Lokhandwala Complex ಕಟ್ಟಡದಲ್ಲಿ ಅಗ್ನಿ ಅವಘಡ; 3 ಸಾವು

ಮುಂಬೈ: ಮುಂಬೈನ (Mumbai) ಲೋಖಂಡವಾಲಾ ಕಾಂಪ್ಲೆಕ್ಸ್ನಲ್ಲಿ (Lokhandwala Complex) 14 ಅಂತಸ್ತಿನ ವಸತಿ ಕಟ್ಟಡದಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಧೇರಿ ಪ್ರದೇಶದ ಲೋಖಂಡವಾಲಾ ಕಾಂಪ್ಲೆಕ್ಸ್ನ (Lokhandwala Complex) 4ನೇ ಅಡ್ಡ ರಸ್ತೆಯಲ್ಲಿರುವ ರಿಯಾ ಪ್ಯಾಲೇಸ್ ಕಟ್ಟಡದ 10ನೇ ಮಹಡಿಯಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಕೂಪರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು ಅವರನ್ನು ಕೂಪರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಗಂಭೀರ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಚಂದ್ರಪ್ರಕಾಶ್ ಸೋನಿ (74), ಕಾಂತ ಸೋನಿ (74) ಮತ್ತು ಪೆಲುಬೇಟ (42) ಎಂದು ಗುರುತಿಸಲಾಗಿದೆ.

ಬೆಳಗ್ಗೆ 9 ಗಂಟೆ ಸುಮಾರಿಗೆ ಬೆಂಕಿ ನಂದಿಸಲಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಳಿಗ್ಗೆ 8 ರ ಸುಮಾರಿಗೆ ಟೆರೇಸ್ನಲ್ಲಿ ಕೆಲಸ ಮಾಡುತ್ತಿದ್ದ ನೆರೆಹೊರೆಯವರು 10 ನೇ ಮಹಡಿಯಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ಗಮನಿಸಿದರು. ಅವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದು ನಂತರ ಅಗ್ನಿಶಾಮಕ ದಳಕ್ಕೆ ತಿಳಿಸಿದರು. “ನಾವು ಅರ್ಧ ಗಂಟೆಯೊಳಗೆ ಬೆಂಕಿಯನ್ನು ನಂದಿಸಿದೆವು, ನಂತರ ಕೂಲಿಂಗ್ ಕಾರ್ಯಾಚರಣೆಗಳು ಸ್ವಲ್ಪ ಸಮಯ ತೆಗೆದುಕೊಂಡವು. ಬೆಂಕಿ ಅವಘಡದಲ್ಲಿ ಗಾಯಗೊಂಡ ಮೂವರನ್ನು ಕೂಪರ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಸುಟ್ಟಗಾಯಗಳ ಪರಿಣಾಮ ಇಬ್ಬರು ಮೃತಪಟ್ಟರೆ, ಮೂರನೆ ಹೊಗೆ ಸೇವಿಸಿ ಸಾವಿಗೀಡಾಗಿದ್ದಾರೆ. ಅಲ್ಲಿ ಸುತ್ತಲೂ ಹೊಗೆ ಆವರಿಸಿದ್ದು ಸಿಲುಕಿರುವವರನ್ನು ರಕ್ಷಿಸಲು ಸವಾಲಾಗಿತ್ತು ಎಂದು ಪ್ರಭಾರಿ ವಿಭಾಗೀಯ ಅಗ್ನಿಶಾಮಕ ಅಧಿಕಾರಿ ಪುರುಷೋತ್ತಮ್ ಸಂಡಿಕರ್ ಘಟನೆಯನ್ನು ವಿವರಿಸಿದ್ದಾರೆ.
ಮುಂಬೈನ ಅಂಧೇರಿಯ ಲೋಖಂಡವಾಲಾ ಕಾಂಪ್ಲೆಕ್ಸ್ನ (Lokhandwala Complex) ಹತ್ತಿರ ಪ್ರದೇಶದಲ್ಲಿ ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ಬೆಂಕಿ ಅವಘಡವಾಗಿದೆ. ಸೆಪ್ಟೆಂಬರ್ 19 ರಂದು, ಕಾಂಪ್ಲೆಕ್ಸ್ನಲ್ಲಿರುವ ಬಂಗಲೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಆದರೆ, ಬಂಗಲೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸಿದ್ದು, ಲೋಖಂಡವಾಲಾ ಕಾಂಪ್ಲೆಕ್ಸ್ನ (Lokhandwala Complex) ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ. ಬಂಗಲೆ ನಂ.11, ಕ್ರಾಸ್ ರೋಡ್ ನಂ 2, ಸ್ಟೆಲ್ಲರ್ ಬಂಗಲೆ, ಲೋಖಂಡವಾಲಾ ಕಾಂಪ್ಲೆಕ್ಸ್, ಅಂಧೇರಿ ಪಶ್ಚಿಮದಲ್ಲಿ ಈ ಘಟನೆ ನಡೆದಿತ್ತು.
