ಲೋಕಸಭಾ ಚುನಾವಣೆ 2024 : ಮಂಗಳೂರಿನಲ್ಲಿ ಮಧು ಬಂಗಾರಪ್ಪ ಮುಂದೆ ಹರೀಶ್ ಕುಮಾರ್, ರಮನಾಥ ರೈ ಬಗ್ಗೆ ಕಾರ್ಯಕರ್ತರ ಪ್ರಬಲ ಒಲವು!
ಮಂಗಳೂರು: ಮಂಗಳೂರು ಲೋಕಸಭಾ ಚುನಾವಣೆಯ 2024ರ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಬಗ್ಗೆ (Harish Kumar – Ramnath Rai) ಕಾರ್ಯಕರ್ತರೊಂದಿಗೆ ಸಂವಾದ ನಡೆಸಲು ಹೈಕಮಾಂಡ್ ನಿಂದ ನೇಮಕವಾದ ಚುನಾವಣಾ ವೀಕ್ಷಕರಾದ ಮಧು ಬಂಗಾರಪ್ಪ (Madhu Bangarappa) ಮಂಗಳೂರಿನ ಕದ್ರಿ ಡಿಸಿಸಿ ಕಾಂಗ್ರೆಸ್ ಕಚೇರಿಯಲ್ಲಿ ಅಭಿಪ್ರಾಯ ಅಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ (Harish Kumar) ಹಾಗೂ ಮಾಜಿ ಸಚಿವರಾದ ರಮನಾಥ ರೈ (Ramnath Rai) ಪರವಾಗಿ ಕಾರ್ಯಕರ್ತರಿಂದ ವ್ಯಾಪಕ ಒಲವು ವ್ಯಕ್ತವಾಗಿದೆ.
ಅಚ್ಚರಿಯ ರೀತಿಯಲ್ಲಿ ಬಹುತೇಕ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಹೆಸರನ್ನು ಪ್ರಸ್ತಾಪಿಸಿರುವುದು ಪಕ್ಷವನ್ನು ಅಚ್ಚರಿಗೆ ದೂಡಿದೆ. ಬಹುತೇಕ ಕಾರ್ಯಕರ್ತರು ಹರೀಶ್ ಕುಮಾರ್ ಅವರು ಎಲ್ಲರನ್ನು ಸರಿಸಮಾನವಾಗಿ ನಡೆಸಿಕೊಂಡು ಹೋಗುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಿ ಎಂಬ ಆಗ್ರಹವನ್ನು ಮಾಡಿದ್ದಾರೆ.
ಇನ್ನು ಮಾಜಿ ಸಚಿವ ರಮಾನಾಥ ರೈ ಪರವಾಗಿ ಬಂಟ್ವಾಳ ಹಾಗೂ ಇತರ ಭಾಗದ ಕಾರ್ಯಕರ್ತರು ಸಹ ಒಲವು ವ್ಯಕ್ತಪಡಿಸಿದ್ದಾರೆ. ಅವರು ಹಿರಿಯ ನಾಯಕರಿದ್ದಾರೆ, ಆ ಕಾರಣದಿಂದ ಅವರಿಗೆ ಟಿಕೆಟ್ ನೀಡುವಂತೆ ಹಲವು ಕಾರ್ಯಕರ್ತರು ಒಲವು ವ್ಯಕ್ತಪಡಿಸಿದ್ದಾರೆ.
ಹರೀಶ್ ಕುಮಾರ್ ಹಾಗೂ ರಮನಾಥ ರೈ ಪ್ರಬಲ ಅಭ್ಯರ್ಥಿಗಳಾಗಿ ಕಾರ್ಯಕರ್ತರ ಭಾಗದಿಂದ ಹೊರಹೊಮ್ಮಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.
ರಮನಾಥ ರೈ :
ರಮನಾಥ ರೈ ಅವರು 1985 ರಿಂದ ಬಂಟ್ವಾಳ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರು 2004 ರಲ್ಲಿ ಬಿ. ನಾಗರಾಜ ಶೆಟ್ಟಿಯವರ ವಿರುದ್ಧ ಸೋತರು, ಅದೇ ಬಂಟ್ವಾಳ ಕ್ಷೇತ್ರವನ್ನು 2008 ರಲ್ಲಿ ಗೆದ್ದರು. ಕರ್ನಾಟಕ ವಿಧಾನಸಭೆಯಲ್ಲಿ ಶಾಸಕರಾಗಿ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ವಿವಿಧ ಖಾತೆಗಳನ್ನು ಹೊಂದಿರುವ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ .
2013ರ ವಿಧಾನಸಭೆ ಚುನಾವಣೆಯಲ್ಲಿ ಬಂಟ್ವಾಳದಿಂದ ಗೆದ್ದಿದ್ದರು . ಅವರಿಗೆ ಅರಣ್ಯ, ಪರಿಸರ ಮತ್ತು ಪರಿಸರ ಖಾತೆ ಸಚಿವ ಸ್ಥಾನ ನೀಡಲಾಗಿದೆ. ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ ವಿರುದ್ಧ 15,000 ಮತಗಳ ಅಂತರದಿಂದ ಸೋತರು . 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜೇಶ್ ನಾಯಕ್ ಅವರನ್ನು ಎರಡನೇ ಬಾರಿಗೆ ಸೋಲಿಸುವಲ್ಲಿ ವಿಫಲರಾದರು. ಆದರೆ ಸೋಲಿನ ಅಂತರವನ್ನು ರೈ ಕಡಿಮೆ ಮಾಡಲು ಯಶಸ್ವಿಯಾದರು.
ಹರೀಶ್ ಕುಮಾರ್:
ಹರೀಶ್ ಕುಮಾರ್ ಈ ಮೊದಲು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ನಂತರ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಅಧಿಕಾರವಹಿಸಿದ್ದರು. ಜಿಲ್ಲಾಧ್ಯಕ್ಷರಾದ ನಂತರ ಅವರನ್ನು ವಿಧಾನ ಪರಿಷತ್ತಗೆ ಆಯ್ಕೆ ಮಾಡಲಾಗಿತ್ತು.