ನಟ ಶಿವರಾಜ್ ಕುಮಾರ್ ಗೆ ಲೋಕಸಭಾ ಟಿಕೆಟ್ ಆಫರ್; ಏನಂದ್ರು ಗೊತ್ತಾ ಈ ನಟ?
ಬೆಂಗಳೂರು: “ಚುನಾವಣಾ ರಾಜಕೀಯಕ್ಕೆ ನಾನು ಬರಲ್ಲ’ ಎಂದು ನಟ ಶಿವರಾಜ್ ಕುಮಾರ್ ಬಹಿರಂಗವಾಗಿ ಸ್ಪಷ್ಟಪಡಿಸಿದ್ದಾರೆ.
ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಾಗೃತ ಸಮಾವೇಶದಲ್ಲಿ ಮಾತನಾಡುತ್ತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿವರಾಜ್ ಕುಮಾರ್ ಅವರಿಗೆ ಲೋಕಸಭೆ ಟಿಕೆಟ್ ಆಫರ್ ಕೊಟ್ಟರು. ಅದೇ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಆ ಆಫರ್‌ಅನ್ನು ನಯವಾಗಿ ನಿರಾಕರಿಸಿದರು.
ಸಮಾವೇಶದಲ್ಲಿ ಮಾತನಾಡುತ್ತ ಡಿ.ಕೆ. ಶಿವಕುಮಾರ್, ನೀನು ರೆಡಿಯಾಗಪ್ಪ ಪಾರ್ಲಿಮೆಂಟ್‌ಗೆ ನಿಂತುಕೊಳ್ಳೋಕೆ. ನಿನಗೆ ಎಲ್ಲಿ ಬೇಕೋ ಅಲ್ಲಿ ಸೀಟು ಕೊಡುತ್ತೇನೆ ಎಂದು ಶಿವರಾಜ್ ಕುಮಾರ್‌ಗೆ ಹೇಳಿದ್ದೆ. ಇಲ್ಲ ಐದಾರು ಸಿನಿಮಾ ಒಪ್ಪಿಕೊಂಡು ಬಿಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ. ಸಿನಿಮಾ ಯಾವಾಗ ಬೇಕಾದರೂ ಮಾಡಬಹುದು, ಪಾರ್ಲಿಮೆಂಟ್‌ಗೆ ಹೋಗುವ ಯೋಗ ಸುಲಭವಾಗಿ ಬರುವುದಿಲ್ಲ. ಆ ಯೋಗ ಮನೆ ಬಾಗಿಲಿಗೆ ಬಂದಿದೆ. ಅವಕಾಶ ತಪ್ಪಿಸಿಕೊಳ್ಳಲು ಹೋಗ ಬೇಡಿ ಎಂದು ಡಿ.ಕೆ.ಶಿವಕುಮಾರ್ ಸಮಾವೇಶದಲ್ಲಿ ಬಹಿರಂಗವಾಗಿ ಶಿವರಾಜ್ ಕುಮಾರ್‌ಗೆ ಎಂಪಿ ಟಿಕೆಟ್ ಆಫರ್ ಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ನಮ್ಮ ತಂದೆ ಕೊಟ್ಟಿರುವ ಬಳವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಮ್ಮದೇನಿದ್ದರೂ ಮೇಕಪ್ ಹಾಕೋದು, ಸಿನಿಮಾ ಮಾಡೋದು. ರಾಜಕೀಯ ನಮಗೆ ಬೇಡ, ಅದನ್ನು ಮಾಡೋಕೆ ಬೇರೆಯವರು ಇದ್ದಾರೆ. ನನಗೆ ರಾಜಕೀಯ ಬೇಡ. ಆದರೆ, ನಾವು ಹೆಣ್ಣು ತೆಕ್ಕೊಂಡಿದ್ದು ಬಂಗಾರಪ್ಪ ಅವರ ಮಗಳನ್ನ. ಪತ್ನಿ ಗೀತಾ ಅವರಿಗೆ ಆಸಕ್ತಿಯಿದ್ದರೆ ರಾಜಕೀಯಕ್ಕೆ ಬರಲಿ. ಹೆಂಡ್ತಿ ಇಷ್ಟಪಡುತ್ತಿರುವುದನ್ನು ನೆರವೇರಿಸೋದು ಗಂಡನ ಕರ್ತವ್ಯ. ನಾನು ಅವರ ಬೆಂಬಲಕ್ಕೆ ಇರುತ್ತೇನೆ ಎಂದು ಹೇಳಿದರು.
ಶಾರೂಖ್, ಅಕ್ಷಯ್, ಅಜಯ್ ದೇವಗನ್‌ಗೆ ಕೇಂದ್ರ ಸರ್ಕಾರ ನೋಟಿಸ್
ನವದೆಹಲಿ: ತಂಬಾಕು (Tobacco) ಕಂಪನಿಗಳನ್ನು ಅನುಮೋದಿಸಿದ್ದಕ್ಕೆ ನಟರಾದ ಶಾರುಖ್ ಖಾನ್ (Shah Rukh Khan), ಅಕ್ಷಯ್ ಕುಮಾರ್ (Akshay Kumar) ಹಾಗೂ ಅಜಯ್ ದೇವಗನ್ (Ajay Devgn) ಅವರಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್ ನೀಡಿದೆ.
ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್‌ಬಿ ಪಾಂಡೆ ಅಕ್ಟೋಬರ್ 20 ರಂದು ತಂಬಾಕು ಕಂಪನಿಗಳನ್ನು ಅನುಮೋದಿಸಿದ್ದಕ್ಕಾಗಿ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಸಿಸಿಪಿಎ ನೋಟಿಸ್ ನೀಡಿದೆ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠಕ್ಕೆ ತಿಳಿಸಿದ್ದಾರೆ.
ವಕೀಲ ಮೋತಿಲಾಲ್ ಯಾದವ್ ಅವರು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾದ ಕೆಲವು ಉತ್ಪನ್ನಗಳು, ವಸ್ತುಗಳ ಜಾಹೀರಾತುಗಳು ಅಥವಾ ಅನುಮೋದನೆಗಳಲ್ಲಿ ಸೆಲೆಬ್ರಿಟಿಗಳು, ವಿಶೇಷವಾಗಿ ಪದ್ಮ ಪ್ರಶಸ್ತಿ ಪುರಸ್ಕೃತರು ಭಾಗವಹಿಸುವ ಕುರಿತು ಸಮಸ್ಯೆಗಳನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದರು.
ಸೆಪ್ಟೆಂಬರ್ 2022ರ ಆದೇಶವನ್ನು ಪಾಲಿಸದಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಿದ ಮನವಿಯಲ್ಲಿ ನ್ಯಾಯಾಲಯವು ಆಗಸ್ಟ್ 2023 ರಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ, ಮುಖ್ಯ ಆಯುಕ್ತರು ಮತ್ತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಇದರಲ್ಲಿ ಅರ್ಜಿದಾರರಿಗೆ ಭಾರತ ಸರ್ಕಾರವನ್ನು ಸಂಪರ್ಕಿಸಲು ತಿಳಿಸಲಾಗಿದೆ.
ನೋಟಿಸ್‌ಗೆ ಪ್ರತಿಕ್ರಿಯಿಸಿದ ಡೆಪ್ಯುಟಿ ಸಾಲಿಸಿಟರ್ ಜನರಲ್, ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಅವರಿಗೆ ಅಕ್ಟೋಬರ್ 20 ರಂದು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರ ಪೀಠಕ್ಕೆ ತಿಳಿಸಿದರು.
ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಒಪ್ಪಂದವನ್ನು ರದ್ದುಗೊಳಿಸಿದ್ದರೂ, ತಮ್ಮ ಜಾಹೀರಾತು ತೋರಿಸಿದ ತಂಬಾಕು ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು 2024ರ ಮೇ 9ಕ್ಕೆ ನಿಗದಿಪಡಿಸಿದೆ.