ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ವೇಳೆ ಸ್ಟೇಡಿಯಂನಲ್ಲೆ ಲವರ್ ಗಳ ಪ್ರೇಮ ಕಹಾನಿ!
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅಲ್ಲಿ ನರೆದಿದ್ದವರೆಲ್ಲಾ ಜೋರಾಗಿ ನಗುವಂತಹ ಒಂದು ಪ್ರಸಂಗ ನಡೆದಿದೆ.
ಕ್ರಿಕೆಟ್ ಲೈವ್ ಪಂದ್ಯದ ನಡುವೆ ಪ್ರೇಮಿಗಳಿಬ್ಬರು ಪ್ರೀತಿ ಮಾಡುತ್ತಾ ಕುಳಿತಿದ್ದರು. ಇದು ಅಲ್ಲಿದ ಕ್ಯಾಮರಾಮನ್ ಕಣ್ಣಿಗೆ ಬಿದ್ದಿದೆ. ಇನ್ನೂ ಸುಮ್ನೆ ಇರ್ತಾರಾ. ಆ ಪ್ರೇಮಿಗಳ ರೊಮ್ಯಾನ್ಸ್ ಅನ್ನ ಝೂಮ್ ಹಾಕಿ ತೋರಿಸಿದ್ದಾರೆ.
ಗ್ರೌಂಡ್‌ನಲ್ಲಿದ್ದ ಸ್ಕ್ರೀನ್ ಮೇಲೆ ಈ ಪ್ರೇಮಿಗಳು ಪ್ರೇಮದಾಟ ಲೈವ್ ಟೆಲಿಕಾಸ್ಟ್ ಆಗಿದೆ. ಇದನ್ನು ನೋಡಿದ ಲವರ್ಸ್ ಗಾಬರಿಯಾಗಿದ್ದಾರೆ. ಪ್ರಿಯಕರನ ತೊಡೆ ಮೇಲೆ ಮಲಗಿದ್ದ ಪ್ರಿಯತಮೆ ಸ್ಕ್ರೀನ್ ನೋಡಿ ಎದಿದ್ದಾರೆ.
ಇನ್ನೂ ಪ್ರಿಯಕರನಂತೂ ಅಯ್ಯೋ ಸಿಕ್ಕಿಹಾಕಿಕೊಂಡ್ರಲ್ವಾ ಅಂತ ಕಕ್ಕಾಬಿಕ್ಕಿಯಾಗಿದ್ದಾನೆ. ತನ್ನ ಬಳಿ ಇದ್ದ ಜಾಕೆಟ್‌ನಿಂದ ಮುಖ ಮುಚ್ಚಿಕೊಂಡಿದ್ದಾನೆ.
— Pushkar (@musafir_hu_yar) December 28, 2023
ಮೈದಾನದಲ್ಲಿ ನೆರೆದಿದ್ದ ಜನರೆಲ್ಲಾ ಸ್ಕ್ರೀನ್ ಮೇಲೆ ವಿಡಿಯೋ ಬರುತ್ತಿದ್ದಂತೆ ಜೋರಾಗಿ ಕಿರುಚಿದ್ದಾರೆ. ಇದರಿಂದ ಪ್ರೇಮಿಗಳಿಗೆ ಇರಿಸು-ಮುರಿಸಾಗಿದ್ದಂತೂ ನಿಜ.
ಅಲ್ಲಿ ನೆರೆದಿದ್ದ ಜನರೆಲ್ಲಾ ಒನ್ಸ್ ಮೋರ್ ಅಂತ ಕಿರುಚಿದ್ದಾರೆ. ಇದನ್ನು ಕೇಳಿಸಿಕೊಂಡ ಯುವಕ ಜಾಕೆಟ್‌ನಲ್ಲಿ ಮುಖ ಮುಚ್ಚಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇತ್ತ ಹುಡುಗಿ ಕೂಡ ಯಾರಿಗೂ ಗೊತ್ತಾಗದಂತೆ ಮೈದಾನದಿಂದ ಹೊರಗೆ ಹೋಗಿದ್ದಾರೆ.
ಇನ್ನೂ ಪಂದ್ಯದ ವೇಳೆ ಮತ್ತೊಂದು ವಿಚಿತ್ರ ಘಟನೆ ನಡೆದಿದೆ. ಅಂಪೈರ್ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಇದರಿಂದ ಪಂದ್ಯ ಕೆಲ ಕಾಲ ತಡವಾಗಿ ಆರಂಭಗೊಂಡಿದೆ. ರಿಚರ್ಡ್ ಇಲಿಂಗ್‌ವರ್ತ್(Richard Illingworth) ಲಿಫ್ಟ್‌ನಲ್ಲಿ ಸಿಲುಕಿಕೊಂಡ ಅಂಪೈರ್ ಆಗಿದ್ದಾರೆ.
ಭಾರತಕ್ಕೆ ಸೋಲು – ಆಸೀಸ್‌ಗೆ 6 ವಿಕೆಟ್‌ಗಳ ಜಯ
ಮುಂಬೈ: ಆಸ್ಟ್ರೇಲಿಯಾ (Australia) ವಿರುದ್ಧ ಏಕೈಕ ಪಂದ್ಯದ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ (India) ಮಹಿಳಾ ಕ್ರಿಕೆಟ್ ತಂಡ ಏಕದಿನ (1st ODI) ಸರಣಿಯ ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು. ಈ ಮೊತ್ತವನ್ನು ಚೇಸ್ ಮಾಡಿದ ಆಸ್ಟ್ರೇಲಿಯಾ 46.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 285 ರನ್ ಹೊಡೆದು ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯಾ ಪರ ಫೋಬೆ ಲಿಚ್‌ಫೀಲ್ಡ್ 78 ರನ್ (89 ಎಸೆತ, 8 ಬೌಂಡರಿ, 1 ಸಿಕ್ಸರ್), ಎಲ್ಲಿಸ್ ಪೆರ್ರಿ 75 ರನ್ (72 ಎಸೆತ, 9 ಬೌಂಡರಿ, 2 ಸಿಕ್ಸರ್), ಬೆತ್ ಮೂನಿ 42 ರನ್(47 ಎಸೆತ, 4 ಬೌಂಡರಿ), ತಹ್ಲಿಯಾ ಮೆಕ್‌ಗ್ರಾತ್ ಔಟಾಗದೇ 68 ರನ್(55 ಎಸೆತ, 11 ಬೌಂಡರಿ) ಹೊಡೆಯುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು.
ಭಾರತದ ಪರ ಯಸ್ತಿಕಾ ಭಾಟಿಯಾ 49 ರನ್ (64 ಎಸೆತ, 7 ಬೌಂಡರಿ), ಜೆಮಿಮಾ ರಾಡ್ರಿಗಸ್ 82 ರನ್ (77 ಎಸೆತ, 7 ಬೌಂಡರಿ), ಕೊನೆಯಲ್ಲಿ ಪೂಜಾ ವಸ್ತ್ರಕರ್ ಔಟಾಗದೇ ಸ್ಫೋಟಕ 62 ರನ್(46 ಎಸೆತ, 7 ಬೌಂಡರಿ, 2 ಸಿಕ್ಸರ್) ಹೊಡೆದ ಪರಿಣಾಮ ಭಾರತ 280 ರನ್‌ಗಳ ಗಡಿಯನ್ನು ದಾಟಿತ್ತು.