ಬುಧವಾರ, ಫೆಬ್ರವರಿ 21, 2024
ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!-ಮಕ್ಕಳಿಗೆ ಮೊಟ್ಟೆ ಮತ್ತು ಹಾಲಿನ ಜೊತೆ ವಾರದಲ್ಲಿ 3 ದಿನ ರಾಗಿಮಾಲ್ಟ್: ಮಧು ಬಂಗಾರಪ್ಪ..!-ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ನಿಧನ..!-ದೆಹಲಿ ಗಡಿಯಲ್ಲಿ 14 ಸಾವಿರ ರೈತರು ಮತ್ತೆ ಪ್ರತಿಭಟನೆ..!-ಆಟೋಗೆ ಟ್ರಕ್‌ ಡಿಕ್ಕಿಯಾಗಿ ಅಪ್ಪಚ್ಚಿ; ಸ್ಥಳದಲ್ಲೇ 9 ಮಂದಿ ದುರ್ಮರಣ...!-ಪುತ್ತೂರು : ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆ: ನಾಲ್ವರ ಸೆರೆ-Sonia Gandhi: ರಾಜ್ಯಸಭೆಗೆ ಸೋನಿಯಾ ಗಾಂಧಿ ಅವಿರೋಧವಾಗಿ ಆಯ್ಕೆ!-Gold Rate Today : ಇಳಿಕೆಯತ್ತ ಬಂಗಾರದ ಬೆಲೆ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ಅಪ್ಡೇಟ್ಸ್-ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾಗೆ ಎರಡನೇ ಗಂಡು ಮಗು ; ಹೆಸರೇನು ಗೊತ್ತೆ!-ವೀರಪ್ಪ ಮೊಯ್ಲಿ, ನಲಪಾಡ್​ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ..! ಏನಿದು ಪ್ರಕರಣ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!

Twitter
Facebook
LinkedIn
WhatsApp
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!

ಬೆಂಗಳೂರು: ಯಾವುದೇ ಭಯ, ನಾಚಿಕೆ ಇಲ್ಲದೆ ಕಂಡವರ ಮುಂದೆ ಹಣಕ್ಕೆ ಕೈ ಚಾಚುವ, ಬೆದರಿಕೆ ಹಣ ಕೀಳುವ ದುಷ್ಟ ದಂಧೆಯನ್ನು ನಡೆಸಿಕೊಂಡು ಬರುತ್ತಿದ್ದ ರಾಜ್ಯದ 13 ಮಂದಿ ಕಡುಭ್ರಷ್ಟ ಅಧಿಕಾರಿಗಳ (Corrupt officers) ಮೇಲೆ ಮಂಗಳವಾರ ಲೋಕಾಯುಕ್ತ ದಾಳಿ (Lokayukta Raid) ನಡೆದಿದೆ. ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ಬೆಳಗ್ಗೆ ಈ ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಚೇರಿ ಮನೆಗಳಿಗೆ ದಾಳಿ ಮಾಡಿ ಕೋಟ್ಯಂತರ ರೂ. ನಗದು, ಅದಕ್ಕಿಂತಲೂ ದೊಡ್ಡ ಮೊತ್ತದ ಚಿನ್ನಾಭರಣ, ಅದನ್ನೂ ಮೀರಿದ ಆಸ್ತಿಪಾಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ರಾಜಧಾನಿ ಬೆಂಗಳೂರು, ಕೋಲಾರ, ಬೀದರ್, ಕಲಬುರ್ಗಿ, ಯಾದಗಿರಿ. ಕೊಪ್ಪಳ, ಮೈಸೂರು, ರಾಮನಗರ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ ಹೀಗೆ 10 ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ ಅಖಾಡಕ್ಕಿಳಿದ ಲೋಕಾಯುಕ್ತ ಅಧಿಕಾರಿಗಳು ಚಳಿಯಲ್ಲಿ ಬೆಚ್ಚಗೆ ಮಲಗಿದ್ದ 13 ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. 63ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲದಲ್ಲೇ ದಾಳಿ ನಡೆಸಿರೋ ಲೋಕಾಯುಕ್ತ ಟೀಂ ಅಧಿಕಾರಿಗಳು ಆದಾಯ ಮೀರಿ ಗಳಿಸಿದ್ದ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ದಾಳಿಗೆ ಒಳಗಾದ ಅಧಿಕಾರಿಗಳು ಇವರು
 1. ಚನ್ನಕೇಶವ H.D, EE, ಬೆಸ್ಕಾಂ, ಜಯನಗರ, ಉಪವಿಭಾಗ, ಬೆಂಗಳೂರು
 2. ಸುಧಾಕರ್ ರೆಡ್ಡಿ , ವಿಜಿಲೆನ್ಸ್ EE ಬೆಸ್ಕಾಂ, ಬೆಂಗಳೂರು
 3. H.S.ಕೃಷ್ಣಮೂರ್ತಿ, ಕಣ್ಮಿಣಿಕೆ ಹಾ.ಉ.ಸ.ಸಂಘ, ಕುಂಬಳಗೋಡು
 4. H.D.ನಾರಾಯಣ ಸ್ವಾಮಿ, ನಿವೃತ್ತ ವೈಸ್ ಚಾನ್ಸಲರ್, ಕರ್ನಾಟಕ ಪಶುವೈದ್ಯಕೀಯ ವಿವಿ, ಬೀದರ್
 5. ಸುನೀಲ್ ಕುಮಾರ್, ಸಹಾಯಕ(ಹೊರಗುತ್ತಿಗೆ), ಹಣಕಾಸು ಕಚೇರಿ, ಕರ್ನಾಟಕ ಪಶುವೈದ್ಯಕೀಯ ವಿವಿ, ಬೀದರ್
 6. ಡಾ.ಪ್ರಭುಲಿಂಗ್, ಜಿಲ್ಲಾ ಆರೋಗ್ಯಾಧಿಕಾರಿ ಯಾದಗಿರಿ
 7. ಬಿ ಮಾರುತಿ, RFO, ಆನೆಗುಂಡಿ ಡಿವಿ, ಪ್ರಾದೇಶಿಕ ಶ್ರೇಣಿ, ಗಂಗಾವತಿ, ಕೊಪ್ಪಳ
 8. ಚಂದ್ರಶೇಖರ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ, ಬಳ್ಳಾರಿ
 9. ಶರಣಪ್ಪ, ಆಯುಕ್ತರು, ನಗರಸಭೆ, ಯಾದಗಿರಿ.
 10. ಮಹದೇವ ಸ್ವಾಮಿ M S, ಉಪನ್ಯಾಸಕ, ಸ.ಪ್ರ.ದ.ಕಾಲೇಜು, ನಂಜನಗೂಡು
 11. ತಿಮ್ಮರಾಜಪ್ಪ, EE, KRDL, ವಿಜಯಪುರ ಜಿಲ್ಲೆ. (ಪ್ರಸ್ತುತ ಬೆಳಗಾವಿಯಲ್ಲಿ ಇಇ)
 12. ಮುನೇಗೌಡ ಎನ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ
 13. ಬಸವರಾಜ, ಸ್ಟೋರ್ ಕೀಪರ್, ಗ್ರೇಡ್-2, ಓ & ಎಂ ಸಿಟಿ ವಿಭಾಗ ಅಂಗಡಿ, ಹೆಸ್ಕಾಂ, ಹುಬ್ಬಳ್ಳಿ, (ನಿವೃತ್ತ)
ಬೆಸ್ಕಾಂ ಇಇ ಚನ್ನಕೇಶವ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ

ಬೆಂಗಳೂರಿನ ಜಯನಗರ ಉಪವಿಭಾಗ ಇಇ ಬೆಸ್ಕಾಂ ಚೆನ್ನಕೇಶವ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ. ಅಮೃತಹಳ್ಳಿಯ ಮಿಥುನ ಅಪಾರ್ಟಮೆಂಟ್‌ನಲ್ಲಿರುವ ಚೆನ್ನಕೇಶವ ಮನೆಗೆ ಬೆಳಗ್ಗೆ 6 ಗಂಟೆಗೆ ಮೂರು ವಾಹನದಲ್ಲಿ ಬಂದಿದ್ದ 13 ಜನ ಅಧಿಕಾರಿಗಳು ದಾಳಿ ನಡೆಸಿದರು.

ಈ ದಾಳಿಯಲ್ಲಿ 6 ಲಕ್ಷ ನಗದು, 3ಕೆಜಿ ಚಿನ್ನ, 28 ಕೆಜಿ ಬೆಳ್ಳಿ, 25 ಲಕ್ಷ ಮೌಲ್ಯದ ಡೈಮಂಡ್ ಜುವೆಲರಿ, ಸೇರಿ 1.5 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿದೆ. ಆತ ಯಲಹಂಕ ಬಳಿ ಕಮರ್ಷಿಯಲ್ ಕಟ್ಟಡ ನಿರ್ಮಿಸುತ್ತಿರುವುದು ಕೂಡಾ ಪತ್ತೆಯಾಗಿದೆ. ದಾಳಿ ವೇಳೆ ಶಾಕ್‌ಗೆ ಒಳಗಾದ ಚೆನ್ನಕೇಶವಗೆ ಬಿಪಿ ಹೆಚ್ಚಾಗಿ ಆರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ಅಧಿಕಾರಿಗಳು ಮಾತ್ರೆಗಳನ್ನು ತಂದುಕೊಟ್ಟ ಬಳಿಕ ಸುಧಾರಿಸಿಕೊಂಡು ಅಧಿಕಾರಿಗಳ ಪರಿಶೀಲನೆಗೆ ಸಹಕಾರ ನೀಡಿದ್ದಾರೆ. ಹಾಗೆ ಚನ್ನಕೇಶವ ಸೋದರ ಮಾನವ ಮನೆ ಮೇಲೂ ದಾಳಿ ನಡೆದಿದ್ದು ಸುಮಾರು 1 ಕೋಟಿ ನಗದು ಸಿಕ್ಕಿದೆ.

ಬೆಸ್ಕಾಂ ಜಾಗೃತ ದಳದ ಅಧಿಕಾರಿ ಸುಧಾಕರ್‌ ರೆಡ್ಡಿ ಆಸ್ತಿ ನೋಡಿದ್ರೆ…

ಬೆಸ್ಕಾಂ ಜಾಗೃತ ದಳದ ಅಧಿಕಾರಿ ಸುಧಾಕರ್ ರೆಡ್ಡಿಯ ಬೆಂಗಳೂರಿನ ಮನೆ, ಚಿಂತಾಮಣಿಯ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸುಧಾಕರ್‌ಗೆ ಸೇರಿದ ಐದು ಕಡೆ ದಾಳಿ ನಡೆದಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಸಾತನೂರು ಬಳಿಯ ನಿವಾಸಕ್ಕೆ ಲೋಕಾಯುಕ್ತ ಎಸ್ ಪಿ ವಂಶಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಹಾಗೆ ಈ ದಾಳಿಯಲ್ಲಿ ಸುಧಾಕರ್ ರೆಡ್ಡಿಗೆ ಸಂಬಂಧಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ಗ್ರಾಮೀಣ ಪ್ರದೇಶದಲ್ಲಿ 12 ಎಕರೆ ಕೃಷಿ ಜಾಗ ಪತ್ತೆಯಾಗಿದ್ದು, ಸುಧಾಕರ್ ಪತ್ನಿ ಟೆಲಿ ಇಂಡಿಯನ್ ಪ್ರೈವೆಟ್‌ ಲಿಮಿಟೆಡ್ ಎಂಬ ಕಂಪನಿಯಲ್ಲಿ ನಿರ್ದೇಶಕರಾಗಿದ್ದು, ಆ ಕಂಪನಿಯಲ್ಲಿ 700 ರಿಂದ 800ರಷ್ಟು ಜನ ಕೆಲಸ ಮಾಡುತ್ತಿದ್ದಾರಂತೆ. ಸದ್ಯ ಕಂಪನಿಯ ಮೇಲೂ ಸಹ ದಾಳಿ ನಡೆಸಿದ್ದು, ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.

ಕೃಷ್ಣ ಮೂರ್ತಿ ಕಣಿಮಿಣಿಕೆ: ಬೆಳ್ಳಗಿರೋದೆಲ್ಲ ಹಾಲಲ್ಲ!

ಕುಂಬಳಗೋಡು ಹಾಲು ಸಹಕಾರ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್ ಎಸ್ ಕೃಷ್ಣಮೂರ್ತಿಯ ಕಣಿಮಿಣಿಕೆ ನಿವಾಸ ಸೇರಿದಂತೆ 5 ಕಡೆ ಲೋಕಾ ದಾಳಿ ನಡೆದಿದೆ. 16 ಸಾವಿರ ಸಂಬಳ ಇದ್ರೂ ಕೃಷ್ಣಮೂರ್ತಿ ಕೋಟಿ ಕೋಟಿ ಸಂಪಾದನೆ ಮಾಡಿದ್ದು, ಪ್ರತಿ ತಿಂಗಳು ಸೊಸೈಟಿಗೆ ಎರಡು ಲಕ್ಷ ಆದಾಯ ಇದ್ದರು ಕೇವಲ ಹತ್ತು ಸಾವಿರ ತೋರಿಸಿರುವ ಆರೋಪ ಕೇಳಿಬಂದಿದೆ. ರೈತರಿಗೆ ವಂಚಿಸಿ ಹಣ ಮಾಡಿದ್ದು ದಾಳೆ ವೇಳೆ ಬೆಳಕಿಗೆ ಬಂದಿದ್ದು, ಕೆಜಿ ಕೆಜಿ ಬಂಗಾರದ ಜೊತೆ 77 ಬಾಡಿಗೆ ಮನೆಯ ಮಾಲೀಕ ಈ ಕೃಷ್ಣಮೂರ್ತಿ ಅನ್ನೋದು ಬೆಳಕಿಗೆ ಬಂದಿದೆ.

ಕೆಆರ್‌ಐಡಿಎಲ್ ಸೂಪರಿಂಟೆಂಡೆಂಟ್ ಇಂಜಿನಿಯರ್‌ ತಿಮ್ಮರಾಜಪ್ಪ

ಕೆಆರ್‌ಐಡಿಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಆಗಿರುವ ತಿಮ್ಮರಾಜಪ್ಪ ಮೊದಲು ಬೆಂಗಳೂರಿನಲ್ಲಿದ್ದು ಇತ್ತೀಚೆಗಷ್ಟೇ ಬೆಳಗಾವಿಗೆ ನಿಯೋಜನೆಗೊಂಡಿದ್ದಾರೆ. ಅವರಿಗೆ ಸೇರಿದ ಬೆಳಗಾವಿಯ ಶಿವಬಸವನಗರದ ನಿವಾಸಕ್ಕೆ ಳಗಾವಿ ಲೋಕಾಯುಕ್ತ ಡಿವೈಎಸ್‌ಪಿ ಭರತರೆಡ್ಡಿ ನೇತೃತ್ವದಲ್ಲಿ ದಾಳಿಮಾಡಲಾಗಿದೆ. ತಿಮ್ಮರಾಜಪ್ಪ ಕೋಲಾರ ಜಿಲ್ಲೆಯ ಕೆಜಿಎಫ್‌ ತಾಲೂಕಿನ ಮಹದೇವಪುರ ಗ್ರಾಮದವರು. ಅವರಿಗೆ ಸೇರಿದ ಬೆಂಗಳೂರಿನ ಐದು ಮನೆ ಮತ್ತು ಬೆಳಗಾವಿಯ ಮನೆಗಳಿಗೆ ದಾಳಿ ನಡೆದಿದೆ.

 1. ಕಲ್ಯಾಣ್ ನಗರ, ಚಳ್ಳಕೆರೆ ಮುಖ್ಯ ರಸ್ತೆಯಲ್ಲಿ ಮನೆ.
 2. ಬೆಂಗಳೂರಿನ ಹೂಡಿಯಲ್ಲಿರುವ ಅಪಾರ್ಟ್‌ಮೆಂಟ್.
 3. ಡಾಲರ್ಸ್ ಕಾಲೋನಿ ಮನೆ
 4. ವಿಲ್ಲಾ, ಟಿಎಂಆರ್ ಆರ್ಚೇಡ್, ಸಂಪಿಗೆಹಳ್ಳಿ,
 5. ಮಹದೇವಪುರ ಗ್ರಾಮದಲ್ಲಿ ಗ್ರಾಮದ ಮನೆ, ಕೆಜಿಎಫ್
 6. ಬೆಳಗಾವಿಯಲ್ಲಿ ಪ್ರಸ್ತುತ ವಾಸಿಸುತ್ತಿರುವ ಮನೆ (ಬಾಡಿಗೆ) ವಾಸ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ Twitter Facebook LinkedIn WhatsApp Drago Fruit; ಡ್ರಾಗನ್ ಫ್ರೂಟ್ ಒಂದು ಆರೋಗ್ಯದಾಯಕ ಹಣ್ಣು. ‘ಸಿ’ ಮತ್ತು ‘ಬಿ’