ಮುಖ ಸುಟ್ಟಿರುವ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ
ಪಶ್ಚಿಮ ಬಂಗಾಳ: ರಸ್ತೆಯ ಪಕ್ಕದಲ್ಲಿ ಮುಖ ಸುಟ್ಟಿರುವ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿಯ ದೇಹದಲ್ಲಿ ಭಾಗಶಃ ಬಟ್ಟೆ ಇರಲಿಲ್ಲ. ಸುಮಾರು 20-21 ವರ್ಷ ವಯಸ್ಸಿನ ಯುವತಿ ಎಂದು ಹೇಳಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಕೃಷ್ಣನಗರದಲ್ಲಿದೆ. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಮಹಿಳೆಯ ಮುಖ ಗುರುತಿಸಲಾಗದಷ್ಟು ಸುಟ್ಟು ಹೋಗಿತ್ತು. ಸ್ಥಳೀಯರು ಬೆಳಗಿನ ವಾಕಿಂಗ್ ಮಾಡುವಾಗ ಶವವನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಪ್ರಾಥಮಿಕ ಅನುಮಾನಗಳ ಪ್ರಕಾರ, ಮಹಿಳೆಯನ್ನು ಬೇರೆಡೆ ಕೊಂದು, ಆಕೆಯ ದೇಹವನ್ನು ಅಪರಿಚಿತ ದುಷ್ಕರ್ಮಿಗಳು ಪ್ರದೇಶದಲ್ಲಿ ಎಸೆಯುವ ಮೊದಲು ಆಕೆಯ ಮುಖಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ.
ಸಾಕ್ಷ್ಯ ನಾಶಪಡಿಸಲು ಆಕೆಯ ಮೇಲೆ ಅತ್ಯಾಚಾರ ನಡೆಸಿ ಸುಟ್ಟು ಹಾಕಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರಕ್ಕೆ ರಶ್ಮಿಕಾ ಮಂದಣ್ಣ ರಾಯಭಾರಿ
ನವದೆಹಲಿ: ಡೀಪ್ ಫೇಕ್ ವಿಡಿಯೋಗಳಿಗೆ ತುತ್ತಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಇದೀಗ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಹೌದು.. ರಶ್ಮಿಕಾ ಮಂದಣ್ಣ ಅವರನ್ನು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ.
ಈ ಕುರಿತು ಖುದ್ದು ನಟಿ ವಿಷಯ ತಿಳಿಸಿದ್ದು, ‘ಕೆಲವು ವರ್ಷಗಳ ಹಿಂದೆ ನನ್ನ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು ಗೊತ್ತೇ ಇದೆ. ಅದು ಸೈಬರ್ ಕ್ರೈಂ. ಅದರ ನಂತರ ನಾನು ಸೈಬರ್ ಅಪರಾಧಗಳ ವಿರುದ್ಧ ಹೋರಾಡಬೇಕು ಎಂದು ಯೋಚಿಸಿದೆ.
ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂದುಕೊಂಡಿದ್ದೆ. ಆ ನಿಮಿತ್ತ ಕಾರ್ಯಯೋಜನೆ ರೂಪಿಸಿದ್ದೆ ಎಂದು ತಮ್ಮ ಇನ್ ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ನಾನು ಕೇಂದ್ರ ಸರ್ಕಾರದ ಜೊತೆಗೆ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿದ್ದೇನೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಸೈಬರ್ ಕ್ರಿಮಿನಲ್ಗಳು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ.
ನಾವು ಎಚ್ಚರವಾಗಿರುವುದು ಮಾತ್ರವಲ್ಲದೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಮತ್ತು ಸೈಬರ್ ಅಪರಾಧಗಳ ವಿರುದ್ಧ ಕೆಲಸ ಮಾಡಬೇಕು. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿ ನಾನು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಸೈಬರ್ ಅಪರಾಧಗಳಿಂದ ದೇಶವನ್ನು ರಕ್ಷಿಸಬೇಕು ಎಂದು ಅದು ಹೇಳಿದೆ ಎಂದು ನಟಿ ಹೇಳಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆ ರಶ್ಮಿಕಾ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಹಲವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡುವ ಭಯಾನಕ ತಂತ್ರ ಈ ಡೀಪ್ ಫೇಕ್. ಇದಾಗಲೇ ಕೆಲವರಿಗೆ ಈ ಕೆಟ್ಟ ಅನುಭವವಾಗಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರ ಪ್ರಕರಣದಿಂದಾಗಿ ಇದು ಭಾರಿ ಸುದ್ದಿಗೆ ಗ್ರಾಸವಾಗಿತ್ತು.
ಇದಾದ ಬಳಿಕ ಬಾಲಿವುಡ್ ನಟಿಯರಾದ ಕಾಜೋಲ್, ಆಲಿಯಾ ಸೇರಿದಂತೆ ಹಲವು ನಟಿಯರ ವಿಡಿಯೋಗಳು ಕೂಡ ಇದೇ ರೀತಿ ವೈರಲ್ ಆಗಿತ್ತು.