ಮಂಗಳವಾರ, ಮೇ 30, 2023
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ; ಪದಕಗಳನ್ನು ಗಂಗಾ ನದಿಗೆ ಎಸೆಯಲು ಕುಸ್ತಿಪಟುಗಳ ನಿರ್ಧಾರ-ಕ್ರೋಮಿಂಗ್ ಟ್ರೆಂಡ್ ಗೆ ಬಲಿಯಾದ 13 ವರ್ಷದ ಬಾಲಕಿ! ಬ್ಲೂವೇಲ್ ರೀತಿಯ ಈ ಗೇಮಿಂಗ್ ಯಾವುದು?-ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕಾಲ ಬೆರಳಿಗೆ ಹಾವು ಕಡಿದು ವಿದ್ಯಾರ್ಥಿನಿ ಸಾವು-ಮಹಿಳೆಯರಿಗೂ ಕಂಬಳದಲ್ಲಿ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ-ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ನಟಿ ಇರಾ ಖಾನ್‌-ಉಡುಪಿ : ಗೇರುಬೀಜ ಸಾಗಾಟದ ಲಾರಿ ಪಲ್ಟಿ ಅಪಾಯದಿಂದ ಪಾರಾದ ಚಾಲಕ-ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ರಾಮಲಿಂಗಾರೆಡ್ಡಿ ಘೋಷಣೆ-ಕಡಬದ ಯುವಕ ವಿದೇಶದಲ್ಲಿ ನೇಣಿಗೆ ಶರಣು
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

2 ತಿಂಗಳುಗಳ ಕಾಲ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ!

Twitter
Facebook
LinkedIn
WhatsApp
b130513006 banner size 550 269

ಮಂಗಳೂರು/ಉಡುಪಿ: ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು ಅಥವಾ ಸಾಧನಗಳನ್ನು ಉಪಯೋಗಿಸಿ ಎಲ್ಲ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಮೋಟರೀ ಕೃತ ದೋಣಿ ಹಾಗೂ ಸಾಂಪ್ರ ದಾಯಿಕ ದೋಣಿಗಳ ಮೂಲಕ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್‌ 1ರಿಂದ ಜುಲೈ 31ರ ವರೆಗೆ ಒಟ್ಟು 61 ದಿನಗಳ ಕಾಲ ನಿಷೇಧಿಸಲಾಗಿದೆ.

ದೋಣಿಯನ್ನು ಸಾಗಿಸುವ ಉದ್ದೇಶ ಕ್ಕಾಗಿಯೇ 10 ಅಶ್ವಶಕ್ತಿಯ ವರೆಗಿನ ಸಾಮರ್ಥ್ಯದ ಮೋಟರೀಕೃತ ಎಂಜಿನ್‌ ಹಾಗೂ ಸಾಂಪ್ರದಾಯಿಕ ಮತ್ತು ನಾಡದೋಣಿಗಳಲ್ಲಿ ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.

ಮೀನುಗಾರಿಕೆ ನಿಷೇಧದ ಸರಕಾರದ ಆದೇಶವನ್ನು ಉಲ್ಲಂಘಿಸುವ ದೋಣಿಗಳು ಮತ್ತು ಮೀನು ಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ-1986ರಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುವುದಲ್ಲದೆ ಒಂದು ವರ್ಷದ ಅವಧಿಗೆ ಡೀಸೆಲ್‌ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ.

ಕರಾವಳಿಯ ಎಲ್ಲ ಮೀನುಗಾರರ ಹಿತದೃಷ್ಟಿ ಯನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಿರುವುದರಿಂದ ಎಲ್ಲ ಮೀನು ಗಾರರು ಈ ಆದೇಶವನ್ನು ಪಾಲಿಸಿ ಸರಕಾರದೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು