜಿಲ್ಲಾ ಕೋರ್ಟ್ ಇದ್ದಂತೆ, ಸಿಎಂರವರು ಹೈಕೋರ್ಟ್, ಸುಪ್ರೀಂ ಕೋರ್ಟ್ ಇದ್ದಂತೆ ಅವರ ತೀರ್ಮಾನವೇ ಅಂತಿಮ ಎಂದರು. ಸ್ಥಳಾಂತರದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ, ಬೆಳಗಾವಿಯನ್ನು ಈ ಮೊದಲು ಗುರುತಿಸಿದ್ದರು, ಆದ್ದರಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವು. ಈಗ ಮೈಸೂರಿಗೆ ಬದಲಾದ್ದರಿಂದ ಅಲ್ಲಿಗೆ ತೆರಳುತ್ತೇವೆ ಎಂದರು.

ಒಟ್ಟಿನಲ್ಲಿ ಈ ಕಾರ್ಯಕ್ರಮ ಮೈಸೂರಿಗೆ ಶಿಫ್ಟ್ ಆಗಿರುವುದಕ್ಕೆ ಬೆಳಗಾವಿ ಕಾಂಗ್ರೆಸ್​ನಲ್ಲಿ ಹಲವು ಚರ್ಚೆಗ ಗ್ರಾಸವಾಗಿದ್ದು, ನಾಯಕರ ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